ರಬಕವಿ ಹಿಂದೂ ರುದ್ರಭೂಮಿಯಲ್ಲಿನ ಬೃಹತ್ ಶಿವನ ಮೂರ್ತಿಗೆ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಪೂಜೆ ಸಲ್ಲಿಸಿದರು. ಸಿದ್ದು ಕೊಣ್ಣೂರ, ಈಶ್ವರ ನಾಗರಾಳ, ಪ್ರಭು ಉಮದಿ, ಕವಿತಾ ಕೊಣ್ಣೂರ ಇದ್ದರು.
- ಗುರುಸಿದ್ಧೇಶ್ವರ ಶ್ರೀಗಳು ಹೇಳಿಕೆ
- ಬೃಹತ್ ಶಿವನ ಮೂರ್ತಿಗೆ ಪೂಜೆ
- ಮಹಾ ಶಿವರಾತ್ರಿ ಹಿಂದೂ ಧರ್ಮದಲ್ಲಿ ಭಕ್ತಿಯಿಂದ ಆಚರಿಸಲಾಗುತ್ತದೆ
ರಬಕವಿ-ಬನಹಟ್ಟಿ: ಮಹಾ ಶಿವರಾತ್ರಿ ಹಿಂದೂ ಧರ್ಮದಲ್ಲಿ ಭಕ್ತಿಯಿಂದ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಶಿವನು ಸ್ವಯಂಭೂನಾಗಿದ್ದು, ನಿತ್ಯ ಶಿವಧ್ಯಾನ ಮಾಡುವುದರಿಂದ ಜೀವನ ಪಾವನವಾಗುತ್ತದೆ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ಮಹಾಶಿವರಾತ್ರಿ ನಿಮಿತ್ತ ಭಾನುವಾರ ರಬಕವಿ ಹಿಂದೂ ರುದ್ರಭೂಮಿಯಲ್ಲಿನ ಬೃಹತ್ ಶಿವನ ಮೂರ್ತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ವಿಷ್ಣು ಪುರಾಣದಲ್ಲಿ ಅವನ ಉದ್ಭವದ ಕುರಿತು ಹಲವು ಕಥೆಗಳು ಉಲ್ಲೇಖವಾಗಿವೆ. ಬಸವಣ್ಣನವರ ವಚನಗಳಲ್ಲಿ ಶಿವನು ಕೇವಲ ಪೂಜಿಸುವ ವಸ್ತುವಲ್ಲ, ಅದು ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ಅಡಗಿರುವ ಅರಿವು ಎಂದು ವಿವರಿಸಿದ ಅವರು, ನಗರದ ಯುವಕರು ಸೇರಿ ಹಿಂದೂ ರುದ್ರಭೂಮಿ ಸುಂದರ ಶಿವನ ಉದ್ಯಾನವನವಾಗಿ ಮಾಡಿದ್ದು, ಸಂತಸದ ವಿಷಯ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿದರು. ಮುಖಂಡರಾದ ಪ್ರಭು ಉಮದಿ, ಈಶ್ವರ ನಾಗರಾಳ, ಈರಣ್ಣ ಗುಣಕಿ, ಪ್ರಭು ಉಮದಿ, ಪ್ರಭು ಪೂಜಾರಿ, ಶೇಖರ ಕೊಟ್ರಶೆಟ್ಟಿ, ಸಂಜಯ ಜೋತಾವರ, ದಯಾನಂದ ಬಾಗಲಕೋಟಮಠ, ಸಾಗರ ನಿಪ್ಪಾಣಿ, ಸಂಜಯ ತೆಗ್ಗಿ, ಡಾ.ಜಿ.ಎಚ್.ಚಿತ್ತರಗಿ, ಮಾರುತಿ ನಾಯಕ್, ಡಾ.ದೀಪಾಲಿ ಡಂಗಿ, ಲತಾ ಜೋತಾವರ ಇದ್ದರು.