ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಬೀಳ್ಗೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಉಪ ಪ್ರಾಚಾರ್ಯ ಬಿ.ಎಂ.ಬಳೋಲಮಟ್ಟಿ ಚಾಲನೆ ನೀಡಿದರು. ಬಾಹುಬಲಿ ಕವಟಕೋಪ್ಪ, ಎಂ.ಎಲ್. ಪಾಟೀಲ, ಬಿ.ಎಂ. ಬಳೊಮಟ್ಟಿ, ಮಹಾದೇವ ಬಿಮನಹಳ್ಳಿ ಇತರರಿದ್ದರು.
- ಪ್ರಾಚಾರ್ಯ ಎಂ.ಎಲ್.ಪಾಟೀಲ ಹೇಳಿಕೆ
- ಮಕ್ಕಳಿಗೆ ಓದಲು ಪೂರಕ ವಾತಾವರಣ ಒದಗಿಸಿ
- ಜೀವನಕ್ಕೆ ಪ್ರಾಥಮಿಕ ಶಿಕ್ಷಣವೇ ಅಡಿಪಾಯ
ಜಮಖಂಡಿ: ಜೀವನಕ್ಕೆ ಪ್ರಾಥಮಿಕ ಶಿಕ್ಷಣವೇ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಶಿಸ್ತು ಮತ್ತು ಜ್ಞಾನ ರೂಢಿಸಿಕೊಳ್ಳಬೇಕು ಎಂದು ಮೈಗೂರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಚಾರ್ಯ ಎಂ.ಎಲ್.ಪಾಟೀಲ ಹೇಳಿದರು.
ತಾಲೂಕಿನ ಮೈಗೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಗೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಉಪ ಪ್ರಾಚಾರ್ಯ ಬಿ.ಎಂ.ಬಳೋಲಮಟ್ಟಿ ಮಾತನಾಡಿ, ಪರೀಕ್ಷಾ ಸಮಯ ಹತ್ತಿರವಿರುವುದರಿಂದ ಪಾಲಕರು ಜಾಗೃತರಾಗಬೇಕು. ಮಕ್ಕಳು ಮನೆಯಲ್ಲಿರುವಾಗ ಪಾಲಕರು ಮೊಬೈಲ್ ಮತ್ತು ಟಿವಿ ಬಳಕೆ ಮಾಡದೆ, ಮಕ್ಕಳಿಗೆ ಓದಲು ಪೂರಕವಾದ ಶಾಂತಿಯುತ ವಾತಾವರಣ ನಿರ್ಮಿಸಿಕೊಡಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಬಾಹುಬಲಿ ಕವಟಕೋಪ್ಪ, ಸಿಆರ್‌ಪಿ ಬಿ.ಎಸ್.ಮುಧೋಳ, ಮುಖ್ಯಶಿಕ್ಷಕ ಎಂ.ಡಿ. ತೇಲಸಂಗ, ಮಹಾದೇವ ಬಿಮನಹಳ್ಳಿ, ಸಂಗಯ್ಯ ಮಠಪತಿ, ಬಸಗೊಂಡ ಪಾಟೀಲ, ಸಚಿನ ಶಿಂಗೆ, ಸಂಗಣ್ಣ ಪಿಡಶೆಟ್ಟಿ, ಸಂಜು ಹಿಪ್ಪರಗಿ, ಧರೆಪ್ಪ ಮೂಕನವರ ಇದ್ದರು. ಶಿಕ್ಷಕಿ ಆರ್.ಡಿ. ಶರ್ಮಾ ವರದಿ ವಾಚಿಸಿದರು. ಅಪ್ಪು ಅಂಬಿ ಸ್ವಾಗತಿಸಿದರು. ಎ.ಎ.ಬಿರಾದಾರ ನಿರೂಪಿಸಿದರು. ಬಸವರಾಜ ಪಾಟೀಲ ವಂದಿಸಿದರು.