ಕಲಾದಗಿಯಲ್ಲಿ ಬಿಜೆಪಿಯಿಂದ ನಡೆದ ಎಸ್‌ಐಆರ್ ಹಾಗೂ ಪಕ್ಷ ಸಂಘಟನೆಯ ಕುರಿತ ಸಭೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಡಾ.ಮುರುಗೇಶ ಆರ್. ನಿರಾಣಿ ಮಾತನಾಡಿದರು. ಮುಖಂಡರಾದ ಶಿವಣ್ಣಾ ಅಂಗಡಿ, ಕೆ.ಆರ್. ಶಿಲ್ಪಿ, ಕೆ.ಎಲ್. ಬಿಲಕೇರಿ, ಲಕ್ಷ್ಮಣಗೌಡ ಗೌಡರ, ಬಶೆಟ್ಟೆಪ್ಪ ಅಂಗಡಿ, ಶ್ರೀಧರ ವಾಘ, ವಿಠಲ ಯತ್ನಟ್ಟಿ ಇದ್ದರು. 
ಬಾಗಲಕೋಟೆ

ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿಕೆ
  • ಬಿಜೆಪಿಯಿಂದ ಎಸ್‌ಐಆರ್ ಸಭೆ
  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯ
ಕಲಾದಗಿ: ಮತದಾನ ಪಟ್ಟಿ ಪರಿಕ್ಷರಣೆ ಎಂಬುದು ಪ್ರತಿ ಇಪ್ಪತ್ತು ವರ್ಷಕ್ಕೊಮ್ಮೆ ನಡೆಯುವ ಸಂವಿಧಾನಬದ್ಧ ಕಾರ್ಯವಾಗಿದ್ದು, ಇದರಲ್ಲಿ ಎಲ್ಲರೂ ಜವಾಬ್ದಾರಿಯಿಂದ ಪಾಲ್ಗೊಂಡು ಯಾರೊಬ್ಬರು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಪಕ್ಷದ ಎಲ್ಲಾ ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯಕರ್ತರ ಹಾಗೂ ಮುಖಂಡ ಮೇಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಮಾಜಿ ಸಚಿವ ಡಾ. ಮುರುಗೇಶ ಆರ್. ನಿರಾಣಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಭಾರತೀಯ ಜನತಾ ಪಕ್ಷದ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಎಸ್‌ಐಆರ್ ಹಾಗೂ ಪಕ್ಷ ಸಂಘಟನೆಯ ಕುರಿತ ಬೂತ್ ಅಧ್ಯಕ್ಷರು, ಬಿಎಲ್‌ಎ-2 ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿದ್ದು, ವೈಯಕ್ತಿಕವಾಗಿ ಹಾಗೂ ಪಕ್ಷದ ಹಿತದೃಷ್ಟಿಯಿಂದ ಇದು ಮಹತ್ವದ್ದಾಗಿದೆ. ಎಲ್ಲರೂ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಬೇಕು ಎಂದು ಕೋರಿದರು.
ಈ ಪ್ರಕ್ರಿಯೆ ವೇಗವಾಗಿ ಮತ್ತು ಸರಿಯಾಗಿ ನಡೆಯಲು ಪ್ರತಿ ಬೂತ್‌ಗೆ ಇಬ್ಬರಂತೆ ಕ್ಷೇತ್ರಾದ್ಯಂತ ಐದು ನೂರು ಜನರನ್ನು ಕಳಿಸಲಾಗುವುದು ಎಂದು ಹೇಳಿದ ಅವರು ಎನ್ಯುಮರೇಶನ್ ಾರ್ಮ್ ತುಂಬುವಲ್ಲಿ ಏನಾದರೂ ಗೊಂದಲವಾದರೆ ಹೆಲ್ಪ್‌ಲೈನ್ ಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಲು ಕೋರಿದರು.
ಮುಖಂಡರಾದ ಶಿವಣ್ಣಾ ಅಂಗಡಿ, ಕೆ.ಆರ್. ಶಿಲ್ಪಿ, ಕೆ.ಎಲ್. ಬಿಲಕೇರಿ, ಲಕ್ಷ್ಮಣಗೌಡ ಗೌಡರ, ಬಶೆಟ್ಟೆಪ್ಪ ಅಂಗಡಿ, ಶ್ರೀಧರ ವಾಘ, ವಿಠಲ ಯತ್ನಟ್ಟಿ, ಬಸವರಾಜ ಪುಂಡಿಕಟಗಿ, ಅಬ್ದುಲ್‌ಖಾನ ಪಠಾಣ, ಪರಚನ ಗೌಡರ, ಬಸವರಾಜ ಮಂಟೂರ, ರಾಜೂ ಪೂಜಾರಿ ಇದ್ದರು.