ರಬಕವಿ ನಗರದಲ್ಲಿ ಮಂಜೂರಾದ ಪ್ರಜಾಸೌಧ ಕಟ್ಟದ ಶಂಖುಸ್ಥಾಪನೆ ಬೇಗ ಆರಂಭಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಲಾಯಿತು. ಸಂಜು ಜೋತಾವರ, ಸಂಜಯ ತೆಗ್ಗಿ, ರಾಮಣ್ಣ ಹುಲಕುಂದ, ಮಲ್ಲು ವಂದಾಲ ಇದ್ದರು.
- ರಬಕವಿಯಲ್ಲಿ ಮೌನ ಮೆರವಣಿಗೆ
- ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿ
ರಬಕವಿ-ಬನಹಟ್ಟಿ: ರಬಕವಿಯಲ್ಲಿ ಮಂಜೂರಾಗಿರುವ ಪ್ರಜಾಸೌಧದ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ರಬಕವಿ ನಗರದ ಹಿರಿಯರಾದ ರಾಮಣ್ಣ ಹುಲಕುಂದ ಹೇಳಿದರು.
ರಬಕವಿ ದಾನಮ್ಮದೇವಿ ದೇವಸ್ಥಾನದಿಂದ ಬುಧವಾರ ಆರಂಭವಾದ ಮೌನ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಗರದ ಹೃದಯಭಾಗದಲ್ಲಿರುವ ಶಂಕರಲಿಂಗ ದೇವಸ್ಥಾನದ ಆವರಣ ತಲುಪಿತು. ನಂತರ ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನದಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಜಾಸೌಧ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಕಾಮಗಾರಿಯನ್ನು ಯಾವುದೇ ವಿಳಂಬವಿಲ್ಲದೆ ಶೀಘ್ರ ಕೈಗೆತ್ತಿಕೊಳ್ಳಬೇಕು. ಸರ್ಕಾರದ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬಳಿಕ ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಗಿರೀಶ್ ಸ್ವಾದಿಯವರ ಮೂಲಕ ಸಲ್ಲಿಸಲಾಯಿತು. ಮಂಜೂರಾಗಿರುವ ಪ್ರಜಾಸೌಧದ ಕಟ್ಟಡದ ಶಂಕುಸ್ಥಾಪನೆ ಹಾಗೂ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.
ಉದ್ಯಮಿ ಸಂಜು ಜೋತಾವರ, ನೀಲಕಂಠ ಮುತ್ತೂರ, ವೆಂಕಟೇಶ ನಿಂಗಸಾನಿ, ಶಿವಾನಂದ ಬಾಗಲಕೋಟಮಠ, ಸತೀಶ ಹಜಾರೆ, ಧರೆಪ್ಪ ಉಳ್ಳಾಗಡ್ಡಿ, ಗಿರೀಶ ಮುತ್ತೂರ, ಬುದ್ಧಪ್ಪ ಕುಂದಗೋಳ, ಶ್ರೀಶೈಲ ದಲಾಲ, ಬಸವರಾಜ ಮನ್ಮಿ, ಸದಾಶಿವ ಖವಾಸಿ, ಯಮನಪ್ಪ ದೊಡ್ಮನಿ, ಸಂಗಮೇಶ ಮಡಿವಾಳರ, ಮಹಮ್ಮದ ಝಾರೆ, ಶಿವಪುತ್ರ ಮುರುಗುಂಡಿ ಇದ್ದರು.