ಬನಹಟ್ಟಿ ಬದ್ರನ್ನವರ ಕಲ್ಯಾಣ ಮಂಟಪದಲ್ಲಿ ಜರುಗಿದ ವೆಂಕಟೇಶ್ವರ ಹಾಗೂ ಪದ್ಮಾವತಿ ಕಲ್ಯಾಣೋತ್ಸವ ಸಮಾರಂಭದಲ್ಲಿ ಮಾಹೇಶ್ವರಿ ಸಮಾಜದ ಅನಂತಶ್ರೀ ವಿಭೂಷಿತ ಜಗದ್ಗುರು ತೋದ್ರಾದಿ ಸ್ವಾಮೀಜಿ ಮಾತನಾಡಿದರು. ಮುರಳಿಧರ ಕಾಬರಾ, ಸುರೇಶ ಚಿಂಡಕ ಇತರರಿದ್ದರು. 
ಬಾಗಲಕೋಟೆ

ಎಲ್ಲರ ಜೀವನ ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲಿ

ಪ್ರಮುಖ ಮುಖ್ಯಾಂಶಗಳು

  • ಜಗದ್ಗುರು ಶ್ರೀತೋದ್ರಾದಿ ಸ್ವಾಮೀಜಿ ಹೇಳಿಕೆ
  • ವೇಂಕಟೇಶ್ವರ-ಪದ್ಮಾವತಿ ದೇವಿ ಕಲ್ಯಾಣೋತ್ಸವ
ರಬಕವಿ/ಬನಹಟ್ಟಿ: ಜಾತಿ, ಧರ್ಮ, ಭಾಷೆ, ವರ್ಗಗಳ ಬೇಧವಿಲ್ಲದೆ ಎಲ್ಲರೂ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಬದುಕಬೇಕೆಂದು ಮಾಹೇಶ್ವರಿ ಸಮಾಜದ ಅನಂತ ವಿಭೂಷಿತ ಜಗದ್ಗುರು ಶ್ರೀತೋದ್ರಾದಿ ಸ್ವಾಮೀಜಿ ಹೇಳಿದರು.
ಬನಹಟ್ಟಿ ಬದ್ರನ್ನವರ ಕಲ್ಯಾಣಮಂಟಪದಲ್ಲಿ ಶನಿವಾರ ಜರುಗಿದ ವೇಂಕಟೇಶ್ವರ ಹಾಗೂ ಪದ್ಮಾವತಿ ದೇವಿ ಕಲ್ಯಾಣೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇವರ ಮೇಲಿನ ಭಕ್ತಿ, ನಂಬಿಕೆ ಮತ್ತು ಸತ್ಕಾರ್ಯಗಳ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಆತ್ಮತೃಪ್ತಿ ದೊರೆಯುತ್ತದೆ. ಎಲ್ಲರ ಜೀವನ ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲೆಂದು ಕೋರಿದರು.
ವೆಂಕಟೇಶ್ವರ ಕಲ್ಯಾಣೋತ್ಸವ ಶ್ರೀನಿವಾಸ ಮತ್ತು ಪದ್ಮಾವತಿ ದೇವಿ ದಿವ್ಯ ವಿವಾಹ ಮಹೋತ್ಸವವಾಗಿದೆ. ಭಕ್ತರಲ್ಲಿ ಕೌಟುಂಬಿಕ ಸೌಹಾರ್ದತೆ ತರಲು ಈ ಪೂಜೆ ನಡೆಸಲಾಗುತ್ತದೆ. ಇದು ವೈವಾಹಿಕ ಸುಖವನ್ನು ಕರುಣಿಸುತ್ತದೆ ಎಂದು ಆದಿಕಾಲದಿಂದಲೂ ನಂಬಲಾಗಿದೆ ಎಂದರು.
ಮಾಹೇಶ್ವರಿ ಸಮಾಜದ ತಾಲೂಕಾಧ್ಯಕ್ಷ ಮುರಳಿಧರ ಕಾಬರಾ, ಸುರೇಶ ಚಿಂಡಕ, ಓಂಪ್ರಕಾಶ ಕಾಬರಾ, ಗೋವಿಂದ ಡಾಗಾ, ಸತ್ಯನಾರಾಯಣ ಸಾರಡಾ, ಪುರುಷೋತ್ತಮ ಚಿಂಡಕ, ಗಟ್ಟು ಮಾಲಪಾನಿ, ಸುಮಿತ ಮಾಲಪಾನಿ, ರಾಮಕಿಶನ ಲಡ್ಡಾ, ಭಗವಾನ ಲಡ್ಡಾ, ಬಬಲು ಚಿಂಡಕ, ಮಹಿಳಾ ಮಂಡಳ ಅಧ್ಯಕ್ಷೆ ಜ್ಯೋತಿ ಕಾಬರಾ, ಪದ್ಮಾ ಮಾಲಪಾನಿ ಇತರರಿದ್ದರು.