ಕೆರೂರ ಸಮೀಪದ ನರೆನೂರ ಗ್ರಾಮದಲ್ಲಿ ನೀಲಕಂಠಯ್ಯ ಗಣಾಚಾರಿ ಅವರ ಪುಣ್ಯಸ್ಮರಣೆ ನಿಮಿತ್ತ ಕೋಟಿ ಜಪಯಜ್ಞ ಹಾಗೂ ಪೂರ್ಣಕುಂಭ ಮೆರವಣಿಗೆ ನಡೆಯಿತು. 
ಬಾಗಲಕೋಟೆ

ನರೇನೂರು ಸಾಬರಮತಿ ಆಶ್ರಮದಂತಾಗಲಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ನೌಕರ ಪಂಚಾಕ್ಷರಯ್ಯ ಗಣಾಚಾರಿ ಆಶಯ
  • ಮದ್ಯ-ಧೂಮಪಾನ ಮುಕ್ತ
  • ಕೋಟಿ ಜಪಯಜ್ಞ ಆಯೋಜನೆ
ಕೆರೂರ : ಮದ್ಯಪಾನ ಮತ್ತು ಧೂಮಪಾನದಿಂದ ಮುಕ್ತವಾಗಿರುವ ನರೇನೂರು ಗ್ರಾಮವು ಸಾಬರಮತಿ ಆಶ್ರಮದಂತಾಗಲಿ ಎಂದು ನಿವೃತ್ತ ನೌಕರ ಪಂಚಾಕ್ಷರಯ್ಯ ಗಣಾಚಾರಿ ಹೇಳಿದರು.
ಸಮೀಪದ ನರೆನೂರ ಗ್ರಾಮದಲ್ಲಿ ಸೋಮವಾರ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕೋಟಿ ಜಪಯಜ್ಞ ಹಾಗೂ ನೀಲಕಂಠಯ್ಯ ಗಣಾಚಾರಿ ಅವರ ಹದಿನಾರನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯಪಾನ ಹಾಗೂ ಧೂಮಪಾನ ನಿಷೇಧಕ್ಕಾಗಿ ನೀಲಕಂಠಯ್ಯ ಗಣಚಾರಿ ಅವರು ಜೀವನದುದ್ದಕ್ಕೂ ಹೋರಾಟ ಮಾಡಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳನ್ನ ಗಾಂಧಿ ಕನಸಿನ ಆದರ್ಶ ಗ್ರಾಮಗಳನ್ನಾಗಿ ಸ್ಥಾಪಿಸುವಲ್ಲಿ ಹೆಸರುವಾಸಿಯಾದವರು. ಅವರ ಜೀವನ ಚರಿತ್ರೆ ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಮುಂದಿನ ವರ್ಷ 17ನೇ ಪುಣ್ಯಸ್ಮರಣೆ ಹಾಗೂ ಕೋಟಿ ಜಪಯಜ್ಞ ಕಾರ್ಯಕ್ರಮ ಅಂಗವಾಗಿ ರಥವನ್ನು ನಿರ್ಮಿಸಿ ರಥೋತ್ಸವ ವಿಜೃಂಭಣೆಯಿಂದ ಆಚರಿಸೋಣ ಎಂದು ತಿಳಿಸಿದರು.
ಬೆಳಗ್ಗೆ ಗ್ರಾಮದಲ್ಲಿ ಕೋಟಿ ಜಪಯಜ್ಞ ನಿಮಿತ್ಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ಪೂರ್ಣ ಕುಂಭ ಮೆರವಣಿಗೆ ನಡೆಯಿತು. ಬೆಳಗ್ಗೆ ನೀಲಕಂಠಯ್ಯ ಗಣಾಚಾರಿ ಅವರ ಪುಣ್ಯಸ್ಮರಣೆ ನಿಮಿತ್ಯ ಕರ್ತೃ ಗದ್ದುಗೆ ವಿವಿಧ ಪೂಜಾ ಕಾರ್ಯಗಳು ನಡೆದವು.
ಅಭಿನವ ಶಿವಾನಂದ ಸ್ವಾಮಿಗಳು, ಸೋಮನಕೋಪ್ಪ, ಕೈಲಾಸಪತಿ ಸ್ವಾಮಿ, ಅನವಾಲ, ಪಂಚಾಕ್ಷರಯ್ಯ ಗಣಾಚಾರಿ, ಗಂಗಯ್ಯ ಗಣಾಚಾರಿ, ಸುರೇಶಗೌಡ ಪಾಟೀಲ, ನಿಂಗಪ್ಪ ಬೆಳಗಂಟಿ, ಬಿ.ಜಿ. ಗೌಡರ, ಭರಮಪ್ಪ ಉದಗಟ್ಟಿ, ರಮೇಶ ದಾಸರ ಇತರರಿದ್ದರು.