ಬಾಗಲಕೋಟೆ ಬಿವಿವಿ ಸಂಘದ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಆಸ್ಪತ್ರೆ ಕಾಲೇಜಿನಲ್ಲಿ ಬುಧವಾರ ಪ್ರಥಮ ರ‍್ಷದ ವಿದ್ಯರ‍್ಥಿಗಳಿಗೆ ಕಂಕಣದಾರಣ ಮಾಡಿ, ಶಿಷ್ಯೋಪನಯನ ಕರ‍್ಯಕ್ರಮ ನಡೆಸಲಾಯಿತು.
- ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನಲ್ಲಿ ಶಿಷ್ಯೋಪನಯನ
- ದ್ಯರ‍್ಥಿಳಿಗೆ ಕಂಕಣ ದಾರಣ, ಧನ್ವಂತರಿಗೆ ಪೂಜೆ
- ಆರೋಗ್ಯಕರ ಜೀವನಶೈಲಿ
ಬಾಗಲಕೋಟೆ: ಪ್ರಕೃತಿ ಚಿಕಿತ್ಸೆಯೂ ಔಷಧಗಳಿಲ್ಲದೇ ಮಣ್ಣು, ನೀರು, ಗಾಳಿ, ಸರ‍್ಯನ ಬೆಳಕು, ಆಕಾಶ ಈ ಮೂಲಕ ದೇಹದ ಸ್ವಯಂ ಗುಣಪಡಿಸುವ ಶಕ್ತಿಯನ್ನು ಉತ್ತೇಜಿಸುವ ಪದ್ಧತಿಯಾಗಿದೆ ಎಂದು ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಕರ‍್ಯಾಧ್ಯಕ್ಷ ಮಲ್ಲಿಕರ‍್ಜುನ ಸಾಸನೂರ ಹೇಳಿದರು.
ನಗರದಲ್ಲಿ ನೂತನವಾಗಿ ಆರಂಭವಾಗಿರು ಬಿವಿವಿ ಸಂಘದ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಆಸ್ಪತ್ರೆ ಕಾಲೇಜಿನಲ್ಲಿ ಬುಧವಾರ ವಿದ್ಯರ‍್ಥಿಗಳಿಗೆ ಕಂಕಣದಾರಣ ಮಾಡುವ ಮೂಲಕ ಸ್ವಾಗತಿಸಿ ಶಿಷ್ಯೋಪನಯನ ಕರ‍್ಯಕ್ರಮದಲ್ಲಿ ಮಾತನಾಡಿದರು.
ಬಿವಿವಿ ಸಂಘವೂ ಆರಂಭಿಸಿರುವ ಈ ಪ್ರಕೃತಿ ಚಿಕಿತ್ಸೆಯನ್ನು ಈ ಭಾಗದಲ್ಲಿ ವಿಶೇಷವಾಗಿ ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ಧೇಶವನ್ನು ಹೊಂದಿದೆ ಎಂದರು.
ಶಿಷ್ಯೋಪಯನ ಎಂದರೆ ಆಯರ‍್ವೇದ ಪದ್ಧತಿಯಲ್ಲಿ ನೂತನ ವಿದ್ಯರ‍್ಥಿಗಳನ್ನು ಅಽಕೃತವಾಗಿ ಸ್ವಾಗತಿಸುವ ಸಾಂಪ್ರದಾಯಿಕ ಸಂಸ್ಕಾರವಾಗಿದೆ. ಇದು ಧನ್ವಂತರಿ ಹೋಮ ಮತ್ತು ಪೂಜೆ, ಮರ‍್ಷಿ ಚರಕ ಶಪತ ಮತ್ತು ಗುರು-ಶಿಷ್ಯ ಪರಂಪರೆ ಆಚರಣೆಗಳನ್ನು ಒಳಗೊಂಡಿರುತ್ತದೆ. ಇದು ವಿದ್ಯರ‍್ಥಿಗಳಲ್ಲಿ ನೈತಿಕತೆ ಮತ್ತು ಮೂಡಿಸುತ್ತದೆ ಎಂದರು.
ಪ್ರಾಚರ‍್ಯ ಡಾ.ವೀಣಾ ಯಲವಿಗಿ ಮಾತನಾಡಿ, ಮಣ್ಣಿನ ಚಿಕಿತ್ಸೆ, ವಾಯು ಚಿಕಿತ್ಸೆ, ಜಲ ಚಿಕಿತ್ಸೆ, ಮ್ಯಾಗ್ನೇಟ್‌ಥೇರಪಿ, ಬಣ್ಣ ಚಿಕಿತ್ಸೆ, ಅಕ್ಯುಪಂಕ್ಚರ, ಆಕ್ಯಪ್ರೆಶರ್, ಎಲೆಕ್ಟೊçÃಥೇರಪಿ ಹೀಗೆ ಹಲವಾರು ಚಿಕಿತ್ಸೆಗಳು ಪ್ರಕೃತಿ ಚಿಕಿತ್ಸೆಯಲ್ಲಿ ಲಭ್ಯವಾಗುತ್ತವೆ. ಪ್ರಕೃತಿ ಚಿಕಿತ್ಸೆಯು ಮಾನವನ ಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಶಿಕ್ಷಣ ನೀಡುವ ಮರ‍್ಗವಾಗಿದೆ. ಇತ್ತಿಚಿನ ದಿನಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದರು.
ಇದೇ ವೇಳೆ ೨೦೨೫-೨೬ನೇ ಸಾಲಿನಲ್ಲಿ ಪ್ರವೇಶ ಪಡೆದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯರ‍್ಥಿಗಳ ಶಿಷ್ಯೋಪನಯನ ಕರ‍್ಯಕ್ರಮದಲ್ಲಿ ಬೆಳಗಿನ ಜಾವ ಧನ್ವಂತರಿ ಹೋಮ, ಸತ್ಯನಾರಾಯಣ ಪೂಜೆ, ಧನ್ವಂತರಿ ದೇವಿಗೆ ಪೂಜೆ ಸಲ್ಲಿಸಿ, ನೂತನ ವಿದ್ಯರ‍್ಥಿಗಳಿಗೆ ಗುರುಗಳಿಂದ ಕಂಕಣ ದಾರಣ ಮಾಡಿ ಪ್ರತಿಜ್ಞಾ ವಿಽ ಬೋಽಸಲಾಯಿತು.
ಸಂಘದ ಸದಸ್ಯ ಚಂದ್ರಶೇಖರ ಶೆಟ್ಟರ, ಶರಣಪ್ಪ ರುದ್ರಾಕ್ಷಿ, ಡಾ.ಐಶ್ರ‍್ಯ, ಡಾ.ಶೃತಿ, ಡಾ.ಅಲತಾಪ್, ಡಾ.ವಿನಾಯಕ, ಡಾ.ಅಭಿಷೇಕ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಮತ್ತು ವಿದ್ಯರ‍್ಥಿಗಳು ಭಾಗವಹಿಸಿದ್ದರು.