ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದಲ್ಲಿ ಬುಧವಾರ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2025-26ರ ವಾರ್ಷಿಕ ವಿಶೇಷ ಶಿಬಿರದ ಎರಡನೆಯ ದಿನದ ಶ್ರಮದಾನ ಕಾರ್ಯಕ್ರಮದಲ್ಲಿ ಗುಳೇದಗುಡ್ಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳಶಾಸ್ತ್ರ ಮುಖ್ಯಸ್ತ ಪ್ರೊ. ಫಕ್ಕೀರಪ್ಪ ಚನ್ನಪಗೌಡ್ರ ಮಾತನಾಡಿದರು. ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ಸಂಪತ್ತ ಲಮಾಣಿ, ಐಕ್ಯೂಎಸಿ ಸಂಚಾಲಕ ಡಾ. ಬಸವರಾಜ ಬೀಳಗಿ, ಪ್ರೇಮಾ ಗೆಜ್ಜಿ ಇದ್ದರು 
ಬಾಗಲಕೋಟೆ

ಕೆರೆಗಳು-ಪ್ರಾಣಿ ಪಕ್ಷಿಗಳ ಜೀವನಾಡಿ

ಪ್ರಮುಖ ಮುಖ್ಯಾಂಶಗಳು

  • ಪ್ರೊ. ಫಕ್ಕೀರಪ್ಪ ಚೆನ್ನಪ್ಪಗೌಡ್ರ ಹೇಳಿಕೆ
  • ಎನ್‌ಎಸ್‌ಎಸ್‌ಶಿಬಿರದ ಎರಡನೇ ದಿನದ ಕಾರ್ಯ
ಬಾಗಲಕೋಟೆ: ನೈಸರ್ಗಿಕ ಸಂಪನ್ಮೂಲಗಳಲ್ಲಿ ಕೆರೆಗಳು ಪ್ರಮುಖವಾಗಿವೆ. ಕೆರೆಗಳಿಂದ ಕೃಷಿ ಮತ್ತು ಅಂತರ್ಜಲದ ಸಮೃದ್ಧಿಯಾಗಿ, ಜೀವ ವೈವಿಧ್ಯ ಸಂರಕ್ಷಣೆಗೆ ಅತ್ಯಗತ್ಯವಾದ ನೀರು ಒದಗಿಸುವ ಮೂಲಕ ಪ್ರಾಣಿ ಪಕ್ಷಿಗಳಿಗೆ ಜೀವನಾಡಿಯಾಗಿವೆ ಎಂದು ಗುಳೇದಗುಡ್ಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳಶಾಸ್ತ್ರ ಮುಖ್ಯಸ್ತ ಪ್ರೊ. ಫಕ್ಕೀರಪ್ಪ ಚನ್ನಪಗೌಡ್ರ ಹೇಳಿದರು.
ತಾಲೂಕಿನ ಮುಚಖಂಡಿ ಗ್ರಾಮದಲ್ಲಿ ಬುಧವಾರ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2025-26ರ ವಾರ್ಷಿಕ ವಿಶೇಷ ಶಿಬಿರದ ಎರಡನೆಯ ದಿನದ ಶ್ರಮದಾನದಲ್ಲಿ ಮುಚಖಂಡಿ ಕೆರೆಯಲ್ಲಿ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೆರೆಗಳು ಮಳೆಯ ನೀರನ್ನು ಸಂಗ್ರಹಿಸಿ, ಬರಗಾಲದಲ್ಲಿ ನೀರು ಒದಗಿಸುವ ಗ್ರಾಮೀಣ ಜೀವನಾಡಿಗಳಾಗಿವೆ. ಪರಿಸರ ಸಮತೋಲನ ಕಾಯ್ದುಕೊಳ್ಳಲು ಮತ್ತು ಬೇಸಿಗೆಯಲ್ಲಿ ಜಾನುವಾರುಗಳಿಗೆ, ಪಕ್ಷಿಗಳಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲ ಮೂಲಗಳಾಗಿವೆ. ಕೆರೆಗಳು ಜಲ ಸಂಗ್ರಹಣೆ ಮಾಡುವದರೊಂದಿಗೆ ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತವೆ ಎಂದರು.
ಕೆರೆಗಳ ನೀರಿನಿಂದ ತೋಟ, ಹೊಲ, ಗದ್ದೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುವ ಕಾರ್ಯ ಮಾಡಲಾಗುತ್ತದೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಅಗತ್ಯವಾದ ಕುಡಿಯುವ ನೀರು ಪೂರೈಸುವ ಕೇಂದ್ರ ಬಿಂದುಗಳಾಗಿವೆ. ಕೆರೆಗಳು ಪಕ್ಷಿಗಳಿಗೆ, ಮೀನುಗಳಿಗೆ, ಮತ್ತು ವಿವಿಧ ಜಲಚರಗಳಿಗೆ ಆಶ್ರಯ ನೀಡಿ, ಪರಿಸರ ವ್ಯವಸ್ಥೆಯನ್ನು ಸುಧಾರಿಸಲು ಪೂರಕವಾಗಿ ಎಂದರು.
ಈ ಸಂದರ್ಭದಲ್ಲಿ ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ.ಸಂಪತ್ತ ಲಮಾಣಿ, ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ ಬೀಳಗಿ, ಪ್ರೇಮಾ ಗೆಜ್ಜಿ ಇದ್ದರು.