ರಬಕವಿ/ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿರುವ ಲಂಬಾಣಿ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವಂತೆ ತಹಸೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಮನವಿ ಸಲ್ಲಿಸಿದರು. ಹರ್ಷವರ್ಧನ ಪಟವರ್ಧನ, ಶಂಕರ ರಾಠೋಡ ಇತರರಿದ್ದರು.
- ತಹಸೀಲ್ದಾರ್ ಗಿರೀಶ ಸ್ವಾದಿಗೆ ಮನವಿ
- ಮೂಲ ಸೌಕರ್ಯಗಳಿಂದ ವಂಚಿತ
ರಬಕವಿ/ ಬನಹಟ್ಟಿ : ಹಕ್ಕು ಪತ್ರವಿಲ್ಲದೆ ಪರದಾಡುತ್ತಿರುವ ತಾಲೂಕಿನ ಆಸಂಗಿ ಗ್ರಾಮದ 30ಕ್ಕೂ ಅಧಿಕ ಲಂಬಾಣಿ ಕುಟುಂಬದವರು, ತಾವು ವಾಸಿಸುವ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಮನವಿ ಮಾಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಸೋಮವಾರ ಆಗಮಿಸಿ ಮನವಿ ನೀಡಿ ಮಾತನಾಡಿದ ಮುಖಂಡ ಹರಿಶ್ಚಂದ್ರ ರಾಠೋಡ, ಕಳೆದ 40 ವರ್ಷಗಳಿಂದ ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಗ್ರಾಮದಿಂದ 2 ಕಿ.ಮೀ. ನಷ್ಟು ದೂರ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುವ ದುಸ್ಥಿತಿಯಿದೆ. 200ಕ್ಕೂ ಅಽಕ ಜನಸಂಖ್ಯೆ ಹೊಂದಿರುವ ಈ ಲಂಬಾಣಿ ತಾಂಡಾ ಆಸಂಗಿ ಕ್ರಾಸ್ ಹತ್ತಿರವಿದೆ. ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು, ಸಮರ್ಪಕ ರಸ್ತೆ, ಬೀದಿ ದೀಪ ಸೇರಿ ಹಲವಾರು ಸಮಸ್ಯೆಗಳಿವೆಯೆಂದು ಬೇಸರ ಹೊರ ಹಾಕಿ, ಈ ತಾಂಡಾವನ್ನು ಕಂದಾಯ ಉಪ ಗ್ರಾಮವೆಂದು ಘೋಷಿಸಿ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಹಿರಿಯ ನ್ಯಾಯವಾದಿ ಹರ್ಷವರ್ಧನ ಪಟವರ್ಧನ, ಶಂಕರ ರಾಠೋಡ, ರವಿ ಚಹ್ವಾನ, ಪರಶುರಮ ಛತ್ರಿ, ಈರಪ್ಪ ರಾಠೋಡ, ರವಿ ಛತ್ರಿ, ಸದಾಶಿವ ಬಡಗೇರ, ಮಂಜುನಾಥ ರಾಠೋಡ, ಮಲ್ಲವ್ವ ಭಜಂತ್ರಿ ಇತರರಿದ್ದರು.