ಹುನಗುಂದ ಬಸ್ ನಿಲ್ದಾಣ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು. ಕರವೇ ತಾಲೂಕು ಘಟಕದ ಅಧ್ಯಕ್ಷ ರೋಹಿತ ಬಾರಕೇರ, ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ, ಉಪಾಧ್ಯಕ್ಷ ಹುಸೇನ ಸಂದಿಮನಿ ಇದ್ದರು. 
ಬಾಗಲಕೋಟೆ

ಸಮರ್ಪಕವಾಗಿ ಬಸ್‌ಗಳ ಸಂಚಾರ ಮಾಡಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಕರವೇ ನೇತೃತ್ವದಲ್ಲಿ ಪ್ರತಿಭಟನೆ..
  • ಅಂತರ ರಾಜ್ಯಕ್ಕೆ ಬಸ್‌ಗಳ ಸೇವೆ ಒದಗಿಸಿ
  • ಹುನಗುಂದ ಬಸ್ ನಿಲ್ದಾಣದದಲ್ಲಿ ಮೂರು ಜನ ಸಾರಿಗೆ ನಿಯಂತ್ರಕರನ್ನು ನಿಯೋಜಿಸಬೇಕು
ಹುನಗುಂದ: ಬಸ್ ಘಟಕದಿಂದ ಸಾರಿಗೆ ಬಸ್‌ಗಳು ಸಮರ್ಪಕವಾಗಿ ಪೂರೈಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಬಸ್ ಘಟಕ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕರವೇ ಅಧ್ಯಕ್ಷ ರೋಹಿತ ಬಾರಕೇರ ಮಾತನಾಡಿ, ವಿಜಯಪುರ-ಗಂಗಾವತಿಯ ಘಟಕದ ಸಾರಿಗೆ ಬಸ್‌ಗಳು ಹುನಗುಂದ ಬಸ್ ನಿಲ್ದಾಣದ ಒಳಗಡೆ ಬಾರದೆ (ರಾಷ್ಟ್ರೀಯ ಹೆದ್ದಾರಿ) ಬೈಪಾಸ್‌ನಲ್ಲಿ ಹೋಗುತ್ತಿವೆ. ಪ್ರಯಾಣಿಕರನ್ನು ಬೈಪಾಸ್ ರಸ್ತೆಯಲ್ಲಿಯೇ ಇಳಿಸಿ ಹೋಗುತ್ತವೆ. ಹುನಗುಂದ-ಲಿಂಗಸಗೂರ-ಕೋಡಿಹಾಳ ಮಾರ್ಗವಾಗಿ, ಹುನಗುಂದ-ಗೂಡೂರ ಬಾದಾಮಿ ಮಾರ್ಗವಾಗಿ ಹೆಚ್ಚಿನ ಬಸ್‌ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಹುನಗುಂದದಿಂದ ಹುಬ್ಬಳ್ಳಿ, ಕಾಡಗಿಹಳ್ಳ, ರಾಯಚೂರು, ಗಜೇಂದ್ರಗಡ, ಗದಗ, ಹುಸ್ಮನಾಬಾದ, ಪಂಡರಾಪುರ, ನಾಸಿಕ, ಸಾತಾರಾ, ಅಕ್ಕಲಕೋಟ, ಗುಡ್ಡಾಪೂರ, ತುಳಜಾಪೂರ, ಕೋಲ್ಲಾಪೂರ ಸೇರಿ ರಾಜ್ಯ ಮತ್ತು ಅಂತ ರಾಜ್ಯಕ್ಕೆ ಬಸ್‌ಗಳ ಸಂಪರ್ಕ ದ್ವಿಗುಣಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಜಹೀರ ಸಂಗಮಕರ ಮಾತನಾಡಿ, ಹುನಗುಂದ ಬಸ್ ನಿಲ್ದಾಣದದಲ್ಲಿ ಮೂರು ಜನ ಸಾರಿಗೆ ನಿಯಂತ್ರಕರನ್ನು ನಿಯೋಜಿಸಬೇಕು . ಆದರೆ ಇಲ್ಲಿ ಓರ್ವ ಸಿಬ್ಬಂದಿಯ ಮಾತ್ರ ಕೆಲಸ ಮಾಡುತ್ತಿರುವದರಿಂದ ಪ್ರಯಾಣಿಕರಿಗೆ ಮಾಹಿತಿ ನೀಡಲು, ಬಸ್ ಎಂಟ್ರೀ ಮಾಡಿಕೊಳ್ಳಲು ತೊಂದರೆಯಾಗುತ್ತಿದೆ. ಪಕ್ಕದ ಇಳಕಲ್ಲ ಬಸ್ ನಿಲ್ದಾಣದಲ್ಲಿ ನಾಲ್ಕು ಸಿಬ್ಬಂದಿ ಇದ್ದಾರೆ. ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಬಸ್ ಆಗಮಿಸುತ್ತಿಲ್ಲ, ಹೊಸ ಮಾರ್ಗದ ಬಸ್ ಸರಿಯಾಗಿ ಬಸ್ ಓಡುತ್ತಿಲ್ಲ, ಬಸ್ ನಿಲ್ದಾಣದ ಮುಂದೆ ಬೈಕ್ ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಪಾಕಿರ್ಂಗ್ ಸಮಸ್ಯೆಯಾಗದಂತೆ ಸಾರಿಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಆಗ್ರಹಿಸಿದರು .
ಕರವೇ ಇಳಕಲ್ಲ ಘಟಕದ ಅಧ್ಯಕ್ಷ ಅಶೋಕ ಪೂಜಾರಿ, ಕರವೇ ಉಪಾಧ್ಯಕ್ಷ ಹುಸೇನ ಸಂದಿಮನಿ, ಹಸನ ಕಲಕಬಂಡಿ, ಮಹ್ಮದ ನಧಾ, ಪ್ರವೀಣ ವಾಲಿಕಾರ, ಮೆಹಬೂಬ ಅಳೋಳ್ಳಿ, ಮಹೇಶ ಗಂಗೂರ, ರವಿ ಕೊಪ್ಪದ ಇತರರಿದ್ದರು.