ಹುನಗುಂದ ನಗರದ ಗೌರಮ್ಮ ಚಿರಂತಿಮಠ ನಸಿರ್ಂಗ್ ಕಾಲೇಜನಲ್ಲಿ ಹಮ್ಮಿಕೊಂಡಿಸದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮವನ್ನು ಕ್ರೀಡಾ ನಿರ್ದೇಶಕ ಎಸ್ ಬಿ ಚಳಗೇರಿ ಉದ್ಘಾಟಿಸಿದರು. ಎಸ್.ಆರ್.ಗೊಲಗೊಂಡ, ಸಂಗಮೇಶ ಪಟ್ಟಣಶೆಟ್ಟಿ ಇದ್ದರು.  
ಬಾಗಲಕೋಟೆ

ಸಾರ್ವಜನಿಕರಲ್ಲಿ ಆರೋಗ್ಯ ಅರಿವು ಇರಲಿ

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾ ನಿರ್ದೇಶಕ ಎಸ್.ಬಿ.ಚಳಗೇರಿ ಹೇಳಿಕೆ,
  • ವಿಶ್ವ ತಂಬಾಕು ನಿಷೇಧ ದಿನಾಚರಣೆ
  • ಹಾನಿಕಾರಕ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ
ಹುನಗುಂದ: ವ್ಯಸನಮುಕ್ತ ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ವಿ.ಎಂ .ಎಸ್ .ಆರ್ ವಸ ಮಹಾವಿದ್ಯಾಲಯದ ಕ್ರೀಡಾ ನಿರ್ದೇಶಕ ಎಸ್.ಬಿ.ಚಳಗೇರಿ ಹೇಳಿದರು.
ನಗರದ ಗೌರಮ್ಮ ಚಿರಂತಿಮಠ ನಸಿರ್ಂಗ್ ಕಾಲೇಜನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಾನಿಕಾರಕ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನೆರೆಹೊರೆಯಲ್ಲಿ ತಂಬಾಕು ಸೇವಿಸಿ ಅನಾರೋಗ್ಯ ಹಾಗೂ ಸಾವಿಗಿಡಾದ ಸಾಕಷ್ಟು ಜನರನ್ನು ನೋಡುತ್ತೇವೆ. ಆದರೂ ಪಾಠ ಕಲಿಯದಿರುವುದು ಮೂರ್ಖತನ ಎಂದರು.
ಕೆಟ್ಟ ಸ್ನೇಹಿತರ ಸಹವಾಸ, ಒತ್ತಡದ ಜೀವನಶೈಲಿ, ಕುತೂಹಲ ಮತ್ತು ತಪ್ಪು ಕಲ್ಪನೆಗಳಿಂದ ಅನೇಕ ಯುವಕರು ವ್ಯಸನಿಗಳಾಗುತ್ತಿದ್ದಾರೆ. ಕ್ಷಣಿಕ ಸಂತೋಷ ನೀಡಬಹುದಾದ ತಂಬಾಕು ಜೀವನಪೂರ್ತಿ ನೋವು, ಸಾವು ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.
ನಸಿರ್ಂಗ್ ವಿದ್ಯಾರ್ಥಿಗಳಾಗಿ ತಾವು ಕೇವಲ ತಮ್ಮ ಆರೋಗ್ಯವನ್ನಷ್ಟೆ ಅಲ್ಲ, ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ಹೊಂದಿದ್ದೀರಿ. ನಾಳೆಯ ಆರೋಗ್ಯ ಸೇವೆಗೆ ನಾಯಕರಾಗುವ ನೀವು ಜನರಿಗೆ ಆರೋಗ್ಯ ಶಿಕ್ಷಣ ನೀಡಬೇಕು ಎಂದರು.
ಜೀವನ ಅಮೂಲ್ಯವಾದದ್ದು, ವ್ಯಸನಗಳಾಗಿ ಅದನ್ನು ವ್ಯರ್ಥ ಮಾಡಬಾರದು. ನಿಮ್ಮ ಕನಸು, ಗುರಿ ಈಡೇರಬೇಕಾದರೆ ದುಶ್ಚಟಗಳಿಂದ ದೂರವಿದ್ದು, ಉತ್ತಮ ಹವ್ಯಾಸಗಳಿರಬೇಕು. ಆರೋಗ್ಯಕರ ಜೀವನವೇ ಯಶಸ್ಸಿನ ಮೊದಲ ಮೆಟ್ಟಿಲು ಎಂದು ತಿಳಿಸಿದರು.
ವಿ.ಎಂ .ಎಸ್ .ಆರ್ ವಸದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಆರ್.ಗೋಲಗೊಂಡ ಮಾತನಾಡಿ, ನಿಕೋಟಿನ್ ವ್ಯಸನದ ದುಷ್ಪರಿಣಾಮಗಳ ಕುರಿತು ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಶಾಶ್ವಕೋಶದ ಸಮಸ್ಯೆಗಳ ಬಗ್ಗೆ, ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವ ಮಹತ್ವ ತಿಳಿಸಿದರು.
ಪ್ರಾಚಾರ್ಯ ಸಂಗಮೇಶ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಾಸು ಪಿ. ನಿರೂಪಿಸಿದರು. ಸುನೀಲ್ ಕೋಳಿ ಸ್ವಾಗತಿಸಿದರು. ಪ್ರೊ ಮೀನಾಕ್ಷಿ ವಂದಿಸಿದರು.