ಗುಳೇದಗುಡ್ಡ ಪಟ್ಟಣದ ಬಾದಾಮಿ ನಾಕಾದ ಹತ್ತಿರದ ಬಸ್ ತಂಗುದಾಣದ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿರುವುದು. 
ಬಾಗಲಕೋಟೆ

ಬಸ್ ತಂಗುದಾಣದ ಅಂದ ಕೆಡಿಸಿದ `ಪೋಸ್ಟರ್‌

ಪಟ್ಟಣದ ಬಾದಾಮಿ ನಾಕಾದಲ್ಲಿರುವ ಪ್ರಯಾಣಿಕರ ವಿಶ್ರಾಂತಿಗಾಗಿ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಿರುವ ಬಸ್ ತಂಗುದಾಣ ಜಾಹೀರಾತು ಪೋಸ್ಟರ್‌ಗಳಿಂದ ತುಂಬಿಹೋಗಿದ್ದು, ತನ್ನ ಅಂದವನ್ನು ಕಳೆದುಕೊಂಡಿದೆ.
ಈ ಬಸ್ ತಂಗುದಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾದಾಮಿ ಮತಕ್ಷೇತ್ರದ ಶಾಸಕರಾಗಿದ್ದ ವೇಳೆಯಲ್ಲಿ ಅನುದಾನ ನೀಡಿ ಸುಂದರವಾಗಿ ನಿರ್ಮಿಸಲಾಗಿದ್ದು, ಮಾದರಿ ತಂಗುದಾಣದಂತಿದೆ. 
ಆದರೆ ಈಗಿನ ಪರಿಸ್ಥಿತಿ ನೋಡಿದರೆ, ತಂಗುದಾಣದ ಒಳ ಹಾಗೂ ಹೊರ ಗೋಡೆಗಳಿಗೆ ಚೂರು ಜಾಗ ಬಿಡದೆ ಒಂದರ ಮೇಲೊಂದು ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಒಂದೇ ಜಾಹಿರಾತಿನ ಹತ್ತಾರು ಪೋಸ್ಟರ್‌ಗಳು ಸೇರಿ, ಬಹುತೇಕ ಸಾಮಾಜಿಕ ನಾಟಕದ ಜಾಹೀರಾತುಗಳಿಂದ ತಂಗುದಾಣದಲ್ಲಿದ್ದು, ತಕ್ಷಣವೇ ಇವುಗಳನ್ನು ತೆಗೆಸಿ, ಮತ್ತೆ ಸುಂದರವಾಗುವಂತೆ ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಗುಳೇದಗುಡ್ಡ ಪಟ್ಟಣದ ಬಾದಾಮಿ ನಾಕಾದ ಹತ್ತಿರದ ಬಸ್ ತಂಗುದಾಣದ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿರುವುದು.
ಬಸ್ ತಂಗುದಾಣದ ಸೌಂದರ್ಯ ಹಾಳಾಗದಂತೆ ಗೋಡೆಗಳಿಗೆ ಅಂಟಿಸಿರುವ ಜಾಹಿರಾತು ಪೋಸ್ಟರ್‌ಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತೆಗೆಸಬೇಕು, ಪೋಸ್ಟರ್‌ಗಳನ್ನು ಅಂಟಿಸದಂತೆ ಎಚ್ಚರಿಕೆ ಬೋರ್ಡ್ ಹಾಕಬೇಕು. ಅಂಟಿಸಿದರೆ ದಂಡ ಹಾಕಬೇಕು.
ಉಮೇಶ ಶಿವನಗೌಡರ ಸಾಮಾಜಿಕ ಕಾರ್ಯಕರ್ತರ ಸಂಘದ ಸದಸ್ಯ, ಗುಳೇದಗುಡ್ಡ