ಹುಬ್ಬಳ್ಳಿಯಲ್ಲಿ ದಕ್ಷಿಣ ಪಶ್ವಿಮ ರೈಲ್ವೆ ಮಹಾ ವ್ಯವಸ್ಥಾಪಕರೊಂದಿಗೆ ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ. ಅಧಿಕಾರಿಗಳು ಸಭೆಯಲ್ಲಿದ್ದರು.
- ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಒತ್ತಾಯ
- ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿಗೆ ವೇಗ ನೀಡಿ ಬೇಗ ಪೂರ್ಣಗೊಳಿಸಬೇಕು
- ಕೈಗಾರಿಕಾ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸೌಲಭ್ಯ
ಬಾಗಲಕೋಟೆ : ತೀವ್ರ ಮಂದಗತಿಯಲ್ಲಿ ಸಾಗಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿಗೆ ವೇಗ ನೀಡಿ ಬೇಗ ಪೂರ್ಣಗೊಳಿಸಬೇಕು. ಗದಗ-ಮುಂಬೈ ನಡುವೆ ಬಾಗಲಕೋಟೆ-ಸೊಲ್ಲಾಪುರ ಮಾರ್ಗವಾಗಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭಿಸುವಂತೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಒತ್ತಾಯ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ದಕ್ಷಿಣ ಪಶ್ವಿಮ ರೈಲ್ವೆ ಮಹಾ ವ್ಯವಸ್ಥಾಪಕರೊಂದಿಗೆ ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಈ ಆಗ್ರಹವನ್ನು ಮಾಡಿದ್ದಾರೆ.
ವಿಜಯಪುರ-ತಿರುಪತಿ ನೇರ ರೈಲು ಸೇವೆ ಆರಂಭಿಸುವುದು, ಗೋಲ್ ಗುಂಬಜ್ ಎಕ್ಸ್‌ಪ್ರೆಸ್ (16535/16536) ರೈಲಿನ ವೇಗ ಹೆಚ್ಚಿಸುವುದು, ಸವದತ್ತಿ ಮಾರ್ಗವಾಗಿ ಲೋಕಾಪುರ-ಧಾರವಾಡ ಹೊಸ ರೈಲು ಮಾರ್ಗ ನಿರ್ಮಾಣ ಕುರಿತು, ಹುಬ್ಬಳ್ಳಿ-ಹಜ್ರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ (20647) ಸೇವೆಯನ್ನು ವಾರಕ್ಕೆ ಎರಡು ಬಾರಿ ವಿಸ್ತರಿಸುವ ಬಗ್ಗೆ, ಬಸವ ಎಕ್ಸ್‌ಪ್ರೆಸ್ ರೈಲನ್ನು ಲೋಕಾಪುರದ ವರೆಗೆ ವಿಸ್ತರಿಸುವ ಕುರಿತು, ಬಾಗಲಕೋಟೆ ರೈಲು ನಿಲ್ದಾಣದ ಪ್ಲಾಟ್‌ಾರ್ಮ್ ಸಂಖ್ಯೆ 2 ಮತ್ತು 3ರಲ್ಲಿ ಲ್‌ಟಿ ಅಳವಡಿಸುವುದು ಸೇರಿ ಉತ್ತರ ಕರ್ನಾಟಕದ ಪ್ರಾದೇಶಿಕ ಸಂಪರ್ಕ, ಆರ್ಥಿಕ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸೌಲಭ್ಯ ವೃದ್ಧಿಗೆ ಮಹತ್ವದ ಪಾತ್ರ ವಹಿಸುವ ಬಗ್ಗೆ ಸಭೆಯಲ್ಲಿ ಗಮನಕ್ಕೆ ತಂದರು.
ದಕ್ಷಿಣ ಪಶ್ಚಿಮ ರೈಲ್ವೆ ಮಹಾ ವ್ಯವಸ್ಥಾಪಕ ಪಿ. ಅನಂತ್ ಅವರು ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ತಿಳಿಸಿದರು ಎಂದು ಭಾಂಡಗೆ ಅವರು ತಿಳಿಸಿದ್ದಾರೆ.