ತುಳಸಿಗೇರಿಯ ಮಾರುತೇಶ್ವರ ದೇವಸ್ಥಾನದಲ್ಲಿ ಇನ್ನಿತರ ಸುವ್ಯವಸ್ಥೆಗಳ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಮತ್ತಿತರ ಅಧಿಕಾರಿಗಳೊಂದಿಗೆ ಶಾಸಕ ಜೆ.ಟಿ.ಪಾಟೀಲ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ವಾಸುದೇವಸ್ವಾಮಿ, ಆಹಾರ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀಶೈಲ ಕಂಕಣವಾಡಿ, ತಾಪಂ ಇಒ ಸುಭಾಷ ಸಂಪಗಾವಿ ಇದ್ದರು. 
ಬಾಗಲಕೋಟೆ

ದೇವಸ್ಥಾನದಲ್ಲಿ ಬರುವ ದಿನದಲ್ಲಿ ಇನ್ನಷ್ಟು ಸುವ್ಯವಸ್ಥೆಗಳು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜೆಟಿಪಿ ಭರವಸೆ
  • ತುಳಸಿಗೇರಿ ದೇಗುಲದಲ್ಲಿ ನೂತನ ಸ್ನಾನಗೃಹ ಉದ್ಘಾಟನೆ
  • ಮುಂಬರುವ ಡಿಸೆಂಬರ್ ಹೊತ್ತಿಗೆ ಬರುವ ಜಾತ್ರೆಯ ಸಮಯದೊಳಗೆ ಭಕ್ತರ ಅನುಕೂಲಕ್ಕಾಗಿ ಇನ್ನಷ್ಟು ಸುವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಲಾದಗಿ: ನಾಡಿನ ಬಹುದೊಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತುಳಸಿಗೇರಿಯ ಮಾರುತೇಶ್ವರ ದೇವಸ್ಥಾನದಲ್ಲಿ ಬರುವ ದಿನಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಇನ್ನಷ್ಟು ಸುವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ತುಳಸಿಗೇರಿಯ ಮಾರುತೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ದೇವಸ್ಥಾನದ ಅಭಿವೃದ್ಧಿ ಅನುದಾನದಲ್ಲಿನ 26.50 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಹಿಳೆಯರ ಮತ್ತು ಪುರುಷರ ಅತ್ಯಾದುನಿಕ ಸ್ನಾನಗೃಹ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬರುವ ಡಿಸೆಂಬರ್ ಹೊತ್ತಿಗೆ ಬರುವ ಜಾತ್ರೆಯ ಸಮಯದೊಳಗೆ ಭಕ್ತರ ಅನುಕೂಲಕ್ಕಾಗಿ ಇನ್ನಷ್ಟು ಸುವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಸಂಗಪ್ಪ, ತಹಸೀಲ್ದಾರ ವಾಸುದೇವಸ್ವಾಮಿ ಮತ್ತಿತರ ಅಧಿಕಾರಿಗಳೊಂದಿಗೆ ಸ್ನಾಹ ಗೃಹದ ಎದುರಿಗಿನ ಪ್ಲೇವರ್ಸ್‌ ಹಾಕಿದ ಆವರಣವನ್ನು ಪರಿಶೀಲಿಸುತ್ತಿರುವಾಗ ಈ ಭಾಗದಲ್ಲಿ ದೇವರ ಭಜನೆ ಮಾಡುವವರಿಗಾಗಿಯೆ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಿರುವು ನೂತನ ವಿನ್ಯಾಸ ಭಜನಾ ಮಂದಿರವನ್ನು ನಿರ್ಮಿಸುದಾಗಿ ಡಿಸಿ ಸಂಗಪ್ಪ ಅವರು ಶಾಸಕರಿಗೆ ಮಾಹಿತಿ ನೀಡಿದ ಅವರು, ದೇವಸ್ಥಾನದ ಆವರಣದಲ್ಲಿ ವಾಹನಗಳ ಪಾರ್ಕಿಂಗ್‌ಗಾಗಿ ಜಾಗೆಯನ್ನು ಗುರುತಿಸಲಾಗಿದ್ದು ಆದಷ್ಟು ಬೇಗ ವ್ಯವಸ್ಥೆ ಮಾಡಲಾಗುವುದು ಎಂದರು.
ಆಹಾರ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀಶೈಲ ಕಂಕಣವಾಡಿ, ತಾಪಂ ಇಒ ಸುಭಾಷ ಸಂಪಗಾವಿ, ಮುಖಂಡರಾದ ಪಾಂಡು ಪೊಲೀಸ್, ಓಬಳೆಪ್ಪ ದೊಡಮನಿ, ವಿಷ್ಣುಗೌಡ ಪಾಟೀಲ, ನಾಗಪ್ಪ ಸೊನ್ನದ, ನಾರಾಯಣ ಹಾದಿಮನಿ, ಅರ್ಜುನ ಪರಡ್ಡಿ, ಶ್ರೀಕಾಂತ ಜೈನಾಪುರ, ವೆಂಕಣ್ಣ ಭಂಗಿ, ಹನುಮಂತ ಹೊಸಕೋಟಿ ಇದ್ದರು.