ಮುಧೋಳ ತಾಲೂಕಿನ ಗುಲಗಾಲ ಜಂಬಗಿ ಗ್ರಾಮದಲ್ಲಿ ನಡೆದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಸದಪ್ಪ ಬಟಕರಕಿ ಉದ್ಘಾಟಿಸಿದರು. ಡಾ. ಎಂ.ಎಂ. ಹಿರೇಮಠ ಉಪಸ್ಥಿತರಿದ್ದರು. 
ಬಾಗಲಕೋಟೆ

ಎನ್‌ಎಸ್‌ಎಸ್‌ನಿಂದ ನಾಯಕತ್ವ ಗುಣ ವದ್ಧಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಸದಪ್ಪ ಬಟಕರಕಿ ಹೇಳಿಕೆ
  • ಶಿಬಿರ ಉದ್ಘಾಟನೆ
  • ವಿದ್ಯಾರ್ಥಿಗಳು ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ
ಮುಧೋಳ: ವಿದ್ಯಾರ್ಥಿಗಳು ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಸೋಮೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಸದಪ್ಪ ಬಟಕರಕಿ ಹೇಳಿದರು.
ತಾಲೂಕಿನ ಗುಲಗಾಲ ಜಂಬಗಿ ಗ್ರಾಮದಲ್ಲಿ ಭಾನುವಾರ ನಡೆದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸಂಯೋಜಿತ ಮುಧೋಳದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಾಮರಸ್ಯ, ಸ್ನೇಹಭಾವ, ತಾಳ್ಮೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವುದರ ಜತೆಗೆ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ದಾರಿದೀಪವಾಗುತ್ತವೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಎಂ.ಎಂ. ಹಿರೇಮಠ ಮಾತನಾಡಿ, ಎನ್‌ಎಸ್‌ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವಾ ಮನೋಭಾವ, ಶಿಸ್ತು ಮತ್ತು ಸಂಯಮವನ್ನು ರೂಢಿಸುವಲ್ಲಿ ಸಹಕಾರಿಯಾಗಿವೆ ಎಂದು ತಿಳಿಸಿದರು.
ಶಿಬಿರಾಧಿಕಾರಿ ಡಾ. ಪಿ.ವಿ. ಮನಗೂಳಿ ಸ್ವಾಗತಿಸಿದರು. ಪ್ರೊ. ಎಸ್.ಕೆ. ಸಾರವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಜಿ.ಎ. ಮೇತ್ರಿ, ಪ್ರೊ. ಎಸ್.ಬಿ. ಕಬ್ಬಿಣದ, ಅಕ್ಷತಾ ಬಡಿಗೇರ. ಸೋಮಪ್ಪ ಮುಳ್ಳೂರ, ಸಂಗಪ್ಪ ಬಟಕುರ್ಕಿ, ಬಸಪ್ಪ ಮುಳ್ಳೂರ, ದುಂಡಪ್ಪ ಲಿಂಗರೆಡ್ಡಿ, ಜಗದೀಶ ಮುಳ್ಳೂರ, ಸಿದ್ಧಲಿಂಗಪ್ಪ ಅಕ್ಕಮರಡಿ ಇತರರಿದ್ದರು.