ಬಾಗಲಕೋಟೆ ಮತ ಕ್ಷೇತ್ರದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿಗೆ ಗುರುವಾರ ಶಾಸಕ ಉಮೇಶ ಮೇಟಿ ಚಾಲನೆ ನೀಡಿದರು. ಮುತ್ತು ಜೋಳದ, ಹನಮಂತ ರಾಕುಂಪಿ, ಎಸ್.ಎನ್. ರಾಂಪೂರ ಮತ್ತಿತರರಿದ್ದರು. 
ಬಾಗಲಕೋಟೆ

ಸುಗಮ ಸಂಚಾರಕ್ಕೆ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಉಮೇಶ ಮೇಟಿ ಹೇಳಿಕೆ
  • 7.20 ಕೋಟಿ ರೂ. ಗಳ ವೆಚ್ಚದ ಕಾಮಗಾರಿಗೆ ಚಾಲನೆ
ಬಾಗಲಕೋಟೆ : ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಉಮೇಶ ಮೇಟಿ ತಿಳಿಸಿದರು.
ಬಾಗಲಕೋಟೆ ಕ್ಷೇತ್ರದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ 7.20 ಕೋಟಿ ರೂ.ಗಳ ವೆಚ್ಚದ ವಿವಿಧ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಉತ್ತಮ ರಸ್ತೆ ವ್ಯವಸ್ಥೆಯು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದ ಅವರು, ಗುಣಮಟ್ಟದ ರಸ್ತೆ ಮಾಡುವುದರ ಜೊತೆಗೆ ನಿಗದಿತ ಅವಽಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ 1 ಕೋಟಿ ರೂ. ವೆಚ್ಚದ ತಾಲೂಕಿನ ಕಿರಸೂರದಿಂದ ಮುಗಳೊಳ್ಳಿ ಪುನರ್ವಸತಿ ಕೇಂದ್ರ, ಕಡ್ಲಿಮಟ್ಟಿ ರೇಲ್ವೆ ಸ್ಟೇಶನ್ ಬೆನ್ನೂರ ಪು.ಕೆ. ರಸ್ತೆಯಿಂದ 4.50 ಕಿಮೀವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ, 1 ಕೋಟಿ ರೂ. ವೆಚ್ಚದ ಮುಚಖಂಡಿ ಕ್ರಾಸ್ ರಸ್ತೆಯಿಂದ ವ್ಯಾಯಾ ಹರಣ ಶಿಕಾರಿ ಕಾಲೋನಿ ಹೆಣ್ಣು ಮಕ್ಕಳ ಸರ್ಕಾರಿ ಪ್ರೌಢಶಾಲೆ ಮಾರ್ಗವಾಗಿ ಎನ್.ಎಚ್-367ಗೆ ಹೊಂದಿಕೊಳ್ಳುವ ಬಸವೇಶ್ವರ ಸರ್ಕಲ್‌ವರೆಗೆ 2.20 ಕಿಮೀ ರಸ್ತೆ ಸುಧಾರಣೆಗೆ ಚಾಲನೆ ನೀಡಲಾಯಿತು.
4 ಕೋಟಿ ರೂ. ವೆಚ್ಚದ ಬಿಳಿಗಿರಿ ರಂಗನಬೆಟ್ಟ ರಾಹೆ-57ಕ್ಕೆ ಕೂಡುವ ಶಿಕ್ಕೇರಿ ಹತ್ತಿರದ ಕೆಎಚ್‌ಬಿ ಬಡಾವಣೆಯಲ್ಲಿ ಆಂತರಿಕ ರಸ್ತೆಗಳ ಸುಧಾರಣೆ ಹಾಗೂ 1.20 ಕೋಟಿ ರೂ. ವೆಚ್ಚದ ಕಮತಗಿ ಗ್ರಾಮದ ವಿಠೋಬಾ ದೇವಾಲಯದಿಂದ ಸೇವಾಲಾಲ್ ಶಾಲೆ ಮಾರ್ಗವಾಗಿ ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿ-44ಕ್ಕೆ ಕೂಡುವ 1 ಕಿಮೀ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಹಾಗೂ ಶಿರೂರ ಗ್ರಾಮದ ಹತ್ತಿರ ಇರುವ ಹೇಮರಡ್ಡಿ ಮಲ್ಲಮ್ಮ ದೇವಾಲಯದಿಂದ ರಾಜ್ಯ ಹೆದ್ದಾರಿ-367ಕ್ಕೆ ಕೂಡುವ 220 ಮೀಟರ್ ರಸ್ತೆಯ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ನಗರಸಭೆ ಮಾಜಿ ಸದಸ್ಯೆ ಲಕ್ಷ್ಮಿ ಚೌವ್ಹಾಣ, ಬಾಗಲಕೋಟೆ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಸಮಿತಿ ಅಧ್ಯಕ್ಷ ಎಸ್.ಎಂ. ರಾಂಪೂರ, ಕಾಂಗ್ರೆಸ್ ಮುಖಂಡರಾದ ನಾಗರಾಜ ಹದ್ಲಿ, ಬಲರಾಮ ಪವಾರ್, ನಿಂಗಪ್ಪ ಕೋಟಿ, ಸಿದ್ದಪ್ಪ ಸುನಗದ ಇದ್ದರು.