ಮುಧೋಳ ನಗರದ ಗಣೇಶ ಮಂದಿರದಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ವಿಶೇಷ ಪೂಜೆ, ಅಭಿಷೇಕ ಮತ್ತು ಮಹಾ ಆರತಿಯನ್ನು ನೆರವೇರಿಸಲಾಯಿತು. ಅರುಣ ಕಾರಜೋಳ, ಸಂಗಣ್ಣಗೌಡ ಕಾತರಕಿ, ಕರಬಸಯ್ಯ ಹಿರೇಮಠ, ಗುರುಪಾದ ಕುಳಲಿ ಇತರರಿದ್ದರು.
- ಬಿಜೆಪಿ ಮುಖಂಡ ಅರುಣ ಗೋವಿಂದ ಕಾರಜೋಳ ಹೇಳಿಕೆ
- ಸಂಭ್ರಮದ ವಿಜಯೋತ್ಸವ
- ಪ್ರಧಾನಿ ಮೋದಿ ಸತತ ಸೇವೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ವಿಷಯ
ಮುಧೋಳ : ಪ್ರಧಾನಿ ಮೋದಿ ಸತತ ಸೇವೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ವಿಷಯ. ಅವರ ದೂರದೃಷ್ಟಿ ಆಡಳಿತದಿಂದ ಇಂದು ಭಾರತ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ ಎಂದು ಬಿಜೆಪಿ ಮುಖಂಡ ಅರುಣ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಗಣೇಶ ಮಂದಿರದಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ವಿಶೇಷ ಪೂಜೆ, ಅಭಿಷೇಕ ಮತ್ತು ಮಹಾ ಆರತಿಯನ್ನು ನೆರವೇರಿಸಿ ಮಾತನಾಡಿದ ಅವರು, ಮೋದಿ ನಾಯಕತ್ವದಲ್ಲಿ ದೇಶದ ಪ್ರತಿ ವರ್ಗದ ಜನರಿಗೂ ಅಭಿವೃದ್ಧಿ ತಲುಪುತ್ತಿದ್ದು, ಈ ಸಂಭ್ರಮ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದೆ ಎಂದು ಹೇಳಿದರು.
ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಅವಧಿಗೆ ಸತತವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ವಿಶೇಷ ಗೌರವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲನ್ನು ಅವರು ತಲುಪಿದ್ದು, ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.
ವಿಜಯೋತ್ಸವದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿ ಹಾಗೂ ಬಿಜೆಪಿ ಅಧ್ಯಕ್ಷ ಸಂಗಣ್ಣಗೌಡ ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ಅವರ ದೂರದೃಷ್ಟಿ ಯೋಜನೆಗಳಾದ ಕಿಸಾನ್ ಸಮ್ಮಾನ್, ಮೇಕ್ ಇನ್ ಇಂಡಿಯಾ, ಬೇಟಿ ಬಚಾವೋ ಬೇಟಿ ಪಢಾವೋ, ಡಿಜಿಟಲ್ ಇಂಡಿಯಾ ಮತ್ತು ಮನ್ ಕಿ ಬಾತ್‌ನಂತಹ ಮಹತ್ವದ ಕಾರ್ಯಕ್ರಮಗಳು ದೇಶದ ಸರ್ವತೋಮುಖ ಅಭಿವೃದ್ಧಿಗೆ ಹೇಗೆ ಸಹಕಾರಿಯಾಗಿವೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಈಶ್ವರ ಅಡಪನವರ, ಗ್ರಾಮೀಣ ಅಧ್ಯಕ್ಷ ಸಂಗಣ್ಣಗೌಡ ಕಾತರಕಿ, ನಗರ ಅಧ್ಯಕ್ಷ ಕರಬಸಯ್ಯ ಹಿರೇಮಠ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಸುಮೇದಾ ಮಾನೆ, ನಗರ ಮಹಿಳಾ ಅಧ್ಯಕ್ಷೆ ಸುಶೀಲಾಬಾಯಿ ರಂಗನಾಥ, ಕಮಲಾ ಜೇಡರ, ವಿಮಲಾ ಯಾದವ, ಗೀತಾ ಆಲಗುಂಡಿ, ಅನಂತ ಘೋರ್ಪಡೆ, ರಾಜು ಟಂಕಸಾಲಿ, ರವಿ ನಂದಗಾಂವ, ಗುರುಪಾದ ಕುಳಲಿ, ರಾಘು ಸಿಂಧೆ, ಮಂಜು ಮಾನೆ, ಕಿರಣ ಪಾಲೋಜಿ, ವಿವೇಕ ಕಕರಡ್ಡಿ, ಪ್ರದೀಪ ನಿಂಬಾಳಕರ, ಅನುಪ ಚವಾಣ್ ಇತರರಿದ್ದರು.