ಲೋಕಾಪುರ ಪಟ್ಟಣದ ಲೋಕೇಶ್ವರ ಸಮಿತಿಯ ಆರ್‌ಬಿಜಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಡಿ.ಎಂ. ತುಬಾಕಿ, ಎಸ್.ಬಿ. ಕೃಷ್ಣಗೌಡರ, ಎಸ್.ಎಸ್. ಜೈನಾಪುರ ಇತರರಿದ್ದರು. 
ಬಾಗಲಕೋಟೆ

ಪರಿಶ್ರಮವೇ ಯಶಸ್ಸಿನ ಮೂಲ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಚಾರ್ಯ ಡಿ.ಎಂ. ತುಬಾಕಿ ಹೇಳಿಕೆ
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಲೋಕಾಪುರ: ಅಸಾಧ್ಯವಾದುದು ಯಾವುದೂ ಇಲ್ಲ. ನಿರಂತರ ಅಧ್ಯಯನ ಮತ್ತು ಆತ್ಮವಿಶ್ವಾಸವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸತತ ಪರಿಶ್ರಮವೇ ಯಶಸ್ಸಿನ ಮೂಲ ಎಂದು ನಿವೃತ್ತ ಪ್ರಾಚಾರ್ಯ ಡಿ.ಎಂ. ತುಬಾಕಿ ಹೇಳಿದರು.
ಪಟ್ಟಣದ ಲೋಕೇಶ್ವರ ಸಮಿತಿಯ ಆರ್‌ಬಿಜಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಾಗೂ ಅಂಬೇಡ್ಕರ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸತತ ಪ್ರಯತ್ನ, ಸ್ಪಷ್ಟ ಗುರಿ ಆತ್ಮ ವಿಶ್ವಾಸ ಮತ್ತು ಛಲದೊಂದಿಗೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ, ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು.
ಲೋಕೇಶ್ವರ ಶಿಕ್ಷಣ ಸಮಿತಿ ಕಾರ್ಯದರ್ಶಿ ಹಾಗೂ ನಿವೃತ್ತ ಪ್ರಾಚಾರ್ಯ ಎಸ್.ಬಿ. ಕೃಷ್ಣಗೌಡರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ ಆದರ್ಶಗಳು ಸಮಾನತೆ, ಸ್ವಾತಂತ್ರ‍್ಯ, ಭಾತೃತ್ವ ಮತ್ತು ಸಾಮಾಜಿಕ ನ್ಯಾಯದ ಮೇಲೆ ಆಧಾರತಿವಾಗಿವೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಜಾತಿರಹಿತ ಸಮಾಜ ನಿರ್ಮಾಣ, ಮಹಿಳಾ ಸಬಲೀಕರಣ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ, ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುವುದು ಅವರ ಪ್ರಮುಖ ವಿಚಾರಧಾರೆಯಾಗಿದೆ ಎಂದರು.
ಕಲಾ ವಿಭಾಗದಲ್ಲಿ ಉತ್ತಮ ಅಂಕ ಪಡೆದಿರುವ ಅಮೂಲ್ಯ ಹೊಸಮನಿ, ಸುಶ್ಮೀತಾ ಕುರಬೇಟ್, ಸಾನೀಯ ಸಯೈದ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ನಿರ್ದೇಶಕ ಗಿರೀಶ ಕೊಪ್ಪದ, ಪ್ರಾಚಾರ್ಯೆ ಎಸ್.ಎಸ್. ಜೈನಾಪುರ, ಪ್ರೌಢ ಶಾಲಾ ವಿಭಾಗದ ಮುಖ್ಯ ಗುರು ಎಸ್.ಎಫ್. ನಾಯ್ಕ, ಪ್ರಾಥಮಿಕ ವಿಭಾಗದ ಮುಖ್ಯಗುರು ಎಸ್.ಎಂ. ಹಡಪದ, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಇದ್ದರು.