ಬಾಗಲಕೋಟೆಯ ಆರ್‌ಎಸ್‌ಎಸ್ ಕಾರ್ಯಾಲಯದಲ್ಲಿ ಭಾನುವಾರ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಮಹರ್ಷಿ ನಾರದ ಜಯಂತಿಯಲ್ಲಿ ನಾರದ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಚಾಲನೆ ನೀಡಲಾಯಿತು. ಸಾಮಾಜಿಕ ಕಾರ್ಯಕರ್ತ ಶರಣು ಹೀರಾಪುರ, ಪತ್ರಕರ್ತ ಸುಶೀಲೇಂದ್ರ ಕುಂದರಗಿ, ಸಂಘದ ಚಂದ್ರಶೇಖರ ದೊಡ್ಡಮನಿ ಮತ್ತಿತರರು ಇದ್ದರು.
ಬಾಗಲಕೋಟೆ: ಪತ್ರಿಕೆಗಳಲ್ಲಿ ಮಾನವೀಯ ಮೌಲ್ಯಗಳ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ಇರಬೇಕು. ಅಂತ ಸುದ್ದಿಗಳ ಮೂಲಕ ಸಮಾಜದಲ್ಲಿ ಸ್ವಾಸ್ತ್ಯ ಕಾಪಾಡುವಂತಹ ವಾತವರಣ ಸೃಷ್ಟಿಯಾಗಬೇಕಾಗಿದೆ. ರಾಜಕೀಯ ವ್ಯಕ್ತಿಗಳ ಹೇಳಿಕೆ, ಸನ್ಮಾನದಂತಹ ಕಾರ್ಯಕ್ರಮಗಳೇ ಪತ್ರಿಕೆಗಳಿಗೆ ಹೂರಣ ಆಗಬಾರದು ಎಂದು ವಿಜಯಪುರದ ಸಾಮಾಜಿಕ ಕಾರ್ಯಕರ್ತರ ಶರಣು ಹೀರಾಪುರ ತಿಳಿಸಿದರು.
ನಗರದ ದೀಪಂ ಕಾಲೋನಿಯಲ್ಲಿರುವ ಸಂಘಮಿತ್ರ ಆರ್‌ಎಸ್‌ಎಸ್ ಕಾರ್ಯಾಲಯದ ಸಭಾಭವನದಲ್ಲಿ ಭಾನುವಾರ ಸೇವಾ ಭಾರತಿ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಆದ್ಯ ಪತ್ರಕರ್ತ ಮಹರ್ಷಿ ನಾರದ ಜಯಂತಿಯಲ್ಲಿ ಮಾತನಾಡಿದರು.
ಸುಗಮ ಆಡಳಿತ ಹೇಗೆ ನಡೆಸುವುದು, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಮಾಜಕ್ಕೆ ಹಿತವನ್ನು ನಾರದ ಮಹರ್ಷಿಗಳು ಬಯಸಿದ್ದರು ಎಂದು ಉಲ್ಲೇಖವಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಲು ಹಾಗೂ ವೀಕ್ಷಕರು ಹೆಚ್ಚಿಗೆ ನೋಡುತ್ತಾರೆ ಎಂದು ವಿಡಿಯೋ ಮಾಡುವವರು ಅಪಾಯದಲ್ಲಿದ್ದವರನ್ನು ಬದುಕಿಸುವತ್ತ ಹೆಚ್ಚು ಕೇಂದ್ರೀಕರಣ ಮಾಡಿದರೆ ಉತ್ತಮ. ವಿಡಿಯೋ ಮಾಡುವಂತಹ ವ್ಯಕ್ತಿಗೂ ಘಟನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯು ಇದೆ ಎಂದರು.
ಇತ್ತೀಚಿಗೆ ಸಾಮಾಜಿಕ ಜಾಲತಾಣ, ಡಿಜಿಟಲ್ ಯುಗದಲ್ಲಿಯೂ ವೇಗವಾಗಿ ಪತ್ರಿಕಾ ರಂಗ ಬೆಳೆಯುತ್ತಿದೆ. ಓದುಗರಿಗೆ ಉತ್ತಮ ಸಂವಹನ ಮಾಧ್ಯಮ ಪ್ರಿಂಟ್ ಮೀಡಿಯಾ ಆಗಿದೆ. ಪ್ರತಿಯೊಂದು ಹೇಳಿಕೆ, ವಿಷಯಗಳು ದಾಖಲೆ ರೂಪದಲ್ಲಿ ಸಿಗಬೇಕಾದರೆ ಅದು ಮುದ್ರಣ ಮಾಧ್ಯಮದಿಂದ ಹೀಗಾಗಿ ಮುದ್ರಣ ಮಾಧ್ಯಮ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಪತ್ರಿಕೆಗಳಲ್ಲಿ ಬರುವ ಸಂಪಾದಕೀಯ, ಅಗ್ರ ಲೇಖನಗಳು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ. ಓದುಗರು ಸಹ ಪತ್ರಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದರು.
ಧಾವಂತದಲ್ಲಿ ಸುದ್ದಿ ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಅರಿತು ಅಧ್ಯಯನ ಮಾಡಿದರೆ ರಾಷ್ಟçಕ್ಕೆ ಹಿತವಾಗಲಿದೆ. ಆರ್‌ಎಸ್‌ಎಸ್ ಕೂಡ ಪತ್ರಿಕೆಗಳ ಮೂಲಕ ರಾಷ್ಟçದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಪತ್ರಕರ್ತ ಸುಶೀಲೇಂದ್ರ ಕುಂದರಗಿ ಮಾತನಾಡಿ, ಪತ್ರಕರ್ತ ಉತ್ತಮ ಸಂವಹನಕಾರ ಎಂದು ಪ್ರಾಚೀನ ಕಾಲದಲ್ಲಿಯೇ ನಾರದ ಮಹರ್ಷಿಗಳು ತೋರಿಸಿಕೊಟ್ಟಿದ್ದಾರೆ. ಮಹರ್ಷಿಗಳು ಇನ್ನೊಬ್ಬರಿಗೆ ಹಿತವಾಗುವಂತಹ, ಮನಸ್ಸು ಅರಳುವ, ಲೋಕ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದಾರೆ. ಅವರನ್ನು ಸ್ಮರಿಸುವ ಕೆಲಸ ಶ್ಲಾಘನೀಯ ಎಂದು ಹೇಳಿದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಸಂಚಾಲಕ ಚಂದ್ರಶೇಖರ ದೊಡ್ಡಮನಿ, ಆಶ್ರಯಧಾಮ ಅಧ್ಯಕ್ಷ ಡಾ.ಸುಭಾಷ್ ಪಾಟೀಲ, ಡಾ.ಸಿ.ಎಸ್.ಪಾಟೀಲ ಇದ್ದರು.