ಬಾಗಲಕೋಟೆ ಬಿವಿವಿ ಸಂಘದ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಗುರುವಾರ ಕಾರ್ಮಿಕರ ರಾಜ್ಯ ವಿಮಾ ಯೋಜನೆ ಆಶ್ರಯದಲ್ಲಿ ಇಎಸ್‌ಐ ವಿಮಾದಾರರಿಗೆ ವೈದ್ಯಕೀಯ ಫಲಾನಿಭವಿಗಳ ತಿಳಿವಳಿಕೆ ಕಾರ್ಯಕ್ರಮದಲ್ಲಿ ಇಎಸ್‌ಐ ಅಧಿಕಾರಿ ಡಾ. ಮಾನಸಾ ಮಾತನಾಡಿದರು. ಪ್ರಾಚಾರ್ಯ ಎಂ.ಎಸ್.ಹಿರೇಮಠ, ಎಂ.ಆರ್. ನಾಗರಾಜ್, ಎಚ್.ಎನ್. ಯಾದವಾಡ ಮತ್ತಿತರರು ಇದ್ದರು. 
ಬಾಗಲಕೋಟೆ

ಇಎಸ್‌ಐ ಸದ್ಬಳಕೆ ಮಾಡಿಕೊಳ್ಳಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿ ಡಾ. ಮಾನಸಾ ಮಾಹಿತಿ
  • ವಿಮಾದಾರರಿಗೆ ವೈದ್ಯಕೀಯ ಫಲಾನುಭವಿಗಳ ತಿಳಿವಳಿಕೆ
  • ಬಿವಿವಿ ಸಂಘದ ಆರ್ಯವೇದಿಕ್ ಮಹಾವಿದ್ಯಾಲಯ
ಬಾಗಲಕೋಟೆ : ಇಎಸ್‌ಐ ಕಾರ್ಡ್‌ನಿಂದ ಫಲಾನುಭವಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ಹೆಚ್ಚಿನ ಚಿಕಿತ್ಸೆಗೆ ಅನುಕೂಲವಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಇಎಸ್‌ಐ ಅಧಿಕಾರಿ ಡಾ. ಮಾನಸಾ ಹೇಳಿದರು.
ನಗರದ ಬಿವಿವಿ ಸಂಘದ ಆರ್ಯವೇದಿಕ್ ಮಹಾವಿದ್ಯಾಲಯ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆರ್ಯುವೇದಿಕ್ ಕಾಲೇಜಿನ ಸಭಾಭವನದಲ್ಲಿ ನಡೆದ ಇಎಸ್‌ಐ ವಿಮಾದಾರರಿಗೆ ವೈದ್ಯಕೀಯ ಲಾನುಭವಿಗಳ ತಿಳಿವಳಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಎಸ್‌ಐ ಕಾರ್ಡ್‌ನಿಂದ 20 ಸಾವಿರ ರೂ. ಹಾಗೂ ಅಂಗವಿಕಲರಿಗೆ 25 ಸಾವಿರ ರೂ. ನೀಡಲಾಗುವುದು. ಅದರ ಉಪಯೋಗವನ್ನು ಸರಿಯಾಗಿ ಬಳಸಿಕೊಳ್ಳಲು ಫಲಾನುಭವಿಗಳು ಇ-ಪೇಶೆಂಟ್ ಕಾರ್ಡ್‌ನಲ್ಲಿ ಮಾಹಿತಿಯನ್ನು ದೋಷಗಳಿಲ್ಲದಂತೆ ಭರ್ತಿ ಮಾಡಬೇಕು ಹಾಗೂ ಅದರಲ್ಲಿ ಕುಟುಂಬ ಸದಸ್ಯರ ಮಾಹಿತಿ ಮತ್ತು ೆಟೋವನ್ನು ಲಗತ್ತಿಸಿರಬೇಕು ಎಂದು ಹೇಳಿದರು.
ಇಎಸ್‌ಐ ಕಾರ್ಡ್‌ನಿಂದ ಹೃದಯಘಾತ, ಅಪಘಾತ, ಸುಟ್ಟ ಗಾಯ, ವಿಶಪ್ರಾಷಣ, ಹಾವು ಕಚ್ಚಿದಾಗ, ಲಕ್ವಾ, ಗರ್ಭಪಾತ, ಡೆಂೆ ಜ್ವರ ಇವುಗಳಿಗೆ ಹೊರಗಡೆ ಚಿಕಿತ್ಸೆ ಪಡೆದರೂ ನಿಗದಿತ ಸಮಯದಲ್ಲಿ ರೆಫೆರೆನ್ಸ್ ಲೆಟರ್, ಈ ಪೇಶೆಂಟ್ ಕಾರ್ಡ್ (ಇದನ್ನು ಆರು ತಿಂಗಳಿಗೊಮ್ಮೆ ಅಪ್‌ಡೇಟ್ ಮಾಡಬೇಕು), ಕೆಲಸ ಮಾಡುವ ಸ್ಥಳದಿಂದ ಸೇವಾ ಪ್ರಮಾಣ ಪತ್ರ, ರೋಗಿಯ ಆಧಾರ್ ಕಾರ್ಡ್ ಮತ್ತು ಎರಡು ೆಟೋ ಸಮೇತ ಸಮಯಕ್ಕೆ ಸರಿಯಾಗಿ ಸಿದ್ಧಮಾಡಿಕೊಂಡರೆ ಇಎಸ್‌ಐ ಅಡಿಯಲ್ಲಿ ಸರಳವಾಗಿ ಅನುಕೂಲ ಪಡೆಯಬಹುದು ಎಂದರು.
ಪ್ರಾಚಾರ್ಯ ಎಂ.ಎಸ್. ಹಿರೇಮಠ ಮಾತನಾಡಿ, ಇಎಸ್‌ಐ ಅಡಿಯಲ್ಲಿ ಸಿಗುವಂತಹ ಎಲ್ಲಾ ಅನುಕೂಲಗಳನ್ನು ಪಡೆಯುವಲ್ಲಿ ಫಲಾನುಭವಿಗಳು ಯಶಸ್ವಿಯಾಗಿಲ್ಲ. ಇನ್ನೂ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಅದಕ್ಕಾಗಿ ಇಂತಹ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅವರಿಗೆ ಸಹಾಯವಾಗುತ್ತದೆ ಎಂದು ಹೇಳಿದರು.
ಇಎಸ್‌ಐ ಕಾರ್ಯದರ್ಶಿ ಎಂ.ಆರ್. ನಾಗರಾಜ, ಎಚ್.ಎನ್. ಯಾದವಾಡ, ಇಎಸ್‌ಐ ಸಿಬ್ಬಂದಿ ಚಂದ್ರಶೇಖರ ಇದ್ದರು.