ತೇರದಾಳ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತೇರದಾಳ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2ಎ ಮೀಸಲಾತಿಗೆ ಒತ್ತಾಯಿಸಿ ಉಪತಹಸೀಲ್ದಾರ್ ಎಸ್.ಎಲ್.ಕಾಗಿ ಅವರಿಗೆ ಮನವಿ ಸಲ್ಲಿಸಿದರು. ಅಶೋಕ ಮಹಾಬಳಶೆಟ್ಟಿ, ಮಹೇಶ ಯಾದವಾಡ, ಶ್ರೀಶೈಲ ಮೋದಿ ಇತೆರರಿದ್ದರು.
- ಕ್ಷೇಮಾಭಿವೃದ್ಧಿ ಸಂಘದ ಒತ್ತಾಯ
- ತಹಸೀಲ್ದಾರ ಮೂಲಕ ಮನವಿ ಸಲ್ಲಿಕೆ
ತೇರದಾಳ: ಬಣಜಿಗ ಸಮಾಜಕ್ಕೆ ಕೇವಲ ಶಿಕ್ಷಣದ ದೃಷ್ಟಿಯಿಂದ 2ಎ ಮೀಸಲಾತಿ ನೀಡಲಾಗಿದೆ. ಆದರೆ ಉದ್ಯೋಗ (ನೌಕರಿ) ನೀಡುವಾಗ 3ಬಿ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ನಾವು ಶಿಕ್ಷಣದಲ್ಲಿ ಸಾಕಷ್ಟು ಸಾಧನೆ ಮಾಡಿದರು ಮೀಸಲಾತಿ ಸಮಸ್ಯೆಯಿಂದಾಗಿ ನೌಕರಿಯಿಂದ ವಂಚಿತರಾಗುತ್ತಿದ್ದೇವೆ ಎಂದು ಬಣಜಿಗ ಸಮಾಜದ ಹಿರಿಯ ಅಶೋಕ ಮಹಾಬಳಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ತೇರದಾಳ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲೀನಿ ರಜನೀಶ ಅವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಬಣಜಿಗ ಸಮಾಜ ಚಿಕ್ಕದಾದರು ಚೊಕ್ಕದಾಗಿದೆ. ಈ ನಾಡಿನ ಏಳಿಗೆಗಾಗಿ ಆಧ್ಯಾತ್ಮ ಹಾಗೂ ರಾಜಕೀಯವಾಗಿಯೂ ಕೊಡುಗೆ ನೀಡಿದೆ. ಇಂತಹ ಸಮಾಜದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ನಮ್ಮ 2ಎ ಮೀಸಲಾತಿ ಬೇಡಿಕೆಗೆ ಸ್ಪಂದಿಸುವ ಮೂಲಕ ಬಣಜಿಗ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಸಮಾಜದ ಪರವಾಗಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.
ಬಣಜಿಗ ಸಮಾಜದ ತೇರದಾಳ ತಾಲೂಕು ಅಧ್ಯಕ್ಷ ಮಹೇಶ ಯಾದವಾಡ, ನಗರ ಘಟಕ ಅಧ್ಯಕ್ಷ ಶ್ರೀಶೈಲ ಮೋದಿ, ಯುವ ಘಟಕದ ತಾಲೂಕು ಅಧ್ಯಕ್ಷ ಪ್ರಮೋದ ಸೊಟ್ಟಿ, ಬಾಲಚಂದ್ರ ಯಾದವಾಡ, ಅಪು÷್ಪ ಮಂಗಸೂಳಿ, ಗಿರೀಶ ಯಾದವಾಡ, ಸಂತೋಷ ಅವರಾದಿ, ಶಿವಾನಂದ ಮಹಾಬಳಶೆಟ್ಟಿ, ಬಾಬುರಾಜೇಂದ್ರ ಹಂಜಿ, ಡಾ.ಮೋಹನ ನಿಡೋನಿ, ಅಶೋಕ ಅವರಾದಿ, ಸುರೇಶ ಮುಚ್ಚಂಡಿ, ಬಸವರಾಜ ಪಟ್ಟಣಶೆಟ್ಟಿ, ಬಿ.ಆರ್.ಬಿರಾದಾರ, ಸುರೇಶ ಶೇಡಬಾಳ, ಗಿರೀಶ ಬಿಜ್ಜರಗಿ ಇದ್ದರು.