ಬಾದಾಮಿ ನಗರದ ವೀರಪುಲಿಕೇಶಿ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದಲ್ಲಿ ಜೆಡಿಎಸ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಬಿಎಲ್‌ಎ-2 ಕಾರ್ಯಾಗಾರವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಉದ್ಘಾಟಿಸಿದರು. ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ, ನ್ಯಾಯವಾದಿ ಪ್ರದೀಪಕುಮಾರ ಎಸ್.ಬಿ. ತಾಲೂಕು ಅಧ್ಯಕ್ಷ ಹುಚ್ಚೇಶ ಹದ್ದನ್ನವರ, ಬಸವರಾಜ ಕುಂಬಾರ, ಹನಮಂತ ಸಂಗಟಿ ಶಿವು ಗೊರವರ, ನಗರ ಘಟಕದ ಅಧ್ಯಕ್ಷ ಪ್ರಕಾಶ ಕೋಟಿ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಹಿರೇಹಾರ, ಪ್ರಕಾಶ ಗಾಣಿಗೇರ ಇತರರಿದ್ದರು. 
ಬಾಗಲಕೋಟೆ

ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಆದ್ಯತೆ

ಪ್ರಮುಖ ಮುಖ್ಯಾಂಶಗಳು

  • ಹನಮಂತ ಮಾವಿನಮರದ ಮಾಹಿತಿ
  • ಬಿಎಲ್‌ಎ-2 ಕಾರ್ಯಾಗಾರಕ್ಕೆ ಚಾಲನೆ
  • ಪರಿಷ್ಕರಣೆ ಮೂಲಕ ನಕಲಿ, ಮತ ಹಾಗೂ ಅನರ್ಹ ಹೆಸರುಗಳನ್ನು ತೆಗೆದುಹಾಕಿ
ಬಾದಾಮಿ : ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯಿಂದ ನಿಖರ ಹಾಗೂ ಅರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ನಗರದ ವೀರಪುಲಿಕೇಶಿ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಬಿಎಲ್‌ಎ-2 ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಷ್ಕರಣೆ ಮೂಲಕ ನಕಲಿ, ಮತ ಹಾಗೂ ಅನರ್ಹ ಹೆಸರುಗಳನ್ನು ತೆಗೆದುಹಾಕಿ, ಅರ್ಹ ಮತದಾರರನ್ನು ಪಟ್ಟಿಯಲ್ಲಿ ಒಳಗೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಬಲಪಡಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಹಿಂದೆಯೂ ಎಸ್.ಐ.ಆರ್ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಮತ್ತೊಮ್ಮೆ ಪರಿಷ್ಕರಣೆ ನಡೆಯಲಿದೆ. ಈ ವೇಳೆ ಚುನಾವಣಾ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದು, ಬೂತ್‌ಮಟ್ಟದ ಏಜೆಂಟರು ಜಾಗತಿಯಿಂದ ಕಾರ್ಯನಿರ್ವಹಿಸಿ ಯಾವುದೇ ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ಗಮನಹರಿಸಬೇಕು ಎಂದು ಸೂಚಿಸಿದರು.
ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ, ನ್ಯಾಯವಾದಿ ಪ್ರದೀಪಕುಮಾರ ಎಸ್.ಬಿ. ಅವರು ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕುರಿತು ವಿವರವಾಗಿ ಕಾರ್ಯಾಗಾರದಲ್ಲಿ ಏಜೆಂಟರಿಗೆ ಮಾಹಿತಿ ನೀಡಿದರು.
ತಾಲೂಕು ಅಧ್ಯಕ್ಷ ಹುಚ್ಚೇಶ ಹದ್ದನ್ನವರ, ಬಸವರಾಜ ಕುಂಬಾರ, ಹನಮಂತ ಸಂಗಟಿ ಶಿವು ಗೊರವರ, ನಗರ ಘಟಕದ ಅಧ್ಯಕ್ಷ ಪ್ರಕಾಶ ಕೋಟಿ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಹಿರೇಹಾರ, ಪ್ರಕಾಶ ಗಾಣಿಗೇರ, ಬಾಲು ಹುನಗುಂಡಿ ಕೆರೂರ ನಗರ ಘಟಕದ ಅಧ್ಯಕ್ಷ ಟೊಪೇಶ ಬಾದಾಮಿ, ಗುಳೇದಗುಡ್ಡ ನಗರ ಘಟಕದ ಅಧ್ಯಕ್ಷ ರಾಘು ಚಳಗೇರಿ ಹಾಗೂ ಬಾದಾಮಿ ಮತಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ ಏಜೆಂಟರು ಉಪಸ್ಥಿತರಿದ್ದರು. ಈರಣ್ಣ ಶೇಖಾ ನಿರೂಪಿಸಿ, ವಂದಿಸಿದರು.