ಬಾಗಲಕೋಟೆ ನವನಗರದ ಸರ್ಕಾರಿ ಉರ್ದು ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ನೂತನ ಆರಂಭಗೊAಡ ಪೂರ್ವ ಪ್ರಾಥಮಿಕ ತರಗತಿಗಳಿಗೆ ಗುರುವಾರ ಚಾಲನೆ ನೀಡಿದ ಶಾಸಕ ಉಮೇಶ ಮೇಟಿ, ಮಕ್ಕಳಿಗೆ ಅಲ್ಲಿನ ಮುಖ್ಯೋಪಾಧ್ಯಾಯರು ನೀಡಿದ್ದ ಉಚಿತ ಸಮವಸö, ಬ್ಯಾಗ್ ವಿತರಿಸಿದರು.
ಬಾಗಲಕೋಟೆ: ಮಕ್ಕಳಿಗೆ ಪ್ರಾಥಮಿಕ ಹಂತದಿAದಲೇ ಗುಣಾತ್ಮಕ, ಸ್ಪರ್ಧಾತ್ಮಕ ಶಿಕ್ಷಣ ನೀಡುವ ಮೂಲಕ ಅವರ ಉಜ್ವಲ ಭವಿಷ್ಯವನ್ನು ರೂಪಿಸಲು ಪಾಲಕರು, ಶಿಕ್ಷಕರು ಮುಂದಾಗಬೇಕೆAದು ಶಾಸಕ ಉಮೇಶ ಮೇಟಿ ತಿಳಿಸಿದರು.
ನವನಗರದ ಸೆಕ್ಟರ್ ನಂ.೧೩ ರಲ್ಲಿ ಇರುವ ಸರ್ಕಾರಿ ಉರ್ದು ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಗೊAಡ ಎಲ್‌ಕೆಜಿ-ಯುಕೆಜಿ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬುನಾದಿಯಿಂದಲೇ ಕಲ್ಪಿಸಿದರೆ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದರು.
ಸರ್ಕಾರಿ ಅಭಿವೃದ್ಧಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸರ್ಕಾರದಿಂದ ಕಲ್ಪಿಸಲು ಪ್ರಾಮಾಣಿಕ ಪ್ರಂiÀiತ್ನ ಮಾಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸಲು ಶಿಕ್ಷಕರು-ಪಾಲಕರು ಶ್ರಮವಹಿಸಬೇಕೆಂದು ತಿಳಿಸಿದರು.
ಮುಖ್ಯೋಪಾಧ್ಯಾಯ ನಜೀರಅಹ್ಮದ ಕಲಾದಗಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಸಮವಸ್ತç, ಶಾಲಾ ಬ್ಯಾಗಗಳನ್ನು ವಿತರಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ ರಫೀಕ ಟಕ್ಕಳಕಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹ ಜಿಲ್ಲಾ ಅಽಕಾರಿ ಭಾರತಿ ದಾಸೋಗ, ಉರ್ದು ಶಿಕ್ಷಣ ಸಂಯೋಜಕ ಹಾರೂನರಶೀದ್ ಸೌದಾಗರ, ಕನ್ನಡ ಶಿಕ್ಷಣ ಸಂಯೋಜಕ ಪ್ರಕಾಶ ಪಾಟೀಲ, ಕರ್ನಾಟಕ ರಾಜ್ಯ ಉರ್ದು ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಐ.ಡಿ.ಅತ್ತಾರ, ಸಿಆರ್‌ಪಿ ಸಲ್ಮಾ ಶಾನಲಿಪೀರಾ, ಇಬ್ರಾಹಿಂ ಮನಿಯಾರ ಮತ್ತಿತರರು ಇದ್ದರು.