ಬಾಗಲಕೋಟೆ ನಗರದ ಅರುಂಧತಿ ಶಾಲೆಯ ನೂತನ ಕಟ್ಟಡವನ್ನು ಮಾಜಿ ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಲಕ್ಷ್ಮಣ ಯಂಕಂಚಿ, ಉಮೇಶ ಕಾರಜೋಳ, ಪೂರ್ಣಾನಂದ ಭಾರತಿ ಶ್ರೀಗಳು ಮತ್ತಿತರರು ಇದ್ದರು.
- ಗುಣಮಟ್ಟದ ಶಿಕ್ಷಣ ಅಗತ್ಯ
- ಮಾಜಿ ಶಾಸಕ ವೀರಣ್ಣ ಚರಂತಿಮಠ
ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ನಗರದಲ್ಲಿ ಈಚೆಗೆ ಅರುಂಧತಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಥೆ ಶೈಕ್ಷಣಿಕ ವಾತಾವರಣ ವೃದ್ಧಿಸುವ, ಸುಸಜ್ಜಿತ ಕಟ್ಟಡ ಹೊಂದಿರುವುದು ಆಶಾದಾಯಕ ಬೆಳವಣಿಗೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು, ಶಿಸ್ತು, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ಹೆಚ್ಚಿನ ಶಾಖೆಗಳನ್ನು ಹೊಂದಲಿ ಎಂದು ಶುಭ ಹಾರೈಸಿದರು.
ಕವಿವಿ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅವರು, ಮಕ್ಕಳ ಭವಿಷ್ಯಕ್ಕೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವೂ ಅಷ್ಟೆ ಅಗತ್ಯ ಎಂದರು.
ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಯಂಕಂಚಿ, ಸಂಸ್ಥೆ ಬೆಳೆದು ಬಂದ ದಾರಿ ವಿವರಿಸಿದರು. ಸಾನಿಧ್ಯ ವಹಿಸಿದ್ದ ಹಂಪಿ ಮಾತಂಗ ಪೀಠದ ಪೂರ್ಣಾನಂದ ಭಾರತಿ ಮಹಾಸ್ವಾಮಿಗಳು, ಯಂಕಂಚಿಯ ಖಾದ್ರಿ ಅವರು ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಚಂದ್ರಮ್ಮ ಯಂಕಂಚಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಯುವ ನಾಯಕ ಉಮೇಶ್ ಕಾರಜೋಳ, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಜಿಲ್ಲಾಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಗಳಾದ ಊ.ಗಿ.ಲಿಂಗಣ್ಣವರ ಮತ್ತಿತರರು ಇದ್ದರು.