ಇಳಕಲ್ಲ ಕೋ-ಆಪ್‌ರೇಟಿವ್ ಬ್ಯಾಂಕ್‌ನ ನೂತನ ಅಧ್ಯಕ್ಷ ಮಂಜುನಾಥ ಶೆಟ್ಟರ, ಉಪಾಧ್ಯಕ್ಷ ಪ್ರವೀಣ ಹೂಲಗೇರಿ ಅವರನ್ನು ಸತ್ಕರಿಸಲಾಯಿತು. ಪಂಪಣ್ಣ ಕಾಳಗಿ, ಗೌತಮ ಬೋರಾ, ವಿಜಯ ಗಿರಡ್ಡಿ, ಮಲ್ಲಿಕಾರ್ಜು ಅಗ್ನಿ, ಅರವಿಂದ ಮಂಗಳೂರ, ಬಸವರಾಜ ತಾಳಿಕೋಟಿ, ಸತೀಶ ಸಪ್ಪರದ ಇದ್ದರು.
- ಕೋ-ಆಪ್‌ರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷ
- ಉಪಾಧ್ಯಕ್ಷರಾಗಿ ಪ್ರವೀಣ ಹೂಲಗೇರಿ ಆಯ್ಕೆ
ಇಳಕಲ್ಲ: ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಳಕಲ್ಲ ಕೋ-ಆಪ್‌ರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಮಂಜುನಾಥ ಶೆಟ್ಟರ, ಉಪಾಧ್ಯಕ್ಷರಾಗಿ ಪ್ರವೀಣ ಹೂಲಗೇರಿ ಸರ್ವಾನುಮತದಿಂದ ಮಂಗಳವಾರ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ಪಂಪಣ್ಣ ಕಾಳಗಿ, ಲಕ್ಷ್ಮಣ ಗುರಂ, ಗೌತಮ ಬೋರಾ, ಮಹಾಂತೇಶ ಅಂಗಡಿ, ವಿಜಯ ಗಿರಡ್ಡಿ, ಮಲ್ಲಿಕಾರ್ಜು ಅಗ್ನಿ, ಅರವಿಂದ ಮಂಗಳೂರ, ಬಸವರಾಜ ತಾಳಿಕೋಟಿ, ಸತೀಶ ಸಪ್ಪರದ, ಮುತ್ತುರಾಜ ಅಕ್ಕಿ, ಮಹಾಂತೇಶ ಕಂಪ್ಲಿ, ಶಾಂತಕುಮಾರ ಸುರಪುರ, ಡಾ. ಅರುಣಾ ಅಕ್ಕಿ, ಲತಾ ಹೇರೂರ ಮತ್ತು ಬ್ಯಾಂಕ್ ವ್ಯವಸ್ಥಾಪಕ ನಾಗರಾಜ ಕುಟುಗಮರಿ, ಸಿಬ್ಬಂದಿ ವರ್ಗದವರು ಇದ್ದರು.