ಕಮತಗಿ ಸಮೀಪದ ಮುಳ್ಳೂರ ಗ್ರಾಮದಲ್ಲಿ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದವತಿಯಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಿಶೇಷ ಶಿಬಿರವನ್ನು ಹೂವಿನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ಮುದ್ದಪ್ಪ ಕೊಳಮಲಿ ಉದ್ಘಾಟಿಸಿದರು. ವಿ.ಆರ್. ಮಳ್ಳಿ, ಗ್ರಾಪಂ ಮಾಜಿ ಸದಸ್ಯೆ ಕಿರವ್ವ ಆಸಂಗಿ, ಬಸವರಾಜ ಬೋಳಿಶೆಟ್ಟರ, ಹನಮಂತ ಆಸಂಗಿ ಇತರರಿದ್ದರು.
- ಮುದ್ದಪ್ಪ ಕೊಳಮಲಿ ಹೇಳಿಕೆ
- ಮುಳ್ಳೂರಿನಲ್ಲಿ ವಿಶೇಷ ಶಿಬಿರಕ್ಕೆ ಚಾಲನೆ
- ಎನ್‌ಎಸ್‌ಎಸ್ ಸ್ವಾವಲಂಬನೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತದೆ
ಕಮತಗಿ: ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಎನ್‌ಎಸ್‌ಎಸ್ ಮಹತ್ವದ ವೇದಿಕೆಯಾಗಿದೆ ಎಂದು ಹೂವಿನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುದ್ದಪ್ಪ ಕೊಳಮಲಿ ಹೇಳಿದರು.
ಸಮೀಪದ ಮುಳ್ಳೂರ ಗ್ರಾಮದಲ್ಲಿ ಹುಚ್ಚೇಶ್ವರ ವಿದ್ಯಾರ್ಧಕ ಸಂಘದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಸ್ವಾವಲಂಬನೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತದೆ ಎಂದು ಹೇಳಿದರು.
ಸಂಘದ ಸಹ ಕಾರ್ಯದರ್ಶಿ ವಿ.ಆರ್. ಮಳ್ಳಿ ಮಾತನಾಡಿ, ಎನ್‌ಎಸ್‌ಎಸ್ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳು ಬೆಳೆದು ಸಮಾಜಮುಖಿಯಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ. ಶಿಬಿರವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸ್ವಚ್ಛತೆ ಹಾಗೂ ಸಮಯಪ್ರಜ್ಞೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಗ್ರಾಪಂ ಮಾಜಿ ಸದಸ್ಯೆ ಕಿರವ್ವ ಆಸಂಗಿ, ಬಸವರಾಜ ಬೋಳಿಶೆಟ್ಟರ, ಹನಮಂತ ಆಸಂಗಿ, ಮಂಜು ಮನ್ನಿಕೇರಿ, ಯಮನಪ್ಪ ನಕ್ಕರಗುಂದಿ, ಆಡಳಿತಾಧಿಕಾರಿ ಎ.ಎಸ್. ಕಲ್ಯಾಣಶೆಟ್ಟಿ, ಪ್ರಾಚಾರ್ಯ ಪಿ.ಎಂ. ಗುರುವಿನಮಠ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಎಸ್. ಶೆಟ್ಟರ ಸೇರಿ ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.