ಮುಧೋಳ ನಗರದ ಪಟ್ಟಣದ ಆನಂದ ನಗರದ ಐಶ್ವರ್ಯ ಕಾಲೋನಿಯಲ್ಲಿರುವ ಸ್ಯಾಮ್ಯುಯೆಲ್ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ನೂತನ ಶಾಲಾ ಸಂಸತ್ತಿನ ಪದಗ್ರಹಣದಲ್ಲಿ ಕಾರ್ಯಕ್ರಮದಲ್ಲಿ ಸಿಪಿಐ ಎಂ.ನಾಗರಡ್ಡಿ, ಮಾರ್ಗರೇಟ್ ಗೌಡರ್ ವಿಕ್ಕಿ ತೇಗೂರ, ಹೊನ್ನಪ್ಪ ಹಡಪದ ಇತರರಿದ್ದರು.
- ಸಿಪಿಐ ಎಂ. ನಾಗರಡ್ಡಿ ಅಭಿಮತ
- ಶಾಲಾ ಸಂಸತ್ತು ರಚನೆ ಕಾರ್ಯಕ್ರಮ
- ನೂತನ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭ
ಮುಧೋಳ: ಶಾಲೆ ಕ್ಯಾಬಿನೆಟ್ ಸದಸ್ಯರಾಗಿ ಆಯ್ಕೆಯಾದ ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಇತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದು ಸಿಪಿಐ ಎಂ. ನಾಗರಡ್ಡಿ ಕಿವಿಮಾತು ಹೇಳಿದರು.
ಪಟ್ಟಣದ ಆನಂದ ನಗರದ ಐಶ್ವರ್ಯ ಕಾಲೋನಿಯಲ್ಲಿರುವ ಸ್ಯಾಮ್ಯುಯೆಲ್ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ನಡೆದ ನೂತನ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಪ್ರೇರೇಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸಮಾರಂಭ ಶಿಸ್ತು ಮತ್ತು ಸಂಸ್ಕೃತಿಯ ಸಂಗಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮಾರ್ಗರೇಟ್ ಗೌಡರ ಹಾಗೂ ಸಂಸ್ಥೆ ಕಾರ್ಯಾಧ್ಯಕ್ಷ ವಿಕ್ಕಿ ತೇಗೂರ ಮಾತನಾಡಿ, ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾಯಕತ್ವದ ಗುಣಗಳೊಂದಿಗೆ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಪ್ರಾಚಾರ್ಯ ಹೊನ್ನಪ್ಪ ಹಡಪದ ಕ್ಯಾಬಿನೆಟ್ ಸದಸ್ಯರಿಗೆ ಅಧಿಕೃತವಾಗಿ ಬ್ಯಾಡ್ಜ್‌ಗಳನ್ನು ತೊಡಿಸಿ, ಪ್ರಮಾಣ ವಚನ ಬೋಧಿಸಿದರು. ನೂತನ ಕ್ಯಾಬಿನೆಟ್ ಪದಾಧಿಕಾರಿಗಳಾಗಿ ಜನರಲ್ ಸೆಕ್ರಟರಿಯಾಗಿ ಅನ್ವಿತಾ ಸಿಂತ್ರಿ, ಸ್ಕೂಲ್ ಕ್ಯಾಪ್ಟನ್ ಆಗಿ ದೀಕ್ಷಾ ಕೊಣ್ಣೂರ, ವೈಸ್ ಕ್ಯಾಪ್ಟನ್ ಆಗಿ ಶ್ರೇಯಸ್ ಹಬ್ಬು, ಸಿಬಿಎಸ್‌ಇ ಹೆಡ್ ಬಾಯ್ ಆಗಿ ಪ್ರಜ್ಜಲ ಭಜಂತ್ರಿ ಮತ್ತು ಸ್ಕೂಲ್ ಕ್ಯಾಪ್ಟನ್ ಗರ್ಲ್ಸ್ ಆಗಿ ರಶ್ಮಿತಾ ದಳವಾಯಿ ಅವರು ಅಧಿಕಾರ ಸ್ವೀಕರಿಸಿದರು.
ಪ್ರಾಚಾರ್ಯರಾದ ಗಿರೀಶ ಹಡಪದ, ಹೊನ್ನಪ್ಪ ಹಡಪದ, ಬಿ.ಎಂ. ದೊಡಮನಿ ಸೇರಿ ಇತರರು ಉಪಸ್ಥಿತರಿದ್ದರು. ಶ್ರೇಯಾ ಪಡತಾರೆ ಮತ್ತು ಸ್ಪೂರ್ತಿ ಗೋಟ್ಯಾಳಕರ ನಿರೂಪಿಸಿದರು. ಮಹೆಕ್ ನದಾಪ್ ಸ್ವಾಗತಿಸಿ, ಆಶಾ ಹಾವಡಿ ವಂದನಾರ್ಪಣೆ ಸಲ್ಲಿಸಿದರು.