ಗುಳೇದಗುಡ್ಡದ ಭಂಡಾರಿ ಹಾಗೂ ರಾಠಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮವನ್ನು ಮಾಜಿ ಶಾಸಕ ರಾಜಶೇಖರ ಶೀಲವಂತ ಉದ್ಘಾಟಿಸಿದರು. ಸಾಹಿತಿ ಬಸವರಾಜ ಪ್ಯಾಟಿಶೆಟ್ಟರ, ಪದವಿ ಪೂರ್ವ ವಿಭಾಗದ ಚೇರ್ಮನ್ ಸಿದ್ಲಿಂಗಪ್ಪ ಬರಗುಂಡಿ, ರಾಜು ತಾಪಡಿಯಾ, ಸುನಿಲ ಕರಣಿ, ಲಕ್ಷ್ಮೀನಾರಾಯಣ ಕಾಬ್ರಾ, ಅಮಾತೆಪ್ಪ ಕೊಪ್ಪಳ, ರವೀಂದ್ರ ಅಂಗಡಿ ಇದ್ದರು. 
ಬಾಗಲಕೋಟೆ

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಬಸವರಾಜ ಪ್ಯಾಟಿಶೆಟ್ಟರ ಹೇಳಿಕೆ
  • ವಿದ್ಯಾರ್ಥಿಗಳು ಸಮಯ ಪ್ರಜ್ಞೆಯಿಂದ ನಿರಂತರವಾಗಿ ಅಧ್ಯಯಶೀಲರಾಗಬೇಕು
  • ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ
ಗುಳೇದಗುಡ್ಡ: ವಿದ್ಯಾರ್ಥಿಗಳು ಸಮಯ ಪ್ರಜ್ಞೆಯಿಂದ ನಿರಂತರವಾಗಿ ಅಧ್ಯಯಶೀಲರಾಗಬೇಕು. ಅಂದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಕೆರೂರದ ಸಾಹಿತಿ ಬಸವರಾಜ ಪ್ಯಾಟಿಶೆಟ್ಟರ ಹೇಳಿದರು.
ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಪೂರ್ವ ಕಾಲೇಜದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕು ಎನ್ನುವುದು ಮುಳ್ಳಿನ ಹಾಸಿಗೆ ಇದ್ದಂತೆ. ತಮ್ಮ ಬದುಕನ್ನ ಉತ್ತಮವಾಗಿ ನಡೆಸಿಕೊಂಡು ಜೀವನ ಸಾಗಿಸಬೇಕು. ವಿದ್ಯಾರ್ಥಿಗಳು ದೈಹಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಬೆಳವಣಿಗೆಯನ್ನು ಹೆಚ್ಚಿಸುವ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳ ಸದೃಢ ಆರೋಗ್ಯ ನಿರ್ಮಾಣಕ್ಕೆ ಪಠ್ಯಪೂರಕ ಚಟುವಟಿಕೆಗಳು ಸಹಕಾರಿಯಾಗಿವೆ. ಪಠ್ಯಕ್ಕೆ ನೀಡುವ ಮಹತ್ವವನ್ನು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಗೂ ಕೂಡ ಸಮಯ ನೀಡಿ ಆರೋಗ್ಯಕರ ಸದೃಢ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪದವಿ ಪೂರ್ವ ವಿಭಾಗದ ಚೇರ್ಮನ್ ಸಿದ್ಲಿಂಗಪ್ಪ ಬರಗುಂಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ರಾಜು ತಾಪಡಿಯಾ, ಸುನಿಲ್ ಕರಣಿ, ಲಕ್ಷ್ಮೀನಾರಾಯಣ ಕಾಬ್ರಾ, ಅಮಾತೆಪ್ಪ ಕೊಪ್ಪಳ, ರವೀಂದ್ರ ಅಂಗಡಿ, ಶಾಮಸುಂದರ ಮಾಲಪಾಣಿ, ಪುರುಷೋತ್ತಮ ಝಂವರ, ಎಸ್.ಎಸ್.ನಾಯನೇಗಲಿ, ಪ್ರಾಚಾರ್ಯ ಡಾ.ಎನ್.ವೈ.ಬಡನ್ನವರ, ಜೀವನ್ ರಾಠೋಡ, ಎ.ವೈ.ದೊಡ್ಮನಿ ಇದ್ದರು.