ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದಿಂದ ೨೦೨೦ ರಿಂದ ೨೦೨೪ರ ಅವಽಯಲ್ಲಿ ೧೮ ಅನರ್ಹರಿಗೆ ನಿವೇಶನ ಹಂಚಿಕೆ ಮಾಡಿರುವ ದೂರಿನ ಹಿನ್ನಲೆಯಲ್ಲಿ ಶುಕ್ರವಾರ ಲೋಕಾ ಅಽಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿರುವುದು. ಲೋಕಾ ಎಸ್ಪಿ ಎಂ.ಬಿ.ನAದಗಾವಿ ಹಾಗೂ ಡಿಎಸ್ಪಿ ಸುರೇಶ ರೆಡ್ಡಿ ಮತ್ತಿತರರು ಇದ್ದರು. 
ಬಾಗಲಕೋಟೆ

ಬಿಟಿಡಿಎ ಮೇಲೆ ಲೋಕಾಯುಕ್ತರ ದಾಳಿ

ಸಂತೋಷ ದೇಶಪಾಂಡೆ
ಬಾಗಲಕೋಟೆ: ಅಕ್ರಮ ಮತ್ತು ಭ್ರಷ್ಟಾಚಾರದ ಮೂಲಕವೇ ಹೆಚ್ಚೆಚ್ಚು ಸದ್ದು ಮಾಡುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದ ಮೇಲೆ ಶುಕ್ರವಾರ ಲೋಕಾಯುಕ್ತ ಅಽಕಾರಿಗಳ ತಂಡವೂ ದಾಳಿ ನಡೆಸಿದೆ.
ಬಿಟಿಡಿಎನಲ್ಲಿ ಅರ್ಹರಲ್ಲದ ೧೮ ಜನರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಲೋಕಾಯುಕ್ತ ಕಚೇರಿಗೆ ಸಾರ್ವಜನಿಕರು ಸಲ್ಲಿಸಿರುವ ದೂರು ಆಧರಿಸಿ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದುಕೊಂಡು ಶುಕ್ರವಾರ ಲೋಕಾ ಅಽಕಾರಿಗಳ ತಂಡಗಳು ಅನೇಕ ಕಡತ ಮತ್ತು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಎಂ.ಬಿ.ನAದಗಾವಿ ಮಾರ್ಗದರ್ಶನದಲ್ಲಿ ಲೋಕಾ ಡಿಎಸ್ಪಿ ಸುರೇಶ ರೆಡ್ಡಿ ಎಂ.ಎಸ್.ನೇತೃತ್ವದಲ್ಲಿ ಬಾಗಲಕೋಟೆ, ಗದಗ, ಧಾರವಾಡ ಲೋಕಾಯುಕ್ತ ಅಽಕಾರಿಗಳು ಮತ್ತು ಸಿಬ್ಬಂದಿ ಬಿಟಿಡಿಎ ಮುಖ್ಯ ಅಭಿಯಂತರರ ಕಚೇರಿ ಮತ್ತು ಪುನರ್ವಸತಿ ಅಽಕಾರಿಗಳ ಕಾರ್ಯಾಲಯದಲ್ಲಿ ಶೋಧ ಕಾರ್ಯ ನಡೆದಿದೆ.
೨೦೨೦ ರಿಂದ ೨೦೨೪ ರ ಅವಽಯಲ್ಲಿ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಮನೆ/ಖುಲ್ಲಾ, ಜಾಗೆ/ಬಾಡಿಗೆದಾರರಿಗೆ ಉಚಿತ ಹಂಚಿಕೆಯಲ್ಲಿ ಬಿಟಿಡಿಎ ಅಽಕಾರಿ ಮತ್ತು ಸಿಬ್ಬಂದಿ ಸೇರಿಕೊಂಡು ಜನರು ಬಾಡಿಗೆ ಇಲ್ಲದಿದ್ದರೂ ಅಕ್ರಮವಾಗಿ ಬಾಡಿಗೆದಾರರೆಂದು ಉಚಿತ ನಿವೇಶನ ಹಂಚಿಕೆ ಮಾಡಿ ಅವರಿಗೆ ಹಕ್ಕು ಪತ್ರ ವಿತರಿಸಿ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿದ್ದಾರೆಂದು ಲೋಕಾಯುಕ್ತ ಕಚೇರಿಗೆ ಸಾರ್ವಜನಿಕರು ದೂರು ಕೊಟ್ಟಿದ್ದರು.
ದೂರಿನಲ್ಲಿ ತಿಳಿಸಿರುವ ೧೮ ನಿವೇಶನ ಅಕ್ರಮವಾಗಿ ನೀಡಿರುವ ದಾಖಲೆಗಳನ್ನು ಪರಿಶೀಲಿಸಿದ್ದು, ಮೇಲ್ನೋಟಕ್ಕೆ ದೂರಿನ ಅಂಶಗಳು ಕಂಡು ಬಂದಿವೆ. ಇನ್ನು ೨೦೨೦ ರಿಂದ ೨೦೨೪ರ ವರೆಗೆ ಹಂಚಿಕೆ ಮಾಡಿರುವ ನಿವೇಶನಗಳ ಎಲ್ಲ ದಾಖಲೆಗಳನ್ನು ಲೋಕಾ ಅಽಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಅವಽಯಲ್ಲಿ ಹಂಚಿಕೆ ಮಾಡಿರುವ ೬೦೦ಕ್ಕೂ ಅಽಕ ದಾಖಲೆಗಳನ್ನು ಇದೀಗ ಲೋಕಾಯುಕ್ತರು ಇಂಚಿAಚಾಗಿ ಶೋಽಸುತ್ತಿದ್ದಾರೆ. ಹೆಚ್ಚಿನ -ÉÊಲ್‌ಗಳನ್ನು ಪರಿಶೀಲಿಸುವ ಕಾರ್ಯ ಇರುವುದರಿಂದ ಒಂದು ದಿನಕ್ಕೆ ಮುಗಿಯುವುದಿಲ್ಲ. ಇನ್ನೂ ಎರಡ್ಮೂರು ದಿನಗಳ ವರೆಗೂ ದಾಖಲೆಗಳ ಪರಿಶೀಲನೆ ನಡೆದಿದ್ದು, ೧೮ ಪ್ರಕರಣಗಳನ್ನು ಹೊರತುಪಡಿಸಿ ಮತ್ತೆ ಬೇರೆ ಬೇರೆ ಅನರ್ಹರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಲೋಕಾಯುಕ್ತರು ಶೋಽಸುತ್ತಿದ್ದಾರೆ.