ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದಲ್ಲಿ ಓಂಕಾರ ಮಾನೆ -Ëಂಡೇಶನ್ ವತಿಯಿಂದ ಪ್ರಧಾನಿ ಮೋದಿ ಅವರ ಆಶಯದಂತೆ ಒಂದು ಮರ ತಾಯಿಯ ಹೆಸರಿನ ಮೇಲೆ ಅಭಿಯಾನಕ್ಕೆ ಗುರುವಾರ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಚಾಲನೆ ನೀಡಿದರು. -Ëಂಡೇಶನ್ ಅಧ್ಯಕ್ಷ ಡಾ.ಶೇಖರ ಮಾನೆ, ಕುಮಾರ ಗಿರ್ಜಾ, ಪಾಪುರೆಡ್ಡಿ ಕೋಟಿಕಲ್ ಮತ್ತಿತರರು ಇದ್ದರು.
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿಯೊಬ್ಬರು ತಮ್ಮ ತಾಯಿ ಹೆಸರಿನಲ್ಲಿ ಸಸಿ ನೆಟ್ಟು ಅದನ್ನು ಪೋಷಿಸಿ, ಬೆಳೆಸಬೇಕು ಎಂದು ಬಿಜೆಪಿ ಮುಖಂಡ ಡಾ.ಶೇಖರ ಮಾನೆ ತಿಳಿಸಿದರು.
ತಾಲೂಕಿನ ತಾಲೂಕಿನ ಶಿರೂರ ಗ್ರಾಮದಲ್ಲಿ ಗುರುವಾರ ಓಂಕಾರ್ ಮಾನೆ ಫೌಂಡೇಶನ್ ವತಿಯಿಂದ ಮೋದಿ ಅವರ ಆಶಯದಂತೆ ಒಂದು ಮರ ತಾಯಿಯ ಹೆಸರಿನ ಮೇಲೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಏಕ್ ಪೇಡ್ ಮಾ ನಾ ನಾಮ್ ಅಭಿಯಾನಕ್ಕೆ ಉತ್ತರಮ ಸ್ಪಂದನೆ ಸಿಗುತ್ತಿರುವುದು ಖಷಿ ತಂದಿದೆ. ಸಾಕಷ್ಟು ಜನರು ಈ ಅಭಿಯಾನದಲ್ಲಿ ಕೈಜೋಡಿರುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ -Ëಂಡೇಶನ್ ವತಿಯಿಂದ ಹಂತ ಹಂತವಾಗಿ ಅಭಿಯಾನವನ್ನು ಬಾಗಲಕೋಟೆ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಭಿಯಾನಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಇಂದು ನಾವೆಲ್ಲರೂ ಮೊಬೈಲ್ ಯುಗದಲ್ಲಿ ಜೀವನ ನಡೆಸುತ್ತಿದ್ದೀವಿ. ಆದರೆ, ಪರಿಸರ ಸಂರಕ್ಷಣೆ ಮರೆಯುತ್ತಿದ್ದೇವೆ. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಈ ಅಭಿಯಾನ ಪರಿಸರ ಸಂರಕ್ಷಣೆ ಜೊತೆಗೆ ಸಮಾಜವನ್ನು ಭಾವನಾತ್ಮಕ ಬೆಸೆಯುತ್ತಿದೆ. ಈ ನಿಟ್ಟಿನಲ್ಲಿ ಓಂಕಾರ್ ಮಾನೆ ಫೌಂಡೇಶನ್ ಅವರು ಪ್ರತಿ ಗ್ರಾಮ ಗ್ರಾಮಗಳಿಗೆ ಈ ಅಭಿಯಾನವನ್ನು ತಲುಪಿಸುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದರು.
ಶಿರೂರು ಗ್ರಾಮದ ಸಿದ್ದಲಿಂಗೇಶ್ವರ ನಗರ, ಚೆನ್ನಯ್ಯ ನಗರ, ಇಂದಿರಾ ನಗರ, ಮಿನಿಚ್ ಮಡ್ಡಿ ನೀಲಾನಗರ ರೋಡ್ ಸೇರಿದಂತೆ ವಿವಿಧ ಕಡೆ ಈ ಅಭಿಯಾನ ನಡೆಯಿತು. ಕುಮಾರ ಗಿರ್ಜಾ, ಪಾಪು ರೆಡ್ಡಿ ಕೋಟಿಕಲ್, ಮುತ್ತು ಜಾಗಿರ್ದಾರ್, ಮಾಂತೇಶ್ ಗಿರಿಜಾ, ನಾಗೇಶ್ ಬಾಂಬೆ, ರಮೇಶ್ ಸೂಳಿಬಾವಿ, ನೀಲಪ್ಪ ಬಾರಟ್ಟಿ, ಯಮನಪ್ಪ ಹೂಗಾರ್, ಶೇಕಪ್ಪ ಅಂಗಡಿ, ದ್ಯಾವಪ್ಪ ಗಾಣಿಗೇರ್, ಮುದಿಯಪ್ಪ ಹೊಸ್ಮನಿ, ಸಿದ್ದು ಚೇತವಾಡಗಿ, ಪ್ರಶಾಂತ ಚಿತ್ತವಾಡಗಿ, ಪ್ರಭು ಪೆಟ್ ಶೆಟ್ರು, ಮಾಂತೇಶ್ ಕಲಗುಡಿ, ಮಂಜುನಾಥ ಮೆಣಸಗಿ, ಸಿದ್ದು ಸಂಕೀನ್, ಭೀಮಪ್ಪ ಕೊರಟ್ಟಿ, ಮನೋಜ್ ಸಂಜನ್ ಮತ್ತಿತರರು ಇದ್ದರು.