ಬಾಗಲಕೋಟೆ ನಗರದಲ್ಲಿ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ೭.೨೦ ಕೋಟಿ ರೂ.ಗಳ ವೆಚ್ಚದ ವಿವಿಧ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗಳಿಗೆ ಗುರುವಾರ ಶಾಸಕ ಉಮೇಶ ಮೇಟಿ ಭೂಮಿ ಪೂಜೆ ನೆರವೇರಿಸಿದರು. 
ಬಾಗಲಕೋಟೆ

ಸುಗಮ ಸಂಚಾರಕ್ಕೆ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

ಸಂತೋಷ ದೇಶಪಾಂಡೆ
ಬಾಗಲಕೋಟೆ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಉಮೇಶ ಮೇಟಿ ತಿಳಿಸಿದರು.
೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ೭.೨೦ ಕೋಟಿ ರೂ.ಗಳ ವೆಚ್ಚದ ವಿವಿಧ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ೧೦೦ ಲಕ್ಷ ರೂ.ಗಳ ವೆಚ್ಚದ ತಾಲೂಕಿನ ಕಿರಸೂರದಿಂದ ಮುಗಳೊಳ್ಳಿ ಪು.ಕೇಂದ್ರ, ಕಡ್ಲಿಮಟ್ಟಿ ರೇಲ್ವೆ ಸ್ಟೇಶನ್ ಬೆನ್ನೂರ ಪು.ಕೆ ರಸ್ತೆತಿಂದ ೪.೫೦ ಕಿಮೀವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ, ೧೦೦ ಲಕ್ಷರೂ.ಗಳ ವೆಚ್ಚದ ಮುಚಖಂಡಿ ಕ್ರಾಸ್ ರಸ್ತೆಯಿಂದ ವ್ಯಾಯಾ ಹರಣ ಶಿಕಾರಿ ಕಾಲೋನಿ ಸರಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ ಮಾರ್ಗವಾಗಿ ಎನ್.ಎಚ್-೩೬೭ಗೆ ಹೊಂದಿಕೊಳ್ಳುವ ಬಸವೇಶ್ವರ ಸರ್ಕಲ್‌ವರೆಗೆ ೨.೨೦ ಕಿಮೀ ರಸ್ತೆ ಸುಧಾರಣೆಗೆ ಚಾಲನೆ ನೀಡಲಾಯಿತು.
ಅದೇ ರೀತಿ ೪೦೦ ಲಕ್ಷ ರೂ.ಗಳ ವೆಚ್ಚದ ಬಿಳಿಗಿರಿರಂಗನಬೆಟ್ಟ ರಾಹೆ-೫೭ಕ್ಕೆ ಕೂಡುವ ಸಿಕ್ಕೇರಿ ಹತ್ತಿರದ ಕೆ.ಎಚ್.ಬಿ ಬಡಾವಣೆಯಲ್ಲಿ ಆಂತರಿಕ ರಸ್ತೆಗಳ ಸುಧಾರಣೆ ಹಾಗೂ ೧೨೦ ಲಕ್ಷ ರೂ,ಗಳ ವೆಚ್ಚದ ಮತಕ್ಷೇತ್ರ ವ್ಯಾಪ್ತಿಯ ಕಮಗತಿ ಗ್ರಾಮದ ವಿಠೋಬಾ ದೇವಾಲಯದಿಂದ ಸೇವಾಲಾಲ್ ಶಾಲೆ ಮಾರ್ಗವಾಗಿ ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿ-೪೪ಕ್ಕೆ ಕೂಡುವ ೧ ಕಿಮೀ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಹಾಗೂ ಶಿರೂರ ಗ್ರಾಮದ ಹತ್ತಿರ ಇರುವ ಹೇಮರೆಡ್ಡಿ ಮಲ್ಲಮ್ಮ ದೇವಾಲಯದಿಂದ ರಾಜ್ಯ ಹೆದ್ದಾರಿ-೩೬೭ಕ್ಕೆ ಕೂಡುವ ೨೨೦ ಮೀಟರ ರಸ್ತೆಯನ್ನು ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಹಾಗೂ ನಗರ ಭಾಗದ ಜನರ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ದಿಗೆ ಕಾರ್ಯ ಕೈಗೊಳ್ಳಲಾಗಿದೆ. ಉತ್ತಮ ರಸ್ತೆ ವ್ಯವಸ್ಥೆಯು ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಪೂರಕವಾಗಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವುದು ಸರಕಾರದ ಬದ್ದತೆಯಾಗಿದೆ ಎಂದು ತಿಳಿಸಿದರು. ಗುತ್ತಿಗೆದಾರರು ಗುಣಮಟ್ಟದ ರಸ್ತೆ ಮಾಡುವುದರ ಜೊತೆಗೆ ನಿಗದಿತ ಅವಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿ.ಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಲಕ್ಷಿ÷್ಮÃ ಚೌಹಾನ್, ಬಾಗಲಕೋಟೆ ತಾಲೂಕಾ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಸಮಿತಿಯ ಅಧ್ಯಕ್ಷ ಎಸ್.ಎಂ.ರಾAಪುರ, ನಾಗರಾಜ ಹದ್ಲಿ, ಬಲರಾಮ ಪವಾರ್, ಲಕ್ಷ÷್ಮಣ ದಡ್ಡಿ, ನಿಂಗಪ್ಪ ಕೋಟಿ, ಸಿದ್ದಪ್ಪ ಸುನಗದ ಇದ್ದರು.