ಮಹಾಲಿಂಗಪುರ ಪಟ್ಟಣದ ವಾರ್ಡ್ಗಳಲ್ಲಿ ರಸ್ತೆ ಅಗೆದು ಬಿಟ್ಟುಹೋಗಿರುವ ಕಾಮಗಾರಿಯನ್ನು ಶಾಸಕ ಸಿದ್ದು ಸವದಿ ಪರಿಶೀಲಿಸಿದರು. ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲ, ಶೇಖರ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ ಇದ್ದರು. 
ಬಾಗಲಕೋಟೆ

ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನದ ಭರವಸೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿದ್ದು ಸವದಿ ವಾರ್ಡ್ಗಳಲ್ಲಿ ಸಂಚಾರ
ಮಹಾಲಿಂಗಪುರ: ಪಟ್ಟಣದಲ್ಲಿ ಗುರುವಾರ ಶಾಸಕ ಸಿದ್ದು ಸವದಿ ಸಂಚರಿಸಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಅವುಗಳ ಪರಿಹಾರಕ್ಕೆ ಭರವಸೆ ನೀಡಿದರು. ಪಟ್ಟಣದ ಗುರು ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ 20 ಮತ್ತು 21ನೇ ವಾರ್ಡ್ಗಳಿಗೆ ಬೆಂಬಲಿಗರೊಂದಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ 24/7 ಶುದ್ಧ ಕುಡಿಯುವ ನೀರಿನ ಯೋಜನೆಗಾಗಿ ಗುತ್ತಿಗೆದಾರರು ರಸ್ತೆ ಅಗೆದು ಮರುದುರಸ್ತಿ ಮಾಡದೇ ಬಿಟ್ಟಿರುವುದರಿಂದ ರಸ್ತೆ, ನೀರಿನ ಪೈಪ್‌ಗಳು ಹಾಗೂ ಚರಂಡಿಗಳು ಹಾಳಾಗಿ ಜನರಿಗೆ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕ ಸಿದ್ದು ಸವದಿ ಸಂಬAಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲೇ ಕರೆಸಿ ತಕ್ಷಣದಿಂದಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
ನಂತರ ಚನ್ನಗಿರಿಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ 5 ಲಕ್ಷ ರೂ. ಹಾಗೂ ಶರಣೆ ಸಿದ್ಧಾಯಿ ಮೂರ್ತಿ ನಿರ್ಮಾಣಕ್ಕೆ ಮತ್ತೊಂದು 5 ಲಕ್ಷ ರೂ.ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಲಮಾಣಿ ವಾರ್ಡ್ಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು.
ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲ, ಶೇಖರ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ರವಿಗೌಡ ಪಾಟೀಲ, ಶಿವಾನಂದ ಅಂಗಡಿ, ಮಲ್ಲು ದಲಾಲ, ಮಹೇಶ್ ಚಿಂಚಲಿ, ಚಂದ್ರು ನಾಯಕ, ಬಸವರಾಜ ಮಡಿವಾಳ, ಮಹೇಶ್ ಜಿಡ್ಡಿಮನಿ, ಶೇಖರ ಮಗದುಮ್ ಸೇರಿ ಹಲವರು ಉಪಸ್ಥಿತರಿದ್ದರು.