ಮಹಾಲಿಂಗಪುರದಲ್ಲಿ ಡಿ. ದೇವರಾಜ ಅರಸು ನಿಗಮದಿಂದ ಆಯ್ಕೆಯಾದ ಲಾನುಭವಿಗಳಿಗೆ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ಜಿ.ಎನ್. ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಶಾಸಕ ಸಿದ್ದು ಸವದಿ, ಬಸವರಾಜ ಚಮಕೇರಿ ಇತರರಿದ್ದರು. 
ಬಾಗಲಕೋಟೆ

ಮಹಿಳೆಯರ ಸ್ವಾವಲಂಬನೆಗೆ ಆದ್ಯತೆ

ಪ್ರಮುಖ ಮುಖ್ಯಾಂಶಗಳು

  • ಕೀರ್ತಿ ಗಣೇಶ ಜಿ.ಎನ್. ಹೇಳಿಕೆ
  • ದೇವರಾಜ ಅರಸು ನಿಗಮದಿಂದ ಉಚಿತ ಹೊಲಿಗೆ ಯಂತ್ರಗಳ ವಿತರಣೆ
  • ಮಹಿಳೆಯರು ಕೌಶಲವನ್ನು ಸ್ವ-ಉದ್ಯೋಗವಾಗಿ ಪರಿವರ್ತಿಸಿಕೊಂಡು ಕುಟುಂಬದ ಆರ್ಥಿಕ ಅಭಿವದ್ಧಿಗೆ ಕೊಡುಗೆ ನೀಡಬೇಕು.
ಮಹಾಲಿಂಗಪುರ:

ಮಹಿಳೆಯರು ಕೌಶಲವನ್ನು ಸ್ವ-ಉದ್ಯೋಗವಾಗಿ ಪರಿವರ್ತಿಸಿಕೊಂಡು ಕುಟುಂಬದ ಆರ್ಥಿಕ ಅಭಿವದ್ಧಿಗೆ ಕೊಡುಗೆ ನೀಡಬೇಕು ಎಂದು ಡಿ. ದೇವರಾಜ ಅರಸು ಅಭಿವದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ಜಿ.ಎನ್. ಹೇಳಿದರು.

ಪಟ್ಟಣದ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ಇತ್ತೀಚೆಗೆ ಡಿ.ದೇವರಾಜ ಅರಸು ಅಭಿವದ್ಧಿ ನಿಗಮದ ಅಧ್ಯಕ್ಷರ ವಿವೇಚನಾ ಕೋಟಾದಡಿ ತೇರದಾಳ ಮತಕ್ಷೇತ್ರದ ವಿವಿಧ ಗ್ರಾಮಗಳ 300ಕ್ಕೂ ಅಧಿಕ ಮಹಿಳಾ ಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ತೇರದಾಳ ಮತಕ್ಷೇತ್ರದಲ್ಲಿ ಹೊಲಿಗೆ ಯಂತ್ರಕ್ಕಾಗಿ ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಈ ಹಿಂದೆ 350 ಯಂತ್ರಗಳನ್ನು ವಿತರಿಸಲಾಗಿದೆ. ಇದೀಗ ಮತ್ತಷ್ಟು ಲಾನುಭವಿಗಳಿಗೆ ಯಂತ್ರಗಳನ್ನು ಒದಗಿಸುವ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಉದ್ಯೋಗದ ಅವಕಾಶ ಕಲ್ಪಿಸಲಾಗಿದೆ ಎಂದರು.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ವಿವಿಧ ಯೋಜನೆಗಳು ನೆರವಾಗುತ್ತಿದ್ದು, ಲಾನುಭವಿಗಳು ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸ್ವಂತ ಆದಾಯದ ಮೂಲ ರೂಪಿಸಿಕೊಳ್ಳಬೇಕು ಎಂದು ಕೀರ್ತಿ ಗಣೇಶ ಸಲಹೆ ನೀಡಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಜನಸೇವೆಯೇ ರಾಜಕೀಯದ ಪ್ರಮುಖ ಉದ್ದೇಶ. ದೇವರಾಜ ಅರಸು ಅಭಿವದ್ಧಿ ನಿಗಮದ ಮೂಲಕ ತಮ್ಮ ಕ್ಷೇತ್ರದ ಹೆಚ್ಚಿನ ಮಹಿಳೆಯರಿಗೆ ಹೊಲಿಗೆ ಯಂತ್ರ ದೊರೆತಿರುವುದು ಸ್ವಾಗತಾರ್ಹ. ಯಂತ್ರಗಳನ್ನು ಸ್ವ-ಉದ್ಯೋಗಕ್ಕೆ ಬಳಸಿಕೊಂಡು ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರು.
ನೇಕಾರ ಮುಖಂಡರಾದ ಮಲ್ಲಪ್ಪ ಭಾವಿಕಟ್ಟಿ, ಶಿವಲಿಂಗ ಟಿರ್ಕಿ ಹಾಗೂ ರವಿ ಬಾಡಗಿ ಮಾತನಾಡಿ, ತೇರದಾಳ ಮತಕ್ಷೇತ್ರದ ನೇಕಾರ ಮುಖಂಡರಿಗೆ ನೀಡಿದ್ದ ಭರವಸೆಯಂತೆ ಹೊಲಿಗೆ ಯಂತ್ರಗಳನ್ನು ವಿತರಿಸಿರುವ ಕೀರ್ತಿ ಗಣೇಶ ಅವರ ಕಾರ್ಯವನ್ನು ಜಂಟಿಯಾಗಿ ಶ್ಲಾಸಿದರು.
ಡಾ. ಎ.ಆರ್. ಬೆಳಗಲಿ, ಲಕ್ಕಪ್ಪ ಚಮಕೇರಿ, ಮಹಾದೇವಪ್ಪ ಬರಗಿ, ಬಸವರಾಜ ಚಮಕೇರಿ, ಶ್ರೀಪಾದ ಗುಂಡಾ, ಆನಂದ ಹಟ್ಟಿ, ಶಂಕರಗೌಡ ಪಾಟೀಲ, ಮಲ್ಲು ದಲಾಲ, ಮಹಾಲಿಂಗ ಕುಳ್ಳೊಳ್ಳಿ, ಗುರುಪಾದ ಅಂಬಿ, ಶೀಲಾ ಭಾವಿಕಟ್ಟಿ, ಮಾಲಾ ಭಾವಲತ್ತಿ, ವಿನೋದ ಸಿಂಪಿ, ವಿಜಯಕುಮಾರ ಸಬಕಾಳೆ, ಅಪ್ಪಾಸಾಬ ನಾಲಬಂದ ಸೇರಿ ಹಲವರು ಉಪಸ್ಥಿತರಿದ್ದರು.