ತಾಲೂಕಿನ ಅಮಲಝರಿ ಗ್ರಾಮದ ರೈತರಾದ ಕೇಶುಗೌಡ ನಾಯಕ ಅವರ ಜಮೀನಿನಲ್ಲಿ ಬೆಳೆದ ಸಿಂಜೆಟ್-5531 ಮೆಣಸಿನಕಾಯಿ ಬೆಳೆಯನ್ನು ಮಾಜಿ ಸಚಿವರಾದ ಎಸ್.ಆರ್.ಪಾಟೀಲ ವಿಕ್ಷಣೆ ಮಾಡಿದರು. ಎಸ್.ಟಿ.ಪಾಟೀಲ, ಸತ್ಯಪ್ಪ ಮೇಲ್ನಾಡ ಇತರರಿದ್ದರು.
- ಎಸ್.ಆರ್.ಪಾಟೀಲ ಹೇಳಿಕೆ
- ಸಾವಯವ ಕಷಿ ಪದ್ಧತಿ ಅಳವಡಿಸಿಕೊಂಡು ರೈತರು ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಲಕ್ಷಾಂತರ ರೂಪಾಯಿ ಲಾಭ ಗಳಿಸಬಹುದಾಗಿದೆ
- ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಬೆಳೆ ಬೆಳೆಯುವುದರಿಂದ ರೈತರು ಹೆಚ್ಚಿನ ಲಾಭ ಪಡೆಯಬಹುದು
ಬೀಳಗಿ: ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ರೈತರು ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಲಕ್ಷಾಂತರ ರೂಪಾಯಿ ಲಾಭ ಗಳಿಸಬಹುದಾಗಿದೆ ಎಂದು ಮಾಜಿ ಸಚಿವರು ಹಾಗೂ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ತಾಲೂಕಿನ ಅಮಲಝರಿ ಗ್ರಾಮದ ರೈತ ಕೇಶುಗೌಡ ನಾಯಕ ಅವರ ಎರಡು ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಸಿಂಜೆಟ್-5531 ಮೆಣಸಿನಕಾಯಿ ಬೆಳೆ ವೀಕ್ಷಿಸಿ ಮಾತನಾಡಿದ ಅವರು, ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಸರಿಯಾದ ಸಮಯಕ್ಕೆ ನೀರಾವರಿ, ರೋಗ-ಹುಳು ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಉತ್ತಮ ಇಳುವರಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಬೆಳೆ ಬೆಳೆಯುವುದರಿಂದ ರೈತರು ಹೆಚ್ಚಿನ ಲಾಭ ಪಡೆಯಬಹುದು. ಕೇಶುಗೌಡ ನಾಯಕ ಮತ್ತು ಅವರ ಪತ್ನಿಯ ಪರಿಶ್ರಮದಿಂದ ತೋಟದಲ್ಲಿ 6x7 ಅಡಿ ಎತ್ತರದ ಮೆಣಸಿನಕಾಯಿ ಗಿಡಗಳು ಬೆಳೆಯುತ್ತಿದ್ದು, ಎರಡು ಎಕರೆ ಜಮೀನಿನಲ್ಲಿ 20ರಿಂದ 30 ಲಕ್ಷ ರೂ.ಗಳವರೆಗೆ ಆದಾಯ ನಿರೀಕ್ಷಿಸಲಾಗಿದೆ. ಇಂತಹ ಮಾದರಿ ಕಷಿ ಕ್ರಮಗಳನ್ನು ಇತರ ರೈತರೂ ಅನುಸರಿಸಬೇಕು ಎಂದು ಅವರು ಸಲಹೆ ನೀಡಿದರು.
ಎಸ್.ಟಿ.ಪಾಟೀಲ, ಬೀಳಗಿ ಪಟ್ಟಣ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಎಸ್.ಎಂ.ದೇಸಯಿ, ಎಸ್.ಕೆ.ಬಳಗಾನೂರ, ನವಿನ ಢವಳೇಶ್ವರ ಇತರರಿದ್ದರು.