ಬಾಗಲಕೋಟೆ ವ್ಯಾಪಾರ ಮತ್ತು ಉದ್ಯಮಿಗಳ ಸಂಘದಿAದ ಶನಿವಾರ ನಗರಕ್ಕೆ ಆಗಮಿಸಿದ್ದ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಮೆಗಾ ಮಾರುಕಟ್ಟೆ ಯೋಜನೆ ಬೇಗ ಆರಂಭಿಸುವAತೆ ಕೋರಿದರು. ಈ ವೇಳೆ ಸಚಿವರ ಜೊತೆ ಶಾಸಕ ಉಮೇಶ ಮೇಟಿ ಅವರನ್ನು ಸನ್ಮಾನಿಸಿದರು. ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಸಂಘದ ಪದಾಽಕಾರಿಗಳು ಇದ್ದರು. 
ಬಾಗಲಕೋಟೆ

ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎನ್ನುವುದು ಸುಳ್ಳು

ಬಾಗಲಕೋಟೆ: ರಾಜ್ಯದಲ್ಲಿ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಗೊಂದಲದಿAದ ಅಽಕಾರಿಗಳು ಕೆಲಸ ಮಾಡುತ್ತಿಲ್ಲ. ಸಚಿವರು, ಶಾಸಕರ ಮಾತು ಕೇಳುತ್ತಿಲ್ಲ ಎನ್ನುವ ಮಾಹಿತಿ ಎಲ್ಲವೂ ಸುಳ್ಳು. ಹಾಗೆ ಮಾಡಲು ಆಗಲ್ಲ. ಅಽಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಅವರು, -ೆÊಲ್‌ಗಳಿಗೆ ಸಹಿ ಆಗುತ್ತಿವೆ. ಅಭಿವೃದ್ಧಿ ಕೆಲಸಗಳು ನಡೆದಿವೆ. ನಾವು ಕೆಲಸ ಮಾಡಿದರೆ ಅವು ಕ್ಲಿಯರ್ ಆಗಿ ಮುಂದೆ ಹೋಗುತ್ತವೆ. -ÉÊಲ್‌ಗಳನ್ನು ತರಿಸಿ, ಸಹಿ ಮಾಡಿ ಕಳುಹಿಸುತ್ತಿದ್ದೇವೆ ಎಂದು ತಿಳಿಸಿದರು.
ಸಿಎಂ ಸ್ಥಾನದ ಕಗ್ಗಂಟಿನ ಬಗ್ಗೆ ಪ್ರಶ್ನಿಸಿದಾಗ, ಅದನ್ನೆಲ್ಲ ನಾವು ಹೇಳುವುದಿಲ್ಲ. ಅದು ಯಾವಾಗ ಎಂದು ಅವರೇ ಹೇಳಬೇಕು. ಅದು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸರಿ ಆಗಬೇಕು ಎನ್ನುವುದಷ್ಟೆ ನಮ್ಮ ಮನವಿ. ಹೇಗೆ ಮಾಡುತ್ತಾರೋ, ಬಿಡುತ್ತಾರೋ ದೆಹಲಿ ಅವರಿಗೆ ಬಿಟ್ಟಿದ್ದು. ನಾನು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಯಾವುದಕ್ಕೂ ಆಕಾಂಕ್ಷಿ ಅಲ್ಲ ಎಂದು ಪದೇ ಪದೇ ಹೇಳಿದ್ದೇನೆ. ಅದನ್ನೆ ಮತ್ತೆ ಮತ್ತೆ ಹೇಳುವ ಅಗತ್ಯ ಇಲ್ಲ ಎಂದರು.
ಸಿಎA ಸ್ಥಾನದಲ್ಲಿ ತಮ್ಮ ಹೆಸರು ಓಡಾಡುತ್ತಿದೆ ಎಂದರೆ ಅದು ನಮ್ಮ ಅಭಿಮಾನಿಗಳು, ನಮಗೆ ಬೇಕಾದವರು ಹೇಳಿಯೇ ಹೇಳುತ್ತಾರೆ. ಅವರ ನಾಯಕರು ಸಿಎಂ ಆಗಬೇಕು ಎಂದು ಆಸೆ ಪಟ್ಟಿರುತ್ತಾರೆ. ನಮ್ಮ ಕೈಯಲ್ಲಿ ಯಾವುದೂ ಇಲ್ಲ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅವರಿಗೆ ಯಾವುದು ಒಳ್ಳೆಯದು ಅನ್ನಿಸುತ್ತೋ ಅದನ್ನು ಮಾಡುತ್ತಾರೆ ಎಂದು ಹೇಳಿದ ಅವರು, ಸಂಪುಟ ವಿಸ್ತರಣೆ, ಪುನರ್ ರಚನೆ ಯಾವುದೂ ನಮ್ಮ ವ್ಯಾಪ್ತಿಗೆ ಬರಲ್ಲ. ವರಿಷ್ಠರಿಗೆ ಬಿಟ್ಟಿದ್ದು. ಅದಕ್ಕೇನು ಮಾನದಂಡ ಇದೆ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.