ಕೂಡಲಸಂಗಮ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಶಾಲಾ ಸಂಸತ್ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭವನ್ನು ಪ್ರೌಢ ಶಾಲೆ ವಿಶ್ರಾಂತ ಮುಖ್ಯಗುರು ಸಂಗಣ್ಣ ಗದ್ದಿ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕುರಿ, ಉಪನ್ಯಾಸಕಿ ಎನ್.ಬಿ.ತೆಗ್ಗಿನಮಠ, ಎಸ್‌ಡಿಎಂಸಿ ಸದಸ್ಯರಾದ ಮಂಗಳಪ್ಪ ಖಜಗಲ್ಲ ಇತರರಿದ್ದರು. 
ಬಾಗಲಕೋಟೆ

ಶಿಕ್ಷಕರಿಂದ ಮೌಲ್ಯಗಳನ್ನು ಭಿತ್ತರಿಸುವ ಕಾರ್ಯವಾಗಲಿ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಗುರು ಸಂಗಣ್ಣ ಗದ್ದಿ ಹೇಳಿಕೆ
  • ಪಾಲಕರ ತ್ಯಾಗದ ಅರಿವು ವಿದ್ಯಾರ್ಥಿಗಳಿಗೆ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ
  • ಶಾಲಾ ಸಂಸತ್ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭ
ಕೂಡಲಸಂಗಮ:

ಪಾಲಕರ ತ್ಯಾಗದ ಅರಿವು ವಿದ್ಯಾರ್ಥಿಗಳಿಗೆ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ವಿಶ್ರಾಂತ ಪ್ರೌಢ ಶಾಲೆ ಮುಖ್ಯಗುರು ಸಂಗಣ್ಣ ಗದ್ದಿ ಹೇಳಿದರು.

ಕೂಡಲಸಂಗಮದ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಶಾಲಾ ಸಂಸತ್ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆ ಎಂದರೆ ತರಬೇತಿ ಕೇಂದ್ರ, ಇಲ್ಲಿ ಎಲ್ಲವನ್ನೂ ಕಲಿಯುತ್ತಿರಿ, ದೇಶಕ್ಕೆ ಬೇಕಾಗದ ಎಲ್ಲ ವ್ಯಕ್ತಿಗಳು ಇಲ್ಲಿ ಇದ್ದಾರೆ. ಅಸಾಧ್ಯವಾದದ್ದು ಜಗತ್ತಿನಲ್ಲಿ ಯಾವುದು ಇಲ್ಲ. ಮಾಡುವ ಮನಸ್ಸು ಇರಬೇಕು. ಇಂದು ವಿದ್ಯಾರ್ಥಿಗಳಲ್ಲಿ ಮೌಲ್ಯಗಳ ಕೊರತೆ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ಮೌಲ್ಯಗಳನ್ನು ಭಿತ್ತರಿಸುವ ಕಾರ್ಯವನ್ನು ಶಿಕ್ಷಕರು, ಪಾಲಕರು ಮಾಡಬೇಕು ಎಂದರು.
ಉಪನ್ಯಾಸಕಿ ಎನ್.ಬಿ.ತೆಗ್ಗಿನಮಠ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮೌಲ್ಯ, ಸಂಸ್ಕಾರಗಳನ್ನು ಪಡೆದಾಗ ಉತ್ತಮ ಸಾಧನೆ ಮಾಡಲು ಸಾಧ್ಯ, ಸಂಸ್ಕಾರ, ಮೌಲ್ಯಗಳು ಇಲ್ಲದ ಶಿಕ್ಷಣ ವ್ಯರ್ಥ ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕುರಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮುಖ್ಯಗುರುಮಾತೆ ಎಸ್.ಬಿ.ಈಟಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಸದಸ್ಯರಾದ ಮಂಗಳಪ್ಪ ಖಜಗಲ್ಲ, ಭೀಮಪ್ಪ ಕೊಪ್ಪದ, ಬಸವರಾಜ ರೇವಡಿಹಾಳ, ಶಶಿಕಲಾ ಮುದ್ದಾಪುರ, ಹುಲಿಗೆವ್ವ ಚಲವಾದಿ, ನಿವೃತ್ತಿ ಹೊಂದಿದ ಹಿಂದಿ ಭಾಷಾ ಶಿಕ್ಷಕ ಎಸ್.ಎಸ್.ಕಟ್ಟಿಮನಿ ಇದ್ದರು. ಎಸ್.ಎಲ್.ಪಾಟೀಲ ಸ್ವಾಗಿತಿಸಿದರು, ಡಿ.ಬಿ.ನಧಾಪ ವಂದಿಸಿದರು. ಆರ್.ಎ.ತಂಬಾಕದ ನಿರೂಪಿಸಿದರು.