ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ. 
ಬಾಗಲಕೋಟೆ

ಬಿಟಿಡಿಎ ಬೋರ್ಡ್ ಮೀಟಿಂಗ್‌ಗೂ ಗರ !

ಅಶೋಕ ಶೆಟ್ಟರ, ಬಾಗಲಕೋಟೆ:
ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಮುಳುಗಡೆ ಆದ ಬಾಗಲಕೋಟೆ ನಗರದ ಸಂತ್ರಸ್ತರಿಗೆ ಪುನರ್ ವಸತಿ ಮತ್ತು ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಸ್ಥಾಪಿತವಾದ ಸ್ವಾಯತ್ತ ಸಂಸ್ಥೆ ಬಿಟಿಡಿಎ(ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರ)ಗೆ ಅದ್ಯಾವ ಸಮಯದಲ್ಲಿ ಗ್ರಹಣ ಹಿಡಿದಿದೆಯೋ ಅದು ಸರಿಯುತ್ತಲೇ ಇಲ್ಲ.
ಕಾಲ ಕಾಲಕ್ಕೆ ಬೋರ್ಡ್ ಮಿಟಿಂಗ್ ನಡೆದು ಸಂತ್ರಸ್ತರಿಗೆ ಅನುಕೂಲವಾಗುವ ಅನೇಕ ಮಹತ್ವದ ತೀರ್ಮಾನಗಳು ಹೊರಬರಬೇಕು. ಆದರೆ, ಕಳೆದ ೧೪ ತಿಂಗಳಿAದ ಬಿಟಿಡಿಎಗೆ ಗರ ಬಡಿದಂತಾಗಿದೆ. ಬಹು ತಿಂಗಳು ಬಳಿಕ ಮಂಗಳವಾರ ನಡೆಯಬೇಕಿದ್ದ ಬೋರ್ಡ್ ಮೀಟಿಂಗ್ ಕೋರಂ ಭರ್ತಿ ಆಗದ ಹಿನ್ನೆಲೆಯಲ್ಲಿ ರದ್ದಾಗಿ ಮುಂದೂಡಲ್ಪಟ್ಟಿದೆ. ಇದರಿಂದ ಅನೇಕ ವಿಷಯಗಳು ತೀರ್ಮಾನವಾಗದೇ ಮತ್ತೆ ಕಾಗದದಲ್ಲೆ ಕೊಳೆಯುವಂತಾಗಿದೆ.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರಕ್ಕೆ ಕಳೆದ ಮಾರ್ಚ್ ತಿಂಗಳಲ್ಲಿ ಅನುಭವಿ ಪ್ರಕಾಶ ತಪಶೆಟ್ಟಿ ಅವರನ್ನು ಅಧ್ಯಕ್ಷರೆಂದು ಸರ್ಕಾರ ಆದೇಶ ಹೊರಡಿಸಿದಾಗ ಸಾಕಷ್ಟು ಬದಲಾವಣೆ ನಿರೀಕ್ಷೆಯಲ್ಲಿ ಸಂತ್ರಸ್ತರು ಇದ್ದರು. ಕಾರಣ ಈ ಹಿಂದೆ ಅವರು ಬಿಟಿಡಿಎ ಅಧ್ಯಕ್ಷರಾಗಿದ್ದ ವೇಳೆ ಸಂತ್ರಸ್ತ ಸ್ನೇಹಿ ಆಡಳಿತ ನೀಡಿದ್ದರಿಂದ ನಿರೀಕ್ಷೆಯೂ ದುಪ್ಪಟ್ಟು ಆಗಿತ್ತು. ಅದಕ್ಕೆ ತಕ್ಕಂತೆ ಅವರು ಉತ್ಸಾಹದಿಂದ ಬಿಟಿಡಿಎ ಅಽಕಾರ ವಹಿಸಿಕೊಂಡರೂ ಅವರಿಗೆ ಜನಪ್ರತಿನಿಽಗಳಿಂದ ಅದೇ ಬೆಂಬಲ ಸಿಗುತ್ತಿಲ್ಲ ಎನ್ನುವ ಮಾತುಗಳು ಇದೀಗ ಬಿಟಿಡಿಎ ಮೊಗಸಾಲೆಯಿಂದ ಹೊರಬರಲಾರಂಭಿಸಿವೆ.
೨೦೨೩ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬಿಟಿಡಿಎ ಅಧ್ಯಕ್ಷರಾಗಿ ಶಾಸಕ ಎಚ್.ವೈ.ಮೇಟಿ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಆದರೆ, ಸದಸ್ಯರನ್ನು ನೇಮಕ ಮಾಡಿರಲಿಲ್ಲ. ಶಾಸಕರಿಗೆ ಆಗಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರಿಂದ ಬಿಟಿಡಿಎ ಕಡೆಗೆ ಅವರು ಹೆಚ್ಚು ಗಮನ ಹರಿಸಲು ಆಗಿರಲಿಲ್ಲ.
೨೫.೦೬.೨೦೨೫ ಎಚ್.ವೈ.ಮೇಟಿ ಅವರ ಅಧ್ಯಕ್ಷತೆಯಲ್ಲಿ ಬಿಟಿಡಿಎ ೧೬೬ನೇ ಬೋರ್ಡ್ ಮೀಟಿಂಗ್ ಆಗಿತ್ತು. ಅದಾದ ಬಳಿಕ ಸೆಪ್ಟಂಬರ್‌ನಲ್ಲಿ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರಿಂದ ಬಿಟಿಡಿಎ ಅಧ್ಯಕ್ಷರಿಲ್ಲದೇ ಅಽಕಾರಿಗಳ ಆಡಿದ್ದೆ ಆಟ ಎನ್ನುವಂತಾಗಿತ್ತು.
ಈ ವರ್ಷ ಮಾರ್ಚ್ ೧೩ ರಂದು ಸರ್ಕಾರ ತೆರವಾಗಿದ್ದ ಬಿಟಿಡಿಎಗೆ ಪ್ರಕಾಶ ತಪಶೆಟ್ಟಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿತಾದರೂ ಅದಾದ ಎರಡೇ ದಿನದಲ್ಲಿ ಬಾಗಲಕೋಟೆ ಉಪ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಯಿತು. ಈ ಅವಽಯಲ್ಲಿ ಯಾವುದೇ ತೀರ್ಮಾನಗಳು ಆಗಲಿಲ್ಲ.
ನೀತಿ ಸಂಹಿತೆ ಮುಗಿದು ಮೇ ೮ ರಂದು ಪ್ರಕಾಶ ತಪಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ೧೬೭ನೇ ಬೋರ್ಡ್ ಮೀಟಿಂಗ್ ನಡೆಯಿತಾದರೂ ಹಿಂದಿನ ೧೬೬ನೇ ಸಭೆಯ ತೀರ್ಮಾನಗಳ ದೃಢೀಕರಣ ಮಾತ್ರ ನಡೆದು ಹೊಸ ತೀರ್ಮಾನಗಳು ಯಾವುದೂ ಆಗಲಿಲ್ಲ. ಉಪ ಚುನಾವಣೆಯಲ್ಲಿ ಎಚ್.ವೈ.ಮೇಟಿ ಅವರ ಪುತ್ರ ಉಮೇಶ ಮೇಟಿ ಭರ್ಜರಿ ಗೆಲುವು ಪಡೆದು, ಇದೀಗ ಬಾಗಲಕೋಟೆ ಶಾಸಕರು. ಬಿಟಿಡಿಎ ಸಭೆಯಲ್ಲಿ ಅವರ ಸಹಕಾರ ಅತ್ಯಂತ ಮುಖ್ಯ.
ಸನ್ಮಾನದಿಂದ ಹೊರ ಬಂದಿಲ್ಲ :
ಚುನಾವಣೆ ಮುಗಿದು ಮೂರು ತಿಂಗಳು ಕಳೆದು ಹೋಗಿವೆ. ಆದರೂ ಶಾಸಕರು ಇನ್ನೂ ಹಾರ, ತುರಾಯಿ, ಸನ್ಮಾನದ ಗುಂಗಿನಿAದ ಆಚೆ ಬಂದಿಲ್ಲ. ಜೊತೆಗೆ ಶಾಸಕರು ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ಜಿಲ್ಲಾ ಕೇಂದ್ರದ ಬದಲಿಗೆ ತಮ್ಮ ಹುಟ್ಟೂರು ತಿಮ್ಮಾಪುರದಿಂದಲೇ ಚಾಲನೆ ನೀಡಲು ಆರಂಭಿಸಿದ್ದಾರೆ. ನಗರ ಭೇಟಿ ಅಪರೂಪ ಎನ್ನುವಂತಾಗಿದೆ. ಬಂದರೂ ಅದು ಸನ್ಮಾನ, ಖಾಸಗಿ ಕಾರ್ಯಕ್ರಮಗಳಿಗೆ ಆದ್ಯತೆ ಎನ್ನುವುದು ಜನರು ಹೇಳುತ್ತಿರುವ ಮಾತು.
ಬಾಗಲಕೋಟೆ ನಗರಸಭೆ, ಬುಡಾ, ಬಿಟಿಡಿಎ ಸಭೆಗಳನ್ನು ಗಂಭೀರವಾಗಿ ಪರಿಗಣಿಸಿ, ನಗರದ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿ ವಹಿಸುವ ಕಡೆಗೆ ನಿರೀಕ್ಷಿತ ಗಮನ ಹರಿಸುತ್ತಿಲ್ಲ ಎನ್ನುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಮಂಗಳವಾರ ಬಿಟಿಡಿಎ ಸಭೆ ಬಗ್ಗೆ ಅವರಿಗೆ ವಾರದ ಮೊದಲೇ ಮಾಹಿತಿ ಇತ್ತಾದರೂ ಆದರೂ ಬರದೇ ಗೈರು ಉಳಿದರು. ಜೊತೆಗೆ ಸಿಎಂ ಅಽಕಾರಿಗಳ ಜೊತೆ ಸಂವಾದ ಇಟ್ಟುಕೊಂಡಿದ್ದರಿAದ ಜಿಲ್ಲಾಽಕಾರಿ, ಆಲಮಟ್ಟಿ ಸಿಇ, ಟೌನ್ ಪ್ಲಾನಿಂಗ್ ಡೈರಕ್ಟರ್ ಸೇರಿ ಅನೇಕ ಅಽಕಾರಿಗಳು ಬೇರೆ ಬೇರೆ ಕಾರಣ ಹೇಳಿ ಸಭೆಯಿಂದ ದೂರ ಉಳಿದಿದ್ದರಿಂದ ಕೋರಂ ಭರ್ತಿ ಆಗದೇ ಬಿಟಿಡಿಎ ೧೬೮ನೇ ಸಭೆ ಮುಂದೂಡಲ್ಪಟ್ಟಿದೆ.
ಹೊAದಾಣಿಕೆ ಇಲ್ವಾ...?
ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಬಾಗಲಕೋಟೆ ಶಾಸಕ ಉಮೇಶ ಮೇಟಿ ಅವರ ನಡುವೆ ಆಡಳಿತಾತ್ಮಕ ಹೊಂದಾಣಿಕೆ ಕೊರತೆ ಎನ್ನುವ ಮಾತುಗಳು ಕೇಳಿ ಬರಲಾಂಭಿಸಿವೆ. ಸಾರ್ವಜನಿಕವಾಗಿ ಚನ್ನಾಗಿಯೇ ಕಾಣಿಸಿಕೊಂಡರೂ ಬಿಟಿಡಿಎ ವಿಚಾರದಲ್ಲಿ ಅದು ಕಾಣಿಸುತ್ತಿಲ್ಲ. ಎಲ್ಲೋ ಒಂದು ಕಡೆಗೆ ಬಿಟಿಡಿಎ ಬಗ್ಗೆ ಶಾಸಕರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ನಗರದ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ.
ಸಂತ್ರಸ್ತರಿಗೆ ನಿವೇಶನ ಹಂಚಿಕೆ, ಹೊಸ ಕಾಮಗಾರಿ, ಎನ್‌ಒಸಿ ನೀಡುವುದು, ಬಿಟಿಡಿಎ ಬೈಲಾ ತಿದ್ದುಪಡಿ, ಯುಜಿಡಿ, ನೀರು ಪೂರೈಕೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬೋರ್ಡ್ ಮೀಟಿಂಗ್ ತೀರ್ಮಾನ ಅಗತ್ಯ. ಆದರೆ, ೧೪ ತಿಂಗಳಿAದ ಇಂಥ ತೀರ್ಮಾನಗಳಿಗೆ ಬ್ರೇಕ್ ಬಿದ್ದಿದೆ. ಸಂತ್ರಸ್ತರ ಜ್ವಲಂತ ಸಮಸ್ಯೆಗಳು ಜೀವಂತವಾಗಿ ಉಳಿದಿವೆ. ಬಿಟಿಡಿಎ ಅಧ್ಯಕ್ಷರ ಕೈಕಟ್ಟಿ ಹಾಕುತ್ತಿರುವ ಹಿಂದಿನ ಮರ್ಮ ಮಾತ್ರ ನಿಗೂಢವಾಗಿದೆ.!
ಸಂತ್ರಸ್ತರ ಅಲೆದಾಟ ತಪ್ಪೋದ್ಯಾವಾಗ ...?
ಬಿಟಿಡಿಎನಲ್ಲಿ ಮೊದಲೇ ಭ್ರಷ್ಟಾಚಾರ, ಕೆಲಸ ವಿಳಂಬದಿAದ ಮುಳುಗಡೆ ಬಾಗಲಕೋಟೆ ಸಂತ್ರಸ್ತರು ಹೈರಾಣಾಗಿ ಹೋಗಿದ್ದಾರೆ. ಯಾವೊಂದು ಕೆಲಸವೂ ನಿಗದಿತ ಸಮಯಕ್ಕೆ ಆಗಿರುವ ಉದಾಹರಣೆಗಳು ಅತ್ಯಂತ ಕಡಿಮೆ. ಕಚೇರಿಗೆ ಅಲೆದು ಅಲೆದು ಸುಸ್ತಾಗುತ್ತಾರೆ ವಿನಃ ವರ್ಷಗಟ್ಟಲೇ ಕೆಲಸ ಆಗುತ್ತಿಲ್ಲ. ಇದರಿಂದ ಅನೇಕರು ಕಚೇರಿಗಳಿಗೆ ಹೋಗಿ ಅಽಕಾರಿಗಳ ಜೊತೆ ಜಗಳವಾಡುವುದು ಸಾಮಾನ್ಯವಾಗಿದೆ. ಲೋಕಾಯುಕ್ತ ದಾಳಿಗಳು ನಡೆದಿವೆ. ಇದಕ್ಕೆ ಕಡಿವಾಣ ಹಾಕುತ್ತೇನೆಂದು ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ಹೇಳುತ್ತಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಅವರಿಗೆ ಸಹಕಾರ? ಉತ್ತರ ಇಲ್ಲವಾಗಿದೆ.