ರಬಕವಿ ಹೆಸ್ಕಾಂ ಕಚೇರಿ ಎದುರು ಕೆಇಬಿ ಖಾಸಗೀಕರಣ ವಿರೋಧಿಸಿ ಹೆಸ್ಕಾಂ ಸಿಬ್ಬಂದಿ ಹಾಗೂ ರೈತರು ಬಹತ್ ಪ್ರತಿಭಟನೆ ನಡೆಸಿದರು. ಎಇಇ ವಿ.ಜಿ. ಪತ್ತಾರ, ಬಿ.ಕೆ. ಮಾಸ್ತಿ, ದಯಾನಂದ ಮುಳ್ಳೂರ, ಶಿವಲಿಂಗಪ್ಪ ಮುಧೋಳ, ಬಸವರಾಜ ಮರಡಿ, ಶಿವಾನಂದ ಸಣ್ಣಗುಬ್ಬಿ ಮತ್ತಿತರರಿದ್ದರು. 
ಬಾಗಲಕೋಟೆ

ಕೆಪಿಟಿಸಿಎಲ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಎಇಇ ವಿ.ಜಿ. ಪತ್ತಾರ ಎಚ್ಚರಿಕೆ
  • ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ
  • ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು
ರಬಕವಿ/ಬನಹಟ್ಟಿ: ನಗರದಲ್ಲಿ ಕರ್ನಾಟಕದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವ ಪ್ರಸ್ತಾವನೆ ವಿರೋಧಿಸಿ ಹೆಸ್ಕಾಂ ಸಿಬ್ಬಂದಿ ಹಾಗೂ ರೈತರು ಶುಕ್ರವಾರ ಬಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನೇತತ್ವ ವಹಿಸಿದ್ದ ಎಇಇ ವಿ.ಜಿ. ಪತ್ತಾರ ಮಾತನಾಡಿ, ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಬಿ.ಕೆ. ಮಾಸ್ತಿ ಮಾತನಾಡಿ, ಖಾಸಗಿ ಕಂಪನಿಗಳ ಪ್ರವೇಶದಿಂದ ಸಿಬ್ಬಂದಿಯ ಶಾಶ್ವತ ಉದ್ಯೋಗ ಹಾಗೂ ಪಿಂಚಣಿ ಸೌಲಭ್ಯಗಳಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ವಿದ್ಯುತ್ ಶಕ್ತಿ ಆಧುನಿಕ ಜೀವನದ ಅತ್ಯಗತ್ಯ ಮೂಲಸೌಕರ್ಯವಾಗಿದ್ದು, ಇದನ್ನು ಖಾಸಗಿ ವಲಯಕ್ಕೆ ಒಪ್ಪಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೀಗಾಗಿ ಇಲಾಖೆ ನೌಕರರು ಹಾಗೂ ಸಾರ್ವಜನಿಕರು ಒಟ್ಟಾಗಿ ಖಾಸಗೀಕರಣ ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ದಯಾನಂದ ಮುಳ್ಳೂರ, ಶಿವಲಿಂಗಪ್ಪ ಮುಧೋಳ, ಬಸವರಾಜ ಮರಡಿ, ಶಿವಾನಂದ ಸಣ್ಣಗುಬ್ಬಿ, ಸುರೇಶ ಸವದಿ, ಬಸವರಾಜ ಸಣ್ಣಕ್ಕಿ ಸೇರಿ ಅನೇಕ ರೈತ ಮುಖಂಡರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಬೆಲೆ ಏರಿಕೆಯ ಭೀತಿ

ವಿದ್ಯುತ್ ವಿತರಣೆಯ ಖಾಸಗೀಕರಣದಿಂದ ಗ್ರಾಹಕರಿಗೆ ವಿದ್ಯುತ್ ದರದಲ್ಲಿ ಗಣನೀಯ ಏರಿಕೆ ಸಂಭವಿಸುವ ಸಾಧ್ಯತೆ ಇದೆ. ಇದರಿಂದ ರೈತರು ಹಾಗೂ ಬಡವರಿಗೆ ಹೆಚ್ಚಿನ ಹೊರೆ ಆಗಲಿದೆ. ಪ್ರಸ್ತುತ ಸರ್ಕಾರಿ ಸಂಸ್ಥೆಗಳು ಕಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ಹಾಗೂ ರಿಯಾಯಿತಿ ವಿದ್ಯುತ್ ಸೌಲಭ್ಯಗಳು ಕಡಿತಗೊಳ್ಳುವ ಆತಂಕವಿದೆ ಎಂದು ಎಇಇ ವಿ.ಜಿ. ಪತ್ತಾರ ತಿಳಿಸಿದರು.