ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಡಾ.ಕ್ಷಮತಾ ಕೆರೂಡಿ ಮಾತನಾಡಿದರು. ಡಿಂಕೇಶ ರ‍್ಹನಾಪೂರ, ಅಶೋಕ ರುದ್ರಾಕ್ಷಿ, ಡಾ.ಸಾಮ್ರಾಟ ಯೋಗಪ್ಪನವರ ಮತ್ತಿತರರು ಇದ್ದರು. 
ಬಾಗಲಕೋಟೆ

ಜು. ೧೨ ರಂದು ಲಯನ್ಸ್ ಪದಾಧಿಕಾರಿಗಳ ಪದಗ್ರಹಣ

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಕಳೆದ ೫೫ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಲಯನ್ಸ್ ಕ್ಲಬ್‌ನ ೨೦೨೬-೨೭ನೇ ಸಾಲಿನ ೫೬ನೇ ನೂತನ ಪದಾಽಕಾರಿಗಳ ಪದಗ್ರಹಣವು ಜು. ೧೨ ರಂದು ಭಾನುವಾರ ಸಂಜೆ ೬ ಗಂಟೆಗೆ ನಗರದ ಸಿ.ವಿ. ಚರಂತಿಮಠ ಲಯನ್ಸ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಿಂಕೇಶ ರ‍್ಹನಾಪೂರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯ ರೋಗ ತಜ್ಷೆ ಡಾ. ಕ್ಷಮತಾ ಕೆರೂಡಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಾಗಲಕೋಟೆ ಲಯನ್ಸ್ ಕ್ಲಬ್‌ಗೆ ಮಹಿಳೆಯೊಬ್ಬರು ಜಿಲ್ಲಾಧ್ಯಕ್ಷರಾಗಿರುವುದು ಇದೇ ಮೊದಲು ಎಂದ ಅವರು, ಕ್ಲಬ್‌ಗೆ ಕಾರ್ಯದರ್ಶಿಯಾಗಿ ಯುವ ಉದ್ಯಮಿ ಅಶೋಕ ರುದ್ರಾಕ್ಷಿ ಮತ್ತು ಖಜಾಂಚಿಯಾಗಿ ಡಾ.ಸಾಮ್ರಾಟ್ ಯೋಗಪ್ಪನವರ ಅವರು ಅಽಕಾರ ವಹಿಸಿಕೊಳ್ಳಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅಂಗಸAಸ್ಥೆಯಾದ `ಲೇಡಿ ಲಯನ್ಸ್ ಕ್ಲಬ್ ಆಫ್ ಬಾಗಲಕೋಟೆ ನೂತನ ಅಧ್ಯಕ್ಷರಾಗಿ ಸುಮಾ ಪಟ್ಟಣಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಸೀಮಾ ಮನ್ನೂರ ಅವರು ಅಽಕಾರ ವಹಿಸಿಕೊಳ್ಳಲಿದ್ದಾರೆ. ಅಂದಿನ ಕಾರ್ಯಕ್ರಮಕ್ಕೆ ಪದಗ್ರಹಣ ಅಽಕಾರಿಯಾಗಿ ಜಿಲ್ಲಾ ಲಯನ್ಸ್ ಲಿಯೋ ಸಂಯೋಜಕಿ ಭಾರತಿ ವಡವಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಧಾರವಾಡದ ಅಭಿನಯ ಭಾರತಿಯ ಅಧ್ಯಕ್ಷ ಎ.ಕೆ. ಕುಲಕರ್ಣಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ನೂತನ ಅಧ್ಯಕ್ಷೆಯಾಗಿ ಆಯ್ಕೆ ಆಗಿರುವ ಡಾ. ಕ್ಷಮತಾ ಕೆರೂಡಿ ಮಾತನಾಡಿ, ಸಮಾಜದಲ್ಲಿನ ಬಡವರು, ಹಿಂದುಳಿದವರು, ಕಾರ್ಮಿಕರ ಮಕ್ಕಳು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ಗುರಿಯೊಂದಿಗೆ ಲಯನ್ಸ್ ಕ್ಲಬ್ ಈ ವರ್ಷ ಹತ್ತಾರು ಹೊಸ ಮತ್ತು ಶಾಶ್ವತ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಆರೋಗ್ಯ ಸೇವೆಯ ಜೊತೆಗೆ ನಗರದ ಬಡ ತರಕಾರಿ ವ್ಯಾಪಾರಿಗಳಿಗೆ ಛತ್ರಿಗಳ ವಿತರಣೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ವಿಶೇಷ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಸೇರಿದಂತೆ ಈ ವರ್ಷ ಅನೇಕ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುವ ವಿವರವನ್ನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಅಶೋಕ ರುದ್ರಾಕ್ಷಿ, ಖಜಾಂಚಿ ಡಾ.ಸಮರ್ಥ ಯೋಗಪ್ಪನವರ, ಸುಮಾ ಆರ್.ಪಟ್ಟಣಶೆಟ್ಟಿ, ಸೀಮಾ ಮನ್ನೂರ, ತೃಪ್ತಿ ದರ್ಬಾರ ಇತರರು ಇದ್ದರು.