ನಗರಸಭೆ ವ್ಯಾಪ್ತಿಯ ರಾಮಪುರ ನಗರದ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಆವರಣದಲ್ಲಿ ಸ್ವಕುಳ ಸಾಳಿ ಸಮಾಜದ ವತಿಯಿಂದ ಮಂಗಳವಾರ ಜಿಹ್ವೇಶ್ವರರ ಜನ್ಮೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಪರಶುರಾಮ ಪಾಗಡೆ, ಮಾರುತಿ ಗಂಥಡೆ ಇತರರಿದ್ದರು.
- ಸ್ವಕುಳ ಸಾಳಿ ಸಮಾಜದ ಮುಖಂಡ ರಾಜೇಂದ್ರ ಮಾಂಡವಕರ ಹೇಳಿಕೆ
- ಜಿಹ್ವೇಶ್ವರರ ಜನ್ಮೋತ್ಸವ ಕಾರ್ಯಕ್ರಮ
- ಜಿಹ್ವೇಶ್ವರರ ತತ್ವಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ದೈನಂದಿನ ಜೀವನದಲ್ಲಿ ಅನುಸರಿಸಿದಾಗ ಮಾತ್ರ ಜನ್ಮೋತ್ಸವ ಆಚರಣೆಗೆ ಸಾರ್ಥಕತೆ ದೊರೆಯುತ್ತದೆ ಎಂದರು.
ಜಿಹ್ವೇಶ್ವರರು ಸಾರಿದ ಆದರ್ಶ, ಸಂಸ್ಕಾರ ಮತ್ತು ಜೀವನಮೌಲ್ಯಗಳನ್ನು ಯುವಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವದ್ಧಿಗೆ ಕೊಡುಗೆ ನೀಡಬೇಕು ಎಂದು ಸ್ವಕುಳ ಸಾಳಿ ಸಮಾಜದ ಮುಖಂಡ ರಾಜೇಂದ್ರ ಮಾಂಡವಕರ ಹೇಳಿದರು.
ನಗರಸಭೆ ವ್ಯಾಪ್ತಿಯ ರಾಮಪುರ ನಗರದ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಆವರಣದಲ್ಲಿ ಸ್ವಕುಳ ಸಾಳಿ ಸಮಾಜದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಹ್ವೇಶ್ವರರ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯ ಪ್ರಭಾವಕ್ಕೆ ಒಳಗಾಗದೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಂಪರೆಯನ್ನು ಗೌರವಿಸುವಂತೆ ಯುವಕರಿಗೆ ಸಲಹೆ ನೀಡಿದರು.
ಜಿಹ್ವೇಶ್ವರರ ತತ್ವಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ದೈನಂದಿನ ಜೀವನದಲ್ಲಿ ಅನುಸರಿಸಿದಾಗ ಮಾತ್ರ ಜನ್ಮೋತ್ಸವ ಆಚರಣೆಗೆ ಸಾರ್ಥಕತೆ ದೊರೆಯುತ್ತದೆ ಎಂದರು.
ಸಮಾಜದ ಮುಖಂಡ ಮಾರುತಿ ಗಂಥಡೆ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಬಾಂಧವರನ್ನು ಒಗ್ಗೂಡಿಸುವುದರ ಜತೆಗೆ ಯುವ ಪೀಳಿಗೆಗೆ ಸಮುದಾಯದ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತವೆ ಎಂದು ಹೇಳಿದರು.
ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ಹಾಗೂ ಮಹಿಳಾ ಮಂಡಳಿಯಿಂದ ಜಿಹ್ವೇಶ್ವರರ ತೊಟ್ಟಿಲೋತ್ಸವ ನೆರವೇರಿತು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಕುಮಾರ ದಳವಿ, ಪರಶುರಾಮ ಪಾಟೀಲ, ದೀಪಕ ಗಂಥಡೆ, ಪರಶುರಾಮ ಪಾಗಡೆ, ಬಾಲಚಂದ್ರ ಕಾರವೇಕರ, ಎಂ.ಟಿ. ಗಂಥಡೆ, ಶ್ರೀಕಾಂತ ಕಾರವೇಕರ, ನಾರಾಯಣ ಪಾಗಡೆ ಸೇರಿ ಸಮಾಜದ ಮುಖಂಡರು, ಹಿರಿಯರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು.