ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಭಾನುವಾರ ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ಪೋಲಿಯೋ ಲಸಿಕೆ ಆಭಿಯಾನಕ್ಕೆ ಶಾಸಕ ಉಮೇಶ ಮೇಟಿ ಅವರು ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ಬಾಗಲಕೋಟೆ: ಭಾರತ ಪೋಲಿಯೋ ಮುಕ್ತ ರಾಷ್ಟçವಾಗಿದ್ದರೂ, ಆ ಲಿಸಿಕಾ ಅಭಿಯಾನವನ್ನು ಮುಂದುವರೆಸಿಕೊAಡು ಹೋಗಲು ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ. ಈ ಕಾರ್ಯಕ್ಕೆ ಪೋಷಕರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಉಮೇಶ ಮೇಟಿ ತಿಳಿಸಿದರು.
ಜಿಲ್ಲೆಯಾದ್ಯಂತ ಜೂನ್ ೨೮ ರಿಂದ ಜುಲೈ ೧ ವರೆಗೆ ಹಮ್ಮಿಕೊಂಡ ರಾಷ್ಟಿçÃಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಭಾನುವಾರ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಬಾಗಲಕೋಟೆ ಶಾಸಕ ಉಮೇಶ ಮೇಟಿ ಚಾಲನೆ ನೀಡಿ ಮಾತನಾಡಿದರು.
1 ೦ ದಿಂದ ೫ ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು. ಹತ್ತಿರದ ಆರೋಗ್ಯ ಕೇಂದ್ರ, ಅಂಗನವಾಡಿ ಅಥವಾ ಪೋಲಿಯೋ ಬೂತ್‌ಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವುದನ್ನು ತಪ್ಪಿಸಬಾರದು ಎಂದರು.
ಬಾಗಲಕೋಟೆ ತಾಲೂಕಿನಲ್ಲಿ ೩೧,೩೦೪ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ. ತಪ್ಪದೇ ಲಸಿಕೆ ಹಾಕಿಸುವ ಮೂಲಕ ದೇಶಕ್ಕೆ ಆರೋಗ್ಯವಂತ ಮಕ್ಕಳನ್ನು ನೀಡುವ ಕೆಲಸವಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಮಂಜುನಾಥ ಡಿ.ಎನ್ ಮಾತನಾಡಿ, ಜಿಲ್ಲಾದ್ಯಂತ ೦ ರಿಂದ ೫ ವರ್ಷದೊಳಗಿನ ಒಟ್ಟು ೨,೧೦,೫೨೯ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ೧೨೮೨ ಪೋಲಿಯೋ ಬೂತಗಳನ್ನು ಸ್ಥಾಪಿಸಲಾಗಿದೆ. ಒಟ್ಟು ೪,೦೭,೭೭೭ ಮನೆಗಳನ್ನು ಗುರುತಿಸಿ ಭೇಟಿ ನೀಡಲು ೧೩೯೦ ತಂಡಗಳನ್ನು ರಚಿಸಲಾಗಿದ್ದು, ಈ ಕಾರ್ಯಕ್ರಮದ ಮೇಲ್ವಿಚಾರಣೆಗೆ ಒಟ್ಟು ೨೬೫ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ತೋಟದ ಮನೆಗಳನ್ನು ಭೇಟಿ ಮಾಡಲು ೬೩ ಮೊಬೈಲ್ ತಂಡಗಳನ್ನು ಗುರುತಿಸಲಾಗಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ಪ್ರವಾಸಿ ತಾಣಗಳು, ಪ್ರಸಿದ್ದ ದೇವಾಲಯಗಳಿಗೆ ಬರುವ ಮಕ್ಕಳಿಗೆ ಲಸಿಕೆಯನ್ನು ಹಾಕಲು ೪೫ ಟ್ರಾನ್ಸಿಸ್ಟ್ ತಂಡಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಜಿಲ್ಲಾ ಆಯುಷ ಅಽಕಾರಿ ಡಾ.ಶೇಖರಯ್ಯ ಹಿರೇಮಠ, ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ರಾಜಕುಮಾರ ಯಾರಗಲ್, ತಾಲೂಕು ಆರೋಗ್ಯಾಽಕಾರಿ ಡಾ.ಸರಸ್ವತಿ ಮಾಗಿ ಮತ್ತಿತರರು ಇದ್ದರು.