ರಬಕವಿ ಮಹಿಷವಾಡಗಿ ಸೇತುವೆ ಕಾಮಗಾರಿ ಸ್ಥಳದಲ್ಲಿ ಸಂಜು ಜೋತಾವರ ಹಾಗೂ ತಂಡದಿಂದ ಸಂಗೀತ ಗಾಯನದ ಮೂಲಕ ಕಾರ್ಮಿಕರಿಗೆ ಪ್ರೋತ್ಸಾಹ ನೀಡುತ್ತಿರುವುದು. ರಾಮಣ್ಣ ಹುಲಕುಂದ, ಮಹಾದೇವ ದೂಪದಾಳ, ಹೊನ್ನಪ್ಪ ಬಿರಡಿ ಇತರರಿದ್ದರು.
- ಹೋರಾಟಗಾರರಿಂದ ಸ್ಥಳದಲ್ಲೇ ಬಿಡಾರ
- ರಬಕವಿ ಬಂದ್ ವಾಪಾಸ್
- ಕಾರ್ಮಿಕರನ್ನು ಪ್ರೋತ್ಸಾಹಿಸಲು ಸಂಗೀತ ಗಾಯನ
ರಬಕವಿ/ಬನಹಟ್ಟಿ : ಮಹಿಷವಾಡಗಿ ಸೇತುವೆ ಕಾಮಗಾರಿ ವಿಳಂಬಕ್ಕೆ ವಿರೋಧವಾಗಿ ನಡೆದ ಹೋರಾಟ ಹಿನ್ನೆಲೆಯಲ್ಲಿ ಆರಂಭವಾಗಿದ್ದ ರಬಕವಿ ಬಂದ್ ಕರೆ ಹಿಂಪಡೆಯಲಾಗಿದೆ. ಅಧಿಕಾರಿಗಳ ಭರವಸೆಯ ಬಳಿಕ ಹೋರಾಟಗಾರರು ಕಾಮಗಾರಿ ಸ್ಥಳದಲ್ಲೇ ಬಿಡಾರ ಹೂಡಿ ಕಾಮಗಾರಿ ವೇಗ ಹೆಚ್ಚಿಸಲು ಮುಂದಾಗಿದ್ದಾರೆ.
ಮಂಗಳವಾರದಿಂದ ಹಗಲು-ರಾತ್ರಿ ಪಾಳಿಯಲ್ಲಿ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಉದ್ದಿಮೆದಾರ ಹಾಗೂ ಗಾಯಕ ಸಂಜು ಜೋತಾವರ ತಮ್ಮ ತಂಡದೊಂದಿಗೆ ಸಂಗೀತ ಗಾಯನ ನಡೆಸಿ ಕಾರ್ಮಿಕರನ್ನು ಪ್ರೋತ್ಸಾಹಿಸುತ್ತಿರುವುದು ಗಮನ ಸೆಳೆದಿದೆ.
ನದಿಯೊಳಗಿನ ಪಿಲ್ಲರ್ ಸಂಖ್ಯೆ 7 ಮತ್ತು 8 ಕಾಮಗಾರಿಯನ್ನು ಬೇಸಿಗೆ ಮುಗಿಯುವೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ ಬದಿಯ ರೈತರಿಗೆ ಭೂಸ್ವಾೀನ ಪರಿಹಾರ ನೀಡಲಾಗಿದ್ದು, ಗುತ್ತಿಗೆದಾರ ಹಾಗೂ ಅಧಿಕಾರಿಗಳು ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಹೋರಾಟಗಾರರು ಕಾಮಗಾರಿ ಪೂರ್ಣಗೊಳ್ಳುವವರೆಗೆ ಸ್ಥಳದಲ್ಲೇ ಉಳಿದು ನಿಗಾವಹಿಸುವುದಾಗಿ ತಿಳಿಸಿದ್ದಾರೆ.
ಹಿರಿಯರಾದ ರಾಮಣ್ಣ ಹುಲಕುಂದ, ಹೊನ್ನಪ್ಪ ಬಿರಡಿ, ಮಹ್ಮದ್ ಮಕಾನದಾರ, ಬಸವರಾಜ ಮನ್ಮಿ, ಬುದ್ದಪ್ಪ ಕುಂದಗೋಳ, ಸುನೀಲ ಬನಹಟ್ಟಿ, ಯಮನಪ್ಪ ದೊಡಮನಿ, ಮಹ್ಮದ್ ಝಾರೆ, ಚಿದಾನಂದ ಪಟ್ಟಣಶೆಟ್ಟಿ, ಸದಾಶಿವ ನಾಯಕ, ಸಂಗಮೇಶ ಮಡಿವಾಳ, ಪುಲಕೇಶಿ ಅಕ್ಕೆನ್ನವರ, ರಾಜು ಲೆಂಡಿ, ಕಷ್ಣಾ ಲೆಂಡಿ, ಭೀಮಶಿ ಪಾಟೀಲ, ಸದಾಶಿವ ಖವಾಸಿ, ಪ್ರವೀಣ ಹಜಾರ ಸೇರಿ ಅನೇಕರಿದ್ದರು.
"
ಕಾಮಗಾರಿ ಬೇಗ ಮುಕ್ತಾಯಗೊಳ್ಳಬೇಕೆಂಬ ಒತ್ತಾಯವಾಗಿದೆ. ಕಾರ್ಮಿಕರೂ ಸಹಿತ ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ. ಸಂಗೀತದ ಮೂಲಕ ಅವರನ್ನು ಪ್ರೋತ್ಸಾಹಿಸುವುದರೊಂದಿಗೆ ಕಾರ್ಯವೇಗವಾಗಲೆಂಬುದು ನಮ್ಮ ಉದ್ದೇಶ.
-ಸಂಜು ಜೋತಾವರ, ಗಾಯಕರು,ಉದ್ದಿಮೆದಾರರು, ರಬಕವಿ