ಜಮಖಂಡಿಯ ವಿಜಯ ಸೌಹಾರ್ದ ಬ್ಯಾಂಕ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷ ಡಾ. ಸಂಗಮೇಶ ನಿರಾಣಿ ಮಾತನಾಡಿದರು. ಡಾ. ಎಚ್.ಜಿ. ದಡ್ಡಿ, ಆರ್.ಕೆ. ನಾಯಕ, ಡಾ. ಆರ್.ಎನ್. ಸೋನವಾಲ್ಕರ ಮತ್ತಿತರರಿದ್ದರು. ಉಪಸ್ಥಿತರಿದ್ದರು.
- ಸಂಗಮೇಶ ನಿರಾಣಿ ಹೇಳಿಕೆ
- ಜಮಖಂಡಿಯನ್ನು ಅಂಧಮುಕ್ತ ನಗರವನ್ನಾಗಿಸಲು ವಿಶೇಷ ಅಭಿಯಾನ
ಜಮಖಂಡಿ: ಲಯನ್ಸ್ ಸಂಸ್ಥೆಯ 57ನೇ ಅಧಿಕಾರ ಹಸ್ತಾಂತರ ಸಮಾರಂಭ ಜೂ. 28ರಂದು ನಗರದ ಬಸವ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಎಂ.ಪಿ. ತವನಪ್ಪಗೋಳ ತಿಳಿಸಿದರು.
ನಗರದ ವಿಜಯ ಸೌಹಾರ್ದ ಬ್ಯಾಂಕ್ ಸಭಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ಉದ್ಘಾಟಿಸಲಿದ್ದು, ಕೆಎಲ್‌ಇ ವೈದ್ಯಕೀಯ ನಿರ್ದೇಶಕ ಡಾ. ಮಲ್ಲಿಕಾರ್ಜುನ ಜಾಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಲಯನ್ಸ್ನ ವಸಂತಕುಮಾರ ಶೆಟ್ಟಿ ಅಽಕಾರ ಹಸ್ತಾಂತರ ಅಧಿಕಾರಿಯಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
2026-27ನೇ ಸಾಲಿಗೆ ಡಾ. ಸಂಗಮೇಶ ನಿರಾಣಿ ಅಧ್ಯಕ್ಷರಾಗಿ, ಸಂಗಮೇಶ ಕೌಜಲಗಿ ಕಾರ್ಯದರ್ಶಿಯಾಗಿ ಹಾಗೂ ಚಿನ್ಮಯ ಜಿರಲಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಜಂಟಿ ಕಾರ್ಯದರ್ಶಿಯಾಗಿ ರಮೇಶ ದೇವರವರ, ಟೇಲ್ ಟ್ವಿಸ್ಟರ್ ಆಗಿ ಮಹಾದೇವ ಮಲಕನ್ನವರ, ಲಯನ್ ಟೇಮರ್ ಆಗಿ ವಿನೋದ ದೇಶಪಾಂಡೆ, ಪ್ರಥಮ ಉಪಾಧ್ಯಕ್ಷರಾಗಿ ಡಾ. ವಿದ್ಯಾಧರ ಪತ್ತಾರ, ದ್ವಿತೀಯ ಉಪಾಧ್ಯಕ್ಷರಾಗಿ ನಿತಿನ ಹುಲ್ಯಾಳಕರ, ಕ್ಲಬ್ ಸರ್ವೀಸ್ ಚೇರ್‌ಪರ್ಸನ್ ಆಗಿ ಡಾ. ಗೋಪಾಲಕೃಷ್ಣ ಹವಲದಾರ, ಕ್ಲಬ್ ವಿಸ್ತರಣೆ ಹಾಗೂ ಸದಸ್ಯರ ಸೇರ್ಪಡೆ ಚೇರ್‌ಪರ್ಸನ್ ಆಗಿ ಶ್ರೀಶೈಲ ಕಲ್ಯಾಣಿ, ಎಲ್‌ಸಿಐಎಫ್ (ಐಅIಈ) ಕೋ- ಆರ್ಡಿನೇಟರ್ ಆಗಿ ಎಚ್.ಆರ್. ಮಹಾರಡ್ಡಿ, ಅಡ್ಮಿನಿಸ್ಟ್ರೆಟರ್ ಆಗಿ ಡಾ. ಆರ್.ಎನ್. ಸೋನವಾಲ್ಕರ, ಮಾರ್ಕೆಟಿಂಗ್ ಆಫೀಸರ್ ಆಗಿ ರಾಜಶೇಖರ ಅಕ್ಕಿ ಹಾಗೂ ಲೀಡರ್‌ಶಿಪ್ ಚೇರ್‌ಪರ್ಸನ್ ಆಗಿ ವಿಜಯ ಕಟಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಅಂಧಮುಕ್ತ ಜಮಖಂಡಿ ನಮ್ಮ ಗುರಿ
ಸಮಾಜಸೇವೆ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಜಾಗೃತಿಗೆ ಆದ್ಯತೆ ನೀಡಲಾಗುವುದು ಎಂದರು. ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಶಿಕ್ಷಣ ವೆಚ್ಚ ಭರಿಸುವ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಜಮಖಂಡಿಯನ್ನು ಅಂಧಮುಕ್ತ ನಗರವನ್ನಾಗಿಸುವ ಮಹತ್ವಾಕಾಂಕ್ಷಿ ಅಭಿಯಾನ ಕೈಗೊಳ್ಳುವ ಸಂಕಲ್ಪ ಹೊಂದಿರುವುದಾಗಿ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷ ಡಾ. ಸಂಗಮೇಶ ನಿರಾಣಿ ತಿಳಿಸಿದರು.
ಡಾ. ಎಚ್.ಜಿ. ದಡ್ಡಿ, ಆರ್.ಕೆ. ನಾಯಕ, ಡಾ. ಆರ್.ಎನ್. ಸೋನವಾಲ್ಕರ, ಕಾಡು ಮಾಳಿ, ಪ್ರಕಾಶ ಚೌರಡ್ಡಿ, ಪ್ರವೀಣ ಮೈಗೂರ, ರಾಜಶೇಖರ ಅಕ್ಕಿ ಸೇರಿ ಹಲವರು ಉಪಸ್ಥಿತರಿದ್ದರು.