ಬಾದಾಮಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ನಿವತ್ತ ಪ್ರಾಚಾರ್ಯ ಪ್ರೊ. ಜಿ.ಬಿ. ಶೀಲವಂತರ ಆಯ್ಕೆ 
ಬಾಗಲಕೋಟೆ

ಸರ್ವಾಧ್ಯಕ್ಷರಾಗಿ ಪ್ರೊ. ಜಿ.ಬಿ. ಶೀಲವಂತರ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಬಾದಾಮಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ
  • ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ
  • ಲೇಖಕರಾಗಿ ನಲವತ್ತು ಕತಿಗಳನ್ನು ಅರ್ಪಿಸಿದ್ದಾರೆ
ಬಾದಾಮಿ : ಪಟ್ಟಣದ ಎಸ್.ವಿ.ಪಿ. ಸಂಸ್ಥೆಯ ಬಸವ ಭವನದಲ್ಲಿ ಮಾ. 2ರಂದು ನಡೆಯಲಿರುವ ಬಾದಾಮಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ನಿವತ್ತ ಪ್ರಾಚಾರ್ಯ ಪ್ರೊ. ಜಿ.ಬಿ. ಶೀಲವಂತರ ಆಯ್ಕೆಯಾಗಿದ್ದಾರೆ.
ಶ್ರೀಯುತರು ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ ಬಾದಾಮಿಯ ಎಸ್.ಎಸ್.ಬಿ.ಎಂ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ನಿವತ್ತರಾಗಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ಸ್ವತಂತ್ರ ಹಾಗೂ ಸಹ ಲೇಖಕರಾಗಿ ನಲವತ್ತು ಕತಿಗಳನ್ನು ಅರ್ಪಿಸಿದ್ದಾರೆ. ರಾಜಕೀಯ, ವ್ಯಕ್ತಿ ಚಿತ್ರಣ, ಕಲಾವಿದರ ಪರಿಚಯ ಲೇಖನಗಳು ಸ್ಪರ್ಧಾತ್ಮಕ ಸಂಚಿಕೆ, ದೈನಿಕ, ವಾರಪತ್ರಿಕೆ, ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಭಾರತ ಸಂವಿಧಾನ, ಸರಕಾರ ಮತ್ತು ರಾಜಕೀಯ, ಗಾಂಧೀಜಿಯವರನ್ನು ತಿಳಿಯೋಣ, ಪಾಶ್ಚಾತ್ಯ ರಾಜನೀತಿ ವಿವೇಚಕರು, ಅಂತಾರಾಷ್ಟ್ರೀಯ ಸಂಬಂಧ ಕತಿಗಳು. ಇವರ ಪಠ್ಯ ಕತಿಗಳನ್ನು ಕವಿವಿ ಧಾರವಾಡ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಮಾನ್ಯ ಮಾಡಿರುವರು. ಶ್ರೀ ಹಾನಗಲ್ಲ ಸದಾಶಿವ ಶಿವಯೋಗಿಗಳ ಜೀವನ ಚರಿತ್ರೆಯು ಇಪ್ಪತ್ತಕ್ಕಿಂತಲೂ ಹೆಚ್ಚು ಮುದ್ರಣಗಳನ್ನು ಕಂಡಿರುವುದು ವಿಶೇಷ.