ಅಕ್ರಮ ಮರಳು ಅಡ್ಡೆ ಮೇಲೆ ಲೋಕಾ ಅಽಕಾರಿಗಳ ದಾಳಿ. 
ಬಾಗಲಕೋಟೆ

ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲೇಬೇಕು

ಸಂತೋಷ ದೇಶಪಾಂಡೆ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿನ ಅಕ್ರಮ ಮರಳುಗಾರಿಕೆ ಹಾಗೂ ವಿವಿಧ ಕಾಯ್ದೆ, ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ನೇರವಾಗಿ ಲೋಕಾ ಅಽಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿರುವ ಘಟನೆ ಬಳಿಕ ಪ್ರಕರಣಗಳು ಯಾವ ಹಂತದಲ್ಲಿ ಇವೆ ಎನ್ನುವ ಸೋಮವಾರ ಲೋಕಾಯುಕ್ತ ಅಽಕಾರಿಗಳು ವಿವಿಧ ಇಲಾಖೆ ಅಽಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಎಂ.ಬಿ.ನAದಗಾAವಿ ನೇತೃತ್ವದಲ್ಲಿ ಅಽಕಾರಿಗಳು ದಾಳಿಯ ನಂತರದಲ್ಲಿ ಆಯಾ ಇಲಾಖೆಯವರು ಏನೆಲ್ಲ ಕ್ರಮಕ್ಕೆ ಮುಂದಾಗಿದ್ದಾರೆ. ಈಗ ಪ್ರಗತಿ ಹೇಗಿದೆ ಎಂದು ಮಾಹಿತಿ ಕಲೆ ಹಾಕಿದರು.
೨೫ ಸ್ಥಳಗಳಲ್ಲಿನ ೩೬ ಮರಳು ಪಾಯಿಂಟ್‌ಗಳ ಮೇಲೆ ಮೇ ೨೦ ರಂದು ಲೋಕಾಯುಕ್ತ ಅಽಕಾರಿಗಳ ತಂಡಗಳು ದಾಳಿ ನಡೆಸಿ, ಪತ್ತೆ ಮಾಡಿದ್ದ ಟಿಪ್ಪರ್‌ಗಳು, ಹಿಟ್ಯಾಚಿ, ಯಂತ್ರಿಕೃತ ದೋಣಿಗಳು, ಟ್ರ‍್ಯಾಕ್ಟರ್ ಹಾಗೂ ಜೆಸಿಬಿ ಜೊತೆಗೆ ಅನೇಕ ಸ್ಥಳದಲ್ಲಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಮರಳಿನ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವರೆಗೂ ಒಟ್ಟು ೧೭ ಪ್ರಕರಣಗಳು ಸಂಬAಽಸಿದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಉಳಿದ ಪ್ರಕರಣಗಳು ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಬಾದಾಮಿ ತಾಲೂಕಿನಲ್ಲಿ ಐದು ಕಡೆಗೆ ದಾಳಿ ನಡೆದಿದ್ದರೂ ಬರೀ ಒಂದು ಕೇಸ್ ಮಾತ್ರ ದಾಖಲಿಸಿದ್ದೇಕೆ ಎಂದು ಕೇಳಿದರು. ಆಗ ಬಾದಾಮಿ ತಾಲೂಕಿನಲ್ಲಿ ಮರಳುಗಾರಿಕೆಗೆ ಪರವಾನಿಗೆ ಪಡೆದುಕೊಂಡಿದ್ದಾರೆ ಎಂದು ತೇಪೆ ಹಚ್ಚಲು ಮುಂದಾದರು. ಪರವಾನಿಗೆ ಪಡೆದಿದ್ದರೂ ಅಲ್ಲಿ ಸಾಕಷ್ಟು ನಿಯಮಗಳು ಉಲ್ಲಂಘನೆ ಆಗಿವೆ. ಆ ಬಗ್ಗೆ ಪ್ರಕರಣ ದಾಖಲಿಸಬೇಕಲ್ವಾ? ಕೂಡಲೇ ಬಾಕಿ ಇರುವ ಮರ‍್ನಾಲ್ಕು ಪ್ರಕರಣಗಳನ್ನು ಇಂದೇ ದಾಖಲಿಸಿ ಎಂದು ಲೋಕಾಯುಕ್ತರು ಸೂಚನೆ ನೀಡಿದರು.
ಶೀಘ್ರದಲ್ಲೆ ವರದಿ ಸಲ್ಲಿಸಿ:
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಭೂಮಾಪನ ಇಲಾಖೆ, ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಇಲಾಖೆ ಅಽಕಾರಿಗಳಿಂದ ಕಳೆದ ೫ ದಿನಗಳಲ್ಲಿ ಆಗಿರುವ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ನಿಮ್ಮ ನಿಮ್ಮ ಇಲಾಖೆಗೆ ಸಂಬAಽಸಿದAತೆ ಅಕ್ರಮ ಮರಳುಗಾರಿಕೆ ಮತ್ತು ಪರವಾನಿಗೆ ಪಡೆದಿದ್ದರೂ ಅಲ್ಲಿ ಏನೆಲ್ಲ ನಿಯಮ ಉಲ್ಲಂಘನೆ ಆಗಿವೆ ಎನ್ನುವ ಬಗ್ಗೆ ಪರಿಶೀಲಿಸಿ, ಸಂಬAಽಸಿದವರು ವಿರುದ್ಧ ಕ್ರಮ ತೆಗೆದುಕೊಂಡಿರುವ ಬಗ್ಗೆ ಶೀಘ್ರದಲ್ಲೆ ವಿಸ್ತÈತ ವರದಿಯನ್ನು ಲೋಕಾಯುಕ್ತ ಕಚೇರಿಗೆ ಸಲ್ಲಿಸಬೇಕೆಂದು ತಿಳಿಸಿದರು.
ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿ :
ಇನ್ನು ಅಕ್ರಮ ಮರಳುಗಾರಿಕೆಗೆ ಸಂಬAಽಸಿದAತೆ ವಿವಿಧ ಸ್ಥಳಗಳಲ್ಲಿ ಮರಳು ಸಂಗ್ರಹಿಸಿರುವುದನ್ನು ದಾಳಿ ವೇಳೆ ಪತ್ತೆ ಮಾಡಲಾಗಿದೆ. ಆ ಮರಳು ಎಷ್ಟಿದೆ ಎಂದು ಸ್ಥಳಕ್ಕೆ ತೆರಳಿ ಅಳತೆ ಮಾಡಬೇಕು. ಜೊತೆಗೆ ಈ ಬಗ್ಗೆ ಮರಳು ಸಂಗ್ರಹದ ಸ್ಥಳಗಳು ಇರುವ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಖಾಸಗಿಯಾಗಿ ದೂರು ಸಲ್ಲಿಸಿ, ಬಳಿಕ ನ್ಯಾಯಾಲಯ ನಿರ್ದೇಶನದ ಮೇರಿಗೆ ಮುಂದಿನ ಕ್ರಮ ಹಾಗೂ ದಂಡವನ್ನು ವಸೂಲಿ ಮಾಡಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಽಕಾರಿಗಳಿಗೆ ಹೇಳಿದರು.
ಏನೆಲ್ಲ ಉಲ್ಲಂಘನೆ ಆಗಿದೆ...?
ಅಕ್ರಮ ಮರಳುಗಾರಿಕೆಯಿಂದ ಎಂಎAಆರ್‌ಡಿ ನಿಯಮ ಉಲ್ಲಂಘನೆ ಆಗಿದೆ. ಇದರ ಜೊತೆಗೆ ಉಳಿದಂತೆ ಇಲಾಖೆಗಳ ನಿಯಮಗಳು ಉಲ್ಲಂಘನೆ ಆಗಿರುವುದನ್ನು ಗುರುತಿಸಿ ಅವರು ಸಹ ಪ್ರಕರಣ ದಾಖಲಿಸಬೇಕು ಎನ್ನುವುದು ಲೋಕಾಯುಕ್ತ ಅಽಕಾರಿಗಳು ನೀಡಿರುವ ನಿರ್ದೇಶನವಾಗಿದೆ. ಮುಖ್ಯವಾಗಿ ಮರಳುಗಾರಿಕೆಗೆ ಪರವಾನಿಗೆ ಪಡೆದಿದ್ದರೂ ನಿಗದಿತ ಸ್ಥಳದ ಜೊತೆಗೆ ಹೆಚ್ಚುವರಿ ಜಾಗದಲ್ಲಿ ಮರಳು ಎತ್ತಿರುವುದರಿಂದ ಈ ಬಗ್ಗೆ ಸರ್ವೆ ಅಽಕಾರಿಗಳು ತಪಾಸಣೆ ಮಾಡಿ, ನಿಗದಿತ ಸಮಯ ಹೊರತುಪಡಿಸಿ ರಾತ್ರಿ ಹೊತ್ತು ಯಂತ್ರಗಳನ್ನು ಬಳಕೆ ಮಾಡಿ ಮರಳು ತೆಗೆಯಲಾಗಿದೆ. ಹಾಗೆಯೇ ಜಲಜರಗಳ ಜೀವಕ್ಕೆ ಕುತ್ತು ತಂದಿದ್ದು, ಆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಅರಣ್ಯ ಪ್ರದೇಶದಲ್ಲಿ ಇದ್ದರೆ ಅರಣ್ಯ ಕಾಯ್ದೆ ಉಲ್ಲಂಘನೆ, ರಸ್ತೆಗಳು ಹಾಳಾಗಿದ್ದರೆ ಲೋಕೋಪಯೋಗಿ ಇಲಾಖೆ ಅಽಕಾರಿಗಳು ರಸ್ತೆ ನಷ್ಟದ ಪ್ರಮಾಣ ಲೆಕ್ಕ ಮಾಡಿ ಮರಳುಗಾರಿಕೆ ನಡೆಸುವವರಿಂದ ವಸೂಲಿಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡಿ, ಪರಿಸರಕ್ಕೆ ದಕ್ಕೆ ಆಗಿರುವುದು. ಹೀಗೆ ಯಾವೆಲ್ಲ ನಿಯಮ ಉಲ್ಲಂಘನೆ ಆಗಿದೆಯೋ ಆ ಎಲ್ಲ ಇಲಾಖೆ ಮುಖ್ಯಸ್ಥರು ಸಂಬAಽಸಿದವರು ವಿರುದ್ಧ ಪ್ರಕರಣ ದಾಖಲಿಸಿ, ವರದಿ ಸಲ್ಲಿಸುವಂತೆ ಲೋಕಾಯುಕ್ತ ಅಽಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಲೋಕಾಯುಕ್ತ ಎಸ್ಪಿ ಎಂ.ಬಿ.ನAದಗಾAವಿ ಅವರ ಜೊತೆ ಲೋಕಾಯುಕ್ತ ಡಿಎಸ್ಪಿ ಸುರೇಶರೆಡ್ಡಿ, ಅಽಕಾರಿಗಳಾದ ಎನ್.ಬಿ.ಕಿಲಾರಿ, ಮಲ್ಲಿಕಾರ್ಜುನ ಬಿರಾದಾರ ಇದ್ದರು.