ಬಾಗಲಕೋಟೆ ಬಿವಿವಿ ಸಂಘದ ಫಿಜಿಯೋಥೆರಪಿ ಕಾಲೇಜಿನಲ್ಲಿ ಶನಿವಾರ ಪದವಿಧರರಿಗೆ ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ಚೇರಮನ್ ಡಾ.ಇಫ್ತಿಕರ್ ಫರೀದ್ ಅವರು ಪದವಿ ಪ್ರದಾನ ಮಾಡಿದರು. ರಾಜೀವಗಾಂಽ ಆರೋಗ್ಯ ವಿವಿ ಸೆನೆಟ್ ಸದಸ್ಯೆ ಪ್ರೊ.ವೈಶಾಲಿ ಶ್ರೀಜೀತ, ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯ ಡಾ.ಮಹಾಂತೇಶ ಬಿರಡಿ ಮತ್ತಿತರರು ಇದ್ದರು.
ಬಾಗಲಕೋಟೆ: ಫಿಜಿಯೋಥೆರಪಿ ವೈದ್ಯಕೀಯ ಕ್ಷೇತ್ರದಲ್ಲಿ ಅಗತ್ಯದ ಚಿಕಿತ್ಸೆಯಾಗಿದೆ. ಫಿಜಿಯೋಥೆರಪಿ ವಿಷಯ ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಸಾಕಷ್ಟು ಬೆಳವಣಿಗೆ ಹೊಂದಿದೆ. ಈ ಕ್ಷೇತ್ರದಲ್ಲಿ ಯಶಸ್ಸು ಸಾಽಸಲು ಪರಿಶ್ರಮ ಮತ್ತು ಕೌಶಲ್ಯದ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಸಮುದಾಯದ ಗೌರವಕ್ಕೆ ಪಾತ್ರರಾಗಲು ಪರಿಶ್ರಮಪಡಿ ಎಂದು ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ಚೇರಮನ್ ಡಾ.ಇಫ್ತಿಕರ್ ಫರೀದ್ ಯುವ ಪದವೀಧರರಿಗೆ ಕಿವಿಮಾತು ಹೇಳಿದರು.
ಬಿವಿವಿ ಸಂಘದ ಫಿಜಿಯೋಥೆರಪಿ ಕಾಲೇಜಿನ ಶನಿವಾರ ನಡೆದ ೩ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವೀಧರರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಫಿಜಿಯೋಥೆರಪಿ ಶಿಕ್ಷಣ ಪೂರ್ಣಗೊಳಿಸಿದರೂ ಸಂಶೋಧನಾ ಸಮ್ಮೇಳನಗಳಲ್ಲಿ ಭಾಗವಹಿಸಿ ಪರಿಣತಿ ಹೊಂದಿ. ಬಾಗಲಕೋಟೆಯಂತಹ ಸಣ್ಣ ಜಿಲ್ಲೆಯಲ್ಲಿ ವಿವಿಧ ಪ್ರಕಾರದ ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಿರುವ ವೀರಣ್ಣ ಚರಂತಿಮಠ ಅವರು ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲೇ ಶೈಕ್ಷಣಿಕ ಕ್ರಾಂತಿಗೆ ಕಾರಣರಾಗಿದ್ದಾರೆ. ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಲು ಸಾಧ್ಯವಾಗುವಂತೆ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪದವಿಪಡೆಯಲು ನಿಮ್ಮ ಪಾಲಕರ ತ್ಯಾಗ ಮತ್ತು ಶ್ರಮ ಕಾರಣ. ಪಾಲಕರನ್ನು ಮತ್ತು ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳಿದರು.
ಪದವಿ ಪ್ರದಾನ ಭಾಷಣ ಮಾಡಿದ ರಾಜೀವಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆ ಪ್ರೊ.ವೈಶಾಲಿ ಶ್ರೀಜೀತ ಅವರು, ವೃತ್ತಿ ಬದುಕಿನಲ್ಲಿ ಉತ್ತಮ ವರ್ತನೆ ಮೈಗೂಡಿಸಿಕೊಂಡು ರೋಗಿಗಳನ್ನು ಗೌರವಿಸಿ. ಇತರರಿಗೆ ಪ್ರೇರಣೆಯಾಗುವಂತಹ ಬದುಕು ನಿಮ್ಮದಾಗಲಿ. ಈಗ ರಾಷ್ಟಿçÃಯ ಫಿಜಿಯೋಥೆರಪಿ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು ಇದರ ಪ್ರಯೋಜನ ಪಡೆಯಿರಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಬಿವಿವಿ ಸಂಘದ ಇಂದಿನ ಈ ಯಶೋಗಾಥೆಯ ಹಿಂದೆ ವೀರಣ್ಣ ಚರಂತಿಮಠ ಅವರ ಪರಿಶ್ರಮವಿದೆ. ಅವರು ಸ್ಥಾಪಿಸಿದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪಡೆದು ವೃತ್ತಿ ಬದುಕನ್ನು ಆರಂಭಿಸುತ್ತಿರುವಿರಿ. ಉತ್ತಮ ಸನ್ನಡತೆ ಮೈಗೂಡಿಸಿಕೊಂಡು ಸಮಾಜಕ್ಕೆ ನಿಮ್ಮ ಕೊಡುಗೆ ನೀಡಿ ಎಂದರು.
ಪ್ರಾಚಾರ್ಯ ಡಾ.ಮಹಾಂತೇಶ ಬಿರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುಚಿತ್ರಾ ದಿವಾನಮಲ್ ಪದವೀಧರರಿಗೆ ಪ್ರತಿಜ್ಞಾವಿಽ ಬೋಽಸಿದರು ಮತ್ತು ಡಾ.ಕರ್ನಾಲಿ ನಾಯಕ್ ವಂದಿಸಿದರು.
ವೇದಿಕೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಽÃಕ್ಷಕ ಡಾ.ಶ್ರೀರಾಮ ಕೋರಾ ಇದ್ದರು. ೩೦ ಪದವಿಧರರಿಗೆ ಪದವಿ ಪ್ರದಾನ ಮಾಡಲಾಯಿತು. ಅಽಕ ಅಂಕಗಳನ್ನು ಪಡೆದು ರಾಜೀವಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ರ‍್ಯಾಂಕ್ ವಿಜೇತರಾದ ಡಾ.ವಿನುತಾ ಮತ್ತು ಡಾ.ಪ್ರೀತಿ ಮತ್ತು ಉತ್ತಮ ಸಾಧನೆ ತೋರಿಸಿದ ಡಾ.ತುಷಾರ ಅವರುಗಳನ್ನು ಸನ್ಮಾನಿಸಲಾಯಿತು.