ಗುಳೇದಗುಡ್ಡದ ಹೊಳೆಹುಚ್ಚೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಎಸ್.ಆರ್. ಶೆಟ್ಟರ ಸ್ವತಂತ್ರ ಪ.ಪೂ. ಮಹಾವಿದ್ಯಾಲಯ, ತಕ್ಷ ಎಜ್ಯುಕೇರ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಜಿ. ಎಮ್ಮಿ ಉದ್ಘಾಟಿಸಿದರು. ಮಹಾಂತಯ್ಯ ಗಣಾಚಾರಿ, ವಿರೇಶ ಚಿಂದಿ, ಪುನೀತ್ ಕಾದರೊಳ್ಳಿ ಇತರರಿದ್ದರು.
- ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಜಿ. ಎಮ್ಮಿ ಹೇಳಿಕೆ
- ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
- ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಕೊಳ್ಳಬೇಕು.
ಗುಳೇದಗುಡ್ಡ: ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಕೊಳ್ಳಬೇಕು. ಅವು ಮನುಷ್ಯನ ವ್ಯಕ್ತಿತ್ವ ನಿರ್ಮಿಸಲು ಸಹಾಯಕವಾಗುತ್ತದೆ. ಪಠ್ಯದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಜಿ. ಎಮ್ಮಿ ಹೇಳಿದರು.
ಪಟ್ಟಣದ ಶ್ರೀ ಹೊಳೆಹುಚ್ಚೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಎಸ್.ಆರ್. ಶೆಟ್ಟರ ಸ್ವತಂತ್ರ ಪ.ಪೂ ಮಹಾವಿದ್ಯಾಲಯ, ತಕ್ಷ ಎಜ್ಯುಕೇರ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹವ್ಯಾಸಗಳು ಕ್ರೀಯಾಶೀಲರನ್ನಾಗಿ ಮಾಡಿ, ಆಲಸ್ಯ ದೂರಮಾಡುತ್ತವೆ. ಸಂಗೀತ, ಕ್ರೀಡೆಯಂತಹ ಪಠ್ಯತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸು, ದೇಹ ಸದೃಢವಾಗಿ ಏಕಾಗ್ರತೆ ಓದಿಗೂ ಸಹಾಯವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಮಹಾಂತಯ್ಯ ಗಣಾಚಾರಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ಕಾಮನ ಬಿಲ್ಲು ಇದ್ದಂತೆ. ಪ್ರಥಮ ವರ್ಷ ಮತ್ತು ದ್ವೀತಿಯ ವರ್ಷದ ವಿದ್ಯಾರ್ಥಿಗಳ ನಡುವಿನ ಸ್ನೇಹ ಪ್ರೀತಿ ದೀಪದ ಹಣತೆ ಹಾಗೆ ಜತೆಯಾಗಿ ಬೆಳಗಬೇಕು ಎಂದು ಹೇಳಿದರು.
ಸಂಸ್ಥೆ ಉಪಾಧ್ಯಕ್ಷ ವಿರೇಶ ಚಿಂದಿ, ಶಾಲಾ ಆಡಳಿತಾಢಕಾರಿ ಪುನೀತ್ ಕಾದರೊಳ್ಳಿ. ಪ್ರಾಚಾರ್ಯರಾದ ಲಕ್ಷ್ಮಣ ಹಾದಿಮನಿ, ಪ್ರಕಾಶ ನಾಲತವಾಡ, ಉಪನ್ಯಾಸಕರಾದ ಪ್ರದೀಪ ದೊಂಗಡೆ. ಮಲ್ಲಿಕಾರ್ಜುನ ಗಿರೆನ್ನವರ, ಮಂಜುನಾಥ ವ್ಯಾಪಾರಿ, ಕೀರ್ತಿ ಗೌಡರ, ಮಾನಸ ಹೆಚ್.ಡಿ. ಮಹಾಂತೇಶ ಎ.ಎಲ್, ಸಾಯಿಸಮೀರ ಮಹಾಡಿಕರ, ತೇಜಶ್ವಿನಿ ರಾಜನಾಳ, ಮಂಜುಳಾ ಆರ್.ಬಿ, ರವಿ ಶಿಪ್ರಿ, ವಿದ್ಯಾರ್ಥಿ ಪ್ರತಿನಿಧಿ ಶಿವುಕುಮಾರ ಮಾಗಡಿ ಇತರರಿದ್ದರು.