ರಬಕವಿ/ಬನಹಟ್ಟಿ ತಾಲೂಕಿನ ಯಲ್ಲಟ್ಟಿಯ ವಿಶ್ವಭಾರತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನೂತನ ಶಾಲೆ-ಕಟ್ಟಡಕ್ಕೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಶಾಸಕ ಸಿದ್ದು ಸವದಿ, ಹಣಮಂತ ನಿರಾಣಿ, ಸದಾಶಿವ ಸಂತಿ ಇದ್ದರು. 
ಬಾಗಲಕೋಟೆ

ಸಾಂಸ್ಕೃತಿಕ ಜಾಗೃತಿಗೆ ಆದ್ಯತೆ ನೀಡಿ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಶ್ರೀಶೈಲ ಜಗದ್ಗುರು ಅಭಿಮತ
  • ವಿಶ್ವಭಾರತಿ ಅಂತಾರಾಷ್ಟೀಯ ಶಾಲೆ ಉದ್ಘಾಟನೆ
  • ಶಿಕ್ಷಣದಿಂದ ದೇಶದ ಉನ್ನತೀಕರಣ
ರಬಕವಿ-ಬನಹಟ್ಟಿ: ಶಿಕ್ಷಣ, ನೈತಿಕತೆ ಮತ್ತು ಸಾಂಸ್ಕೃತಿಕ ಜಾಗೃತಿ ಬಗ್ಗೆ ಇಂದಿನ ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಸಮೀಪದ ಯಲ್ಲಟ್ಟಿಯಲ್ಲಿ ಮಂಗಳವಾರ ಜಗಜ್ಯೋತಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಶ್ವಭಾರತಿ ಅಂತಾರಾಷ್ಟ್ರೀಯ ಶಾಲೆ ಹಾಗೂ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಸಾಂಪ್ರದಾಯಿಕ ಶಿಕ್ಷಣವಲ್ಲದೆ ಜೀವನಕ್ಕೆ ಅಗತ್ಯವಾದ ಮೌಲ್ಯ, ನೀತಿ ಕತೆ ತಿಳಿಸುವ ಮೂಲಕ ಸಮಾಜ ಸನ್ಮಾರ್ಗದಲ್ಲಿ ನಡೆಸುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಸಂಸ್ಥೆ ಈಗ ಅಂಬೆಗಾಲಿಡುತ್ತಿದೆ ಸಂಪೂರ್ಣ ಭಾರತೀಯ ಪರಂಪರೆ ಮತ್ತು ದೇಶಾಭಿಮಾನ, ಗುರು ಹಿರಿಯರು, ತಂದೆ-ತಾಯಿ ಗೌರವಿಸುವ ಅನೇಕ ನೈತಿಕ ಮೌಲ್ಯ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ತಿಳಿಸಿಕೊಡಬೇಕು. ಅವರು ಪ್ರೌಢಾವಸ್ಥೆಗೆ ಬರುವಷ್ಟರಲ್ಲಿ ಪ್ರಜ್ಞಾವಂತ ಪ್ರಜೆಯಾಗಿ ಹೊರಹೊಮ್ಮಿ ದೇಶಕ್ಕೆ ಒಬ್ಬ ಉತ್ತಮ ಮಾದರಿ ವ್ಯಕ್ತಿಯಾಗಲು ಸಾಧ್ಯ ಎಂದು ತಿಳಿಸಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಹೊಸ ಹುಮ್ಮಸ್ಸಿನೊಂದಿಗೆ ಯುವ ಸಮೂಹ ಶಿಕ್ಷಣ ಸಂಸ್ಥೆ ಆರಂಭಿಸಿದೆ. ಸುಂದರ ಸಮಾಜ ನಿರ್ಮಾಣ ಮಾಡುವ ಆಶಯ ವ್ಯಕ್ತಪಡಿಸಿರುವುದು ಶ್ಲಾಘನೀಯ ಎಂದರು.
ಎಂ.ಜಿ. ದಾಸರ ವಿಶೇಷ ಉಪನ್ಯಾಸ ನೀಡಿದರು. ಗದಗ ಶಿರುಂಜಿಯ ಬಸವ ಸಮರ್ಥ ಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿ.ಪ. ಸದಸ್ಯರಾದ ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಪ್ರಾಧಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಸಿ.ಎಂ.ನ್ಯಾಮಗೌಡ, ಬಿ.ಕೆ. ಕೊಣ್ಣೂರ, ಸಂಸ್ಥೆ ಅಧ್ಯಕ್ಷ ಸದಾಶಿವ ಸಂತಿ, ಸದಾಶಿವ ಗೌಡಪ್ಪನವರ, ವಸಂತ ಪಾಟೀಲ, ಭಾರತಿ ನ್ಯಾಮಗೌಡ, ಸುಜಾತಾ ಹನಗಂಡಿ, ಅಪ್ಪಜಪ್ಪ ಸಂತಿ, ಮುಖ್ಯಾಧ್ಯಾಪಕ ಗಣೇಶ ಚಿಕ್ಕೂಡ ಇದ್ದರು.