ಚಿಮ್ಮಡ ಗ್ರಾಮದ ವಿರಕ್ತಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಪ್ರಭು ಶ್ರೀಗಳು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪ ಪೂಜಾರಿ, ಆರ್.ಎಂ. ಬಗನಾಳ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪ ಹಳಿಂಗಳಿ, ಬಿ.ಎಸ್.ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಬೀರಪ್ಪ ಹಳೇಮನಿ, ರಾಚಯ್ಯ ಮಠಪತಿ, ಚಂದ್ರಕಾಂತ ಜಾಡಗೌಡರ ಇದ್ದರು. 
ಬಾಗಲಕೋಟೆ

ಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನ

ಪ್ರಮುಖ ಮುಖ್ಯಾಂಶಗಳು

  • ವಿರಕ್ತಶ್ರೀಗಳ ಪುಣ್ಯಸ್ಮರಣೋತ್ಸವ ಆಚರಣೆಗೆ ನಿರ್ಧಾರ
  • ಅಕ್ಕಮಹಾದೇವಿ ಜಯಂತ್ಯುತ್ಸವ
ಚಿಮ್ಮಡ: ಗ್ರಾಮದ ದೈವಿ ಪುರುಷ ಲಿಂಗೈಕ್ಯ ವಿರಕ್ತಮಹಾಸ್ವಾಮಿಗಳ 33ನೇ ಪುಣ್ಯ ಸ್ಮರಣೋತ್ಸವ ಹಾಗೂ ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವ ಕಾರ್ಯಕ್ರಮ ಅದ್ದೂರಿ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.
ಸ್ಥಳಿಯ ವಿರಕ್ತಮಠದ ಚನ್ನಬಸವೇಶ್ವರ ಸಭಾ ವೇದಿಕೆಯಲ್ಲಿ ಭಾನುವಾರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿರಕ್ತಶ್ರೀಗಳ ಪುಣ್ಯ ಸ್ಮರಣೋತ್ಸವದ ನಿಮಿತ್ತ ಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮ ಮಾ.19ರಿಂದ ಏ.1 ರವರೆಗೆ ನಡೆಯಲಿದ್ದು, ಗಂಗಾವತಿ ಹಿರೇಮಠ ಮದ್ಲಾಪುರದ ಪಂ.ರುದ್ರಯ್ಯ ಸ್ವಾಮಿಗಳು ನಡೆಸಿ ಕೊಡಲಿದ್ದಾರೆ ಎಂದರು.
ಮಾ.27ರಿಂದ ಎಪ್ರಿಲ್ 2ರ ವರೆಗೆ ನಿರಂತರ ವಿಶೇಷ ಕಾರ್ಯಕ್ರಮಗಳು ಹಾಗೂ ನಿರಂತರ ಅನ್ನಪ್ರಸಾದ ವಿತರಣೆ ನಡೆಸಲು ತೀರ್ಮಾನಿಸಲಾಗಿದ್ದು, ನಾಡಿನ ವಿವಿಧ ಮಠಾಧೀಶರು, ಸಮಾಜ ಸೇವಕರು, ಧುರೀಣರು, ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪ ನೇಸೂರ ಮಾತನಾಡಿ, ಶ್ರೀಮಠದಿಂದ ಕೊಡಮಾಡುವ ಈ ಸಾಲಿನ ಅಕ್ಕ' ರಾಜ್ಯಮಟ್ಟದ ಪ್ರಶಸ್ತಿ ಕೇಂದ್ರ ಮಾಜಿ ಸಚಿವ ದಿ.ಅನಂತಕುಮಾರ ಧರ್ಮಪತ್ನಿ ಅದಮ್ಯಚೇತನ ಫೌಂಡೆಶನ್ ಸಂಸ್ಥಾಪಕಿ ಡಾ. ತೇಜಸ್ವಿನಿ ಅನಂತಕುಮಾರ ಅವರಿಗೆ ನೀಡಲಾಗುವುದು ಎಂದು ಹೇಳಿದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪ ಪೂಜಾರಿ, ಆರ್.ಎಂ.ಬಗನಾಳ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪ ಹಳಿಂಗಳಿ, ಬಿ.ಎಸ್.ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಬೀರಪ್ಪ ಹಳೇಮನಿ, ರಾಚಯ್ಯ ಮಠಪತಿ, ಚಂದ್ರಕಾಂತ ಜಾಡಗೌಡರ ಸೇರಿ ಇತರರು ಇದ್ದರು.