ರಬಕವಿಯ ಶ್ರೀಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀರಥದ ಗಾಲಿ ಪೂಜೆ ಹಾಗೂ ಅನ್ನದಾಸೋಹ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಡಾ. ಸಂಗಮೇಶ ಹತಪಾಕಿ, ರೇವಣ್ಣ ಉಮದಿ, ಸೋಮಶೇಖರ ಕೊಟ್ರಶೆಟ್ಟಿ ಇದ್ದರು. 
ಬಾಗಲಕೋಟೆ

ಸೇವಾ ಮನೋಭಾವ ಬೆಳೆಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ಡಾ. ಸಂಗಮೇಶ ಹತಪಾಕಿ ಹೇಳಿಕೆ
  • ದಾಸೋಹದ ಮೂಲಕ ಮಾನವೀಯತೆ ಮೆರೆದ ಫೌಂಡೇಷನ್
  • ಹಸಿದವರಿಗೆ ಆಹಾರ ಒದಗಿಸುವುದು ಕೇವಲ ದಾನವಲ್ಲ. ನಾನು ಎಂಬ ಸ್ವಾರ್ಥದ ಬದಲಾಗಿ ನಾವು ಎಂಬ ಸಾಮೂಹಿಕ ಬದುಕಿನ ಸಂದೇಶ ಸಾರುವ ಕಾರ್ಯವಾಗಿದೆ.
ರಬಕವಿ-ಬನಹಟ್ಟಿ:

ನಿಸ್ವಾರ್ಥ ದಾನವು ಸೇವಾ ಮನೋಭಾವ ಬೆಳೆಸುವುದರ ಜತೆಗೆ ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುತ್ತದೆ ಎಂದು ಶಂಕರಲಿಂಗ ದೇವಸ್ಥಾನ ಟ್ರಸ್ಟ್‌ನ ನಿರ್ದೇಶಕ ಡಾ. ಸಂಗಮೇಶ ಹತಪಾಕಿ ಹೇಳಿದರು.

ರಬಕವಿಯ ಶ್ರೀಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀರಥದ ಗಾಲಿ ಪೂಜೆ ಹಾಗೂ ಅನ್ನದಾಸೋಹ ಕಾರ್ಯಕ್ರಮದ ಸಂದರ್ಭದಲ್ಲಿ ಡಿ.ಕೆ. ಕೊಟ್ರಶೆಟ್ಟಿ

ಫೌಂಡೇಷನ್

ವತಿಯಿಂದ ಶುಕ್ರವಾರ ನಡೆದ 1001ರೊಟ್ಟಿ ದಾನ ಸ್ವೀಕರಿಸಿ ಮಾತನಾಡಿದ ಅವರು, ಹಸಿದವರಿಗೆ ಆಹಾರ ಒದಗಿಸುವುದು ಕೇವಲ ದಾನವಲ್ಲ. ನಾನು ಎಂಬ ಸ್ವಾರ್ಥದ ಬದಲಾಗಿ ನಾವು ಎಂಬ ಸಾಮೂಹಿಕ ಬದುಕಿನ ಸಂದೇಶ ಸಾರುವ ಕಾರ್ಯವಾಗಿದೆ. ಜಾತ್ರೆ, ಉತ್ಸವಗಳಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ತಮ್ಮ ಕೈಲಾದಷ್ಟು ಆಹಾರವನ್ನು ದಾಸೋಹಕ್ಕೆ ನೀಡುವ ಮೂಲಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಫೌಂಡೇಷನ್